ETV Bharat / business

ಕೊರೊನಾ ಅವಾಂತರ: ಐಬಿಎಂನಿಂದ ಸಾವಿರಾರು ಉದ್ಯೋಗಿಗಳ ವಜಾ - ಐಬಿಎಂ

57 ವರ್ಷದ ಅರವಿಂದ ಕೃಷ್ಣ ಅವರು ಐಬಿಎಂ ಕಂಪನಿಯ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್‌ವೇರ್‌ನ ಹಿರಿಯ ಉಪಾಧ್ಯಕ್ಷರಾದ ಬಳಿಕ ಏಪ್ರಿಲ್‌ 6ರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಆಡಳಿತಾವಧಿಯ ಮೊದಲ ಬಾರಿಗೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯು ಶುಕ್ರವಾರ ತಡರಾತ್ರಿ ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯಲ್ಲಿ ಲೇ ಆಫ್‌ಗಳನ್ನು ದೃಢಪಡಿಸಿದೆ.

IBM lays off
ಐಬಿಎಂ
author img

By

Published : May 23, 2020, 5:18 PM IST

ಸ್ಯಾನ್ ಫ್ರಾನ್ಸಿಸ್ಕೋ: ಅರವಿಂದ ಕೃಷ್ಣ ನೇತೃತ್ವದ ಟೆಕ್ ದೈತ್ಯ ಐಬಿಎಂ, ಕೋವಿಡ್ -19 ಹೊಡತಕ್ಕೆ ಸಿಲುಕಿ ಬಾರಿ ಸಂಖ್ಯೆಯ ನೌಕರರನ್ನು ವಜಾ ಮಾಡಲು ಪ್ರಾರಂಭಿಸಿದೆ.

57 ವರ್ಷದ ಅರವಿಂದ ಕೃಷ್ಣ ಅವರು ಐಬಿಎಂ ಕಂಪನಿಯ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್‌ವೇರ್‌ನ ಹಿರಿಯ ಉಪಾಧ್ಯಕ್ಷರಾದ ಬಳಿಕ ಏಪ್ರಿಲ್‌ 6ರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಆಡಳಿತಾವಧಿಯ ಮೊದಲ ಬಾರಿಗೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯು ಶುಕ್ರವಾರ ತಡರಾತ್ರಿ ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯಲ್ಲಿ ಲೇ ಆಫ್‌ಗಳನ್ನು ದೃಢಪಡಿಸಿದೆ.

ಈ ವ್ಯವಹಾರಿಕ ನಿರ್ಧಾರವು ನಮ್ಮಲ್ಲಿನ ಕೆಲವು ಉದ್ಯೋಗಿಗಳಿಗೆ ಸೃಷ್ಟಿಸಬಹುದಾದ ಕಷ್ಟಕರ ಪರಿಸ್ಥಿತಿಯನ್ನು ಗುರುತಿಸಿ, ಐಬಿಎಂ 2021ರ ಜೂನ್ ಒಳಗೆ ವಜಾಗೊಳ್ಳುವ ಅಮೆರಿಕದ ಉದ್ಯೋಗಿಗಳಿಗೆ ಸಬ್ಸಿಡಿಯ ವೈದ್ಯಕೀಯ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಐಬಿಎಂನ ಕಾರ್ಯಪಡೆಯ ನಿರ್ಧಾರಗಳು ವ್ಯವಹಾರದ ದೀರ್ಘಕಾಲೀನ ಆರೋಗ್ಯದ ಹಿತದೃಷ್ಟಿಯಿಂದ ಕೂಡಿರುತ್ತವೆ. ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯದ ಕೌಶಲ್ಯಗಳನ್ನು ನಿರಂತರವಾಗಿ ಮರುಹೊಂದಾಣಿಕೆ ಮಾಡಲು ನಮ್ಯತೆ ಬೇಕಾಗುತ್ತದೆ ಎಂದು ಕಡಿತಕ್ಕೆ ಸ್ಪಷ್ಟನೆ ನೀಡಿದೆ.

ಹೆವ್ಲೆಟ್-ಪ್ಯಾಕರ್ಡ್ ಎಂಟರ್‌ಪ್ರೈಸ್ (ಎಚ್‌ಪಿಇ) ಮತ್ತು ಐಬಿಎಂ ಎರಡೂ ವೇತನ ಕಡಿತ ಮತ್ತು ನೌಕರರ ವಜಾ ಸೇರಿದಂತೆ ಗಮನಾರ್ಹವಾದ ವೆಚ್ಚ ಕಡಿತ ಕ್ರಮಗಳನ್ನು ಘೋಷಿಸಿವೆ ಎಂದು ಆರ್ಸ್ ಟೆಕ್ನಿಕಾ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.