ETV Bharat / business

ಕಾರು ಉತ್ಪಾದನೆ ನಿಲ್ಲಿಸಿ ಆಕ್ಸಿಜನ್​ನತ್ತ ಹೊರಳಿದ ಮಾರುತಿ ಸುಜುಕಿ! - ಆಮ್ಲಜನಕ ಉತ್ಪಾದನೆ

ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಳೆದ ಮೂರು ದಿನಗಳ ಆರ್ಡರ್​ಗಳಲ್ಲಿ ಶೇ 5ರಷ್ಟು ಕುಸಿತ ಕಂಡಿದೆ. ಕೊರೊನಾ ಸಾಂಕ್ರಾಮಿಕವು ಭವಿಷ್ಯದಲ್ಲಿ ಬೇಡಿಕೆಗೆ ದೊಡ್ಡ ಹೊಡೆತ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ವೈದ್ಯಕೀಯ ಆಮ್ಲಜನಕವನ್ನು ಇತರ ಉದ್ದೇಶಗಳಿಗೆ ಬಳಸಬಾರದು ಎಂದು ಸರ್ಕಾರ ಈಗಾಗಲೇ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕಾರು ತಯಾರಕರು ತಾತ್ಕಾಲಿಕವಾಗಿ ಆಕ್ಸಿಜನ್​​ ಉತ್ಪಾದನೆಯತ್ತ ಮುಖಮಾಡಿದ್ದಾರೆ.

Car
Car
author img

By

Published : May 4, 2021, 7:52 PM IST

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶೀಯ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಅದರ ಉತ್ಪಾದನಾ ಸಾಮರ್ಥ್ಯದಲ್ಲಿ ಬದಲಾವಣೆ ಮಾಡಲು ತೀರ್ಮಾನಿಸಿದೆ.

ದೇಶದಲ್ಲಿನ ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸಲು ಕೆಲವು ಪ್ಲಾಂಟ್​ಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿದೆ. ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್‌ಗಳು ಮತ್ತು ಕರ್ಫ್ಯೂ ಹೇರಿರುವುದು ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಸಿ.ಭಾರ್ಗವ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.

ಬಹುತೇಕ ಅರ್ಧಕ್ಕಿಂತ ಹೆಚ್ಚಿನ ಪ್ಲಾಂಟ್​ಗಳನ್ನು ಮುಚ್ಚಲಾಯಿತು. ಶೇ 50ರಿಂದ 60ರಷ್ಟು ಸಾಮರ್ಥ್ಯದಲ್ಲಿ ಕಾರುಗಳನ್ನು ಉತ್ಪಾದಿಸುವ ಸ್ಥಿತಿಯಲ್ಲಿ ನಾವು ಇನ್ನೂ ಇದ್ದೇವೆ ಎಂದರು.

ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಳೆದ ಮೂರು ದಿನಗಳ ಆರ್ಡರ್​ಗಳಲ್ಲಿ ಶೇ 5ರಷ್ಟು ಕುಸಿತ ಕಂಡಿದೆ. ಕೊರೊನಾ ಸಾಂಕ್ರಾಮಿಕವು ಭವಿಷ್ಯದಲ್ಲಿ ಬೇಡಿಕೆಗೆ ದೊಡ್ಡ ಹೊಡೆತ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ವೈದ್ಯಕೀಯ ಆಮ್ಲಜನಕವನ್ನು ಇತರ ಉದ್ದೇಶಗಳಿಗೆ ಬಳಸಬಾರದು ಎಂದು ಸರ್ಕಾರ ಈಗಾಗಲೇ ಆದೇಶಿಸಿದೆ. ಇದನ್ನು ಕಾರು ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸದಿದ್ದರೂ, ಬಿಡಿಭಾಗಗಳ ಕಂಪನಿಗಳು ವ್ಯಾಪಕವಾಗಿ ಬಳಸುತ್ತವೆ.

ಕೋವಿಡ್ ಪ್ರಕರಣಗಳ ಮತ್ತೊಂದು ಆಟೋ ದೈತ್ಯ ಹೀರೋ ಮೋಟಾರ್ಸ್ ಕಳೆದ ತಿಂಗಳು ತನ್ನ ಎಲ್ಲಾ ಉತ್ಪಾದನಾ ಘಟಕಗಳಲ್ಲಿನ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಅಶೋಕ್ ಲೇಲ್ಯಾಂಡ್ ಕೂಡ ಉತ್ಪಾದನೆಯನ್ನು ಕಡಿಮೆ ಮಾಡಿತು. ಇದು ಮೇ ತಿಂಗಳಲ್ಲಿ ಕೇವಲ 7 ರಿಂದ 15 ದಿನ ಉತ್ಪಾದಿಸುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.