ಲಂಡನ್: ನಾನಾ ರಾಷ್ಟ್ರೀಯ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೇ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಇಂಗ್ಲೆಂಡ್ ಹೈಕೋರ್ಟ್ನಲ್ಲಿ ಮತ್ತೊಂದು ಹಿನ್ನಡೆಯಾಗಿದೆ.
ವಿಜಯ್ ಮಲ್ಯ ತನ್ನ ಆಸ್ತಿ ಮಾಲೀಕತ್ವದ ವಿವರಗಳನ್ನು ಭಾರತೀಯ ಬ್ಯಾಂಕ್ಗಳಿಗೆ ನೀಡುವಂತೆ ಇಂಗ್ಲೆಂಡ್ ಹೈಕೋರ್ಟ್ ಆದೇಶಿಸಿದೆ. ಈ ಮೂಲಕ ಭಾರತೀಯ ಬ್ಯಾಂಕ್ಗಳು ಸಲ್ಲಿಸಿದ್ದ ಮಾಲೀಕತ್ವ ಅರ್ಜಿಗೆ ಜಯ ಸಿಕ್ಕಂತಾಗಿದೆ.
ಎರಡು ಐಷರಾಮಿ ಹಡಗು, ಕ್ರೀಡಾ ತಂಡಗಳ ಮಾಲೀಕತ್ವ, ಹಲವು ಅಘೋಷಿತ ಉನ್ನತ ಮೌಲ್ಯದ ವಿಂಟೇಜ್ ಕಾರುಗಳು, ಅಮೂಲ್ಯವಾದ ವರ್ಣಚಿತ್ರಗಳು ಮತ್ತು ಈ ಹಿಂದೆ ಎಲ್ಟನ್ ಜಾನ್ ಒಡೆತನದಲ್ಲಿದ ಪಿಯಾನೋ ಸೇರಿದಂತೆ ವಿವಾದಾಸ್ಪದ ಸ್ವತ್ತುಗಳು ಇದರಲ್ಲಿ ಸೇರಿವೆ.
ಹೈಕೋರ್ಟ್‌ನ ಕಮರ್ಷಿಯಲ್ ವಿಭಾಗೀಯ ನ್ಯಾಯಮೂರ್ತಿ ರಾಬಿನ್ ನೋಲ್ಸ್ ಅವರಿದ್ದ ಪೀಠವು, ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ಮಲ್ಯ ಅವರಿಗೆ ಸಂಬಂಧಿಸಿದ ನೈಜ ಸ್ವತ್ತುಗಳ ಮಾಲೀಕತ್ವದ ದಾಖಲೆಗಳನ್ನು ಪಡೆಯಬಹುದೆಂದು ತಿಳಿಸಿದೆ.