ನವದೆಹಲಿ: ಕೊರೊನಾ ವೈರಸ್ ಪ್ರೇರೇಪಿತ ನಿರ್ಬಂಧಿತ ಪ್ರಯಾಣ ಮುಂದುವರೆದಂತೆ ಇಂಡಿಗೋದ ಮೂಲ ಸಂಸ್ಥೆಯಾದ ಇಂಟರ್ ಗ್ಲೋಬ್ ಏವಿಯೇಷನ್ನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,194.8 ಕೋಟಿ ರೂ.ಗಳ ನಿವ್ವಳ ನಷ್ಟ ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 1,062 ಕೋಟಿ ರೂ. ನಷ್ಟ ಕಂಡಿತ್ತು.
ನಿಧಾನವಾಗಿ ಆದರೂ ಖಂಡಿತವಾಗಿಯೂ ಸಾಮಾನ್ಯ ಸಾಮರ್ಥ್ಯಕ್ಕೆ ಮರಳುತ್ತಿದ್ದೇವೆ ಎಂಬುದು ನಮಗೆ ಸಂತೋಷವಾಗಿದೆ. ಈಗಿನ ಬಿಕ್ಕಟ್ಟನ್ನು ನಿರ್ವಹಿಸುವತ್ತ ನಾವು ಹೆಚ್ಚು ಗಮನಹರಿಸಿದ್ದರೂ ಭವಿಷ್ಯದ ಭರವಸೆಯನ್ನು ಸಹ ನಾವು ಮರುರೂಪಿಸುತ್ತಿದ್ದೇವೆ ಎಂದು ಸಿಇಒ ರೊಂಜೋಯ್ ದತ್ತು ಹೇಳಿದರು.
100 ಪ್ರತಿಶತದಷ್ಟು ಸಾಮರ್ಥ್ಯಕ್ಕೆ ಮರಳಿದ ನಂತರ ಕಡಿಮೆ ವೆಚ್ಚ, ಬಲವಾದ ಸೇವಾ, ಪರಿಣಾಮಕಾರಿಯಾದ ಹಾರಾಟ ಮತ್ತು ದೃಢವಾದ ಜಾಲ ಹೊಂದಲಿದ್ದೇವೆ ಎಂದಿದ್ದಾರೆ.
ಇಂಡಿಗೋದ ಒಟ್ಟು ಆದಾಯವು ಶೇ 64.50ರಷ್ಟು ಇಳಿಕೆಯಾಗಿ 3,029.2 ಕೋಟಿ ರೂ.ಗೆ ತಲುಪಿದೆ. ಇಬಿಐಟಿಡಿಎಆರ್ (ಬಡ್ಡಿ, ತೆರಿಗೆ, ಸವಕಳಿ, ಭೋಗ್ಯ ಮತ್ತು ಬಾಡಿಗೆ ಮುನ್ನ ಗಳಿಕೆ) ಶೇ 59.30ರಷ್ಟು ಹೆಚ್ಚಳಗೊಂಡು 408.50 ಕೋಟಿ ರೂ. ತಲುಪಿದೆ.
ತ್ರೈಮಾಸಿಕದಲ್ಲಿ ಪ್ರಯಾಣಿಕರ ಟಿಕೆಟ್ ಆದಾಯವು 2,208.2 ಕೋಟಿ ರೂ., ಶೇ 68.9ರಷ್ಟು ಇಳಿಕೆಯಾಗಿದೆ, ಪೂರಕ ಆದಾಯವು 506.6 ಕೋಟಿಗಳಷ್ಟಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 45.5ರಷ್ಟು ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.