ETV Bharat / business

ನಿಲ್ದಾಣಗಳಲ್ಲಿ ಚೆಕ್​ ಇನ್ ಇಚ್ಛಿಸುವವರಿಗೆ​ 100 ರೂ. ಸೇವಾ ಶುಲ್ಕ ವಿಧಿಸಿದ ಇಂಡಿಗೊ! - ಚೆಕ್ ಇನ್ ಶುಲ್ಕ ಪರಿಚಯಿಸಿದ ಇಂಡಿಗೊ

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ವಿಮಾನ ನಿಲ್ದಾಣದಲ್ಲಿ ಟಚ್ ಪಾಯಿಂಟ್‌ ತಗ್ಗಿಸಲು ವಿಮಾನಯಾನ ಸಚಿವಾಲಯವು ಮೇ ತಿಂಗಳಲ್ಲಿ ಪ್ರಯಾಣಿಕರಿಗೆ ವೆಬ್ ಚೆಕ್-ಇನ್ ಕಡ್ಡಾಯಗೊಳಿಸಿತ್ತು. ವೆಬ್ ಚೆಕ್-ಇನ್ ಬಳಿಕ ಆನ್‌ಲೈನ್ ಬೋರ್ಡಿಂಗ್ ಪಾಸ್ ಅನ್ನು ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ನೀಡುತ್ತದೆ.

IndiGo
ಇಂಡಿಗೊ
author img

By

Published : Oct 17, 2020, 9:16 PM IST

ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯು ಶನಿವಾರದಿಂದ ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್-ಇನ್ ಆಗ ಬಯಸುವ ಪ್ರಯಾಣಿಕರಿಗೆ 100 ರೂ. ಸೇವಾ ಶುಲ್ಕ ವಿಧಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ವಿಮಾನ ನಿಲ್ದಾಣದಲ್ಲಿ ಟಚ್ ಪಾಯಿಂಟ್‌ ತಗ್ಗಿಸಲು ವಿಮಾನಯಾನ ಸಚಿವಾಲಯವು ಮೇ ತಿಂಗಳಲ್ಲಿ ಪ್ರಯಾಣಿಕರಿಗೆ ವೆಬ್ ಚೆಕ್ - ಇನ್ ಕಡ್ಡಾಯಗೊಳಿಸಿತ್ತು. ವೆಬ್ ಚೆಕ್-ಇನ್ ಬಳಿಕ ಆನ್‌ಲೈನ್ ಬೋರ್ಡಿಂಗ್ ಪಾಸ್ ಅನ್ನು ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ನೀಡುತ್ತದೆ.

ಇಂಡಿಗೊ, 2020ರ ಅಕ್ಟೋಬರ್ 17ರಿಂದ ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್ - ಇನ್ ಮಾಡ ಬಯಸುವವರಿಗೆ 100 ರೂ. ಸೇವಾ ಶುಲ್ಕ ಪರಿಚಯಿಸಿದೆ ಎಂದು ಹೇಳಿಕೆ ತಿಳಿಸಿದೆ.

ನಮ್ಮ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಬಳಸಿ ಸರ್ಕಾರದ ನಿರ್ದೇಶನದಂತೆ ಎಲ್ಲ ಪ್ರಯಾಣಿಕರನ್ನು ವೆಬ್ ಚೆಕ್-ಇನ್​ಗೆ ನಾವು ಪ್ರೋತ್ಸಾಹಿಸುತ್ತೇವೆ. ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿನ ಚೆಕ್-ಇನ್ ಮಾಡಲು ಇಚ್ಛಿಸುವವರಿಗೆ ಈ ಶುಲ್ಕವು ಎಲ್ಲ ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

ಕಡಿಮೆ ವೆಚ್ಚದ ವಾಹಕವು ತನ್ನ ಗ್ರಾಹಕರಿಗೆ ಸಂಪರ್ಕವಿಲ್ಲದ ಮತ್ತು ತೊಂದರೆಯಿಲ್ಲದ ಪ್ರಯಾಣದ ಅನುಭವಕ್ಕೆ ಎಲ್ಲ ವಿಧದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.