ನವದೆಹಲಿ: ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಕಾರುಗಳ ದರ ಏರಿಕೆಯ ಬಳಿಕ ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾದ ಹ್ಯುಂಡೈ, ತನ್ನ ವಿವಿಧ ಶ್ರೇಣಿಯ ಕಾರುಗಳ ಬೆಲೆ ವರ್ಧಿಸಲು ನಿರ್ಧರಿಸಿದೆ.
ಕಚ್ಚಾ ಸರಕು ಆಮದು ಮತ್ತು ತಯಾರಿಕಾ ವೆಚ್ಚ ಏರಿಕೆ ಆಗುತ್ತಿರುವುದರಿಂದ ಎಲ್ಲ ಶ್ರೇಣಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತಿಳಿಸಿದೆ.
ವಿವಿಧ ಮಾದರಿಗಳ ಮತ್ತು ಇಂಧನ ಪ್ರಕಾರಗಳಿಗೆ ಅನುಗುಣವಾಗಿ ಕಾರುಗಳು ದರ ಏರಿಕೆಯ ವ್ಯಾಪ್ತಿಗೆ ಬರಲಿವೆ. ಇನ್ಪುಟ್ ಮತ್ತು ಸರಕು ಮೌಲ್ಯದಲ್ಲಿನ ಹೆಚ್ಚಳದಿಂದಾಗಿ ನಮ್ಮ ಉತ್ಪನ್ನಗಳ ಏರಿಕೆಯು ಅನಿವಾರ್ಯವಾಗಿ ಹೆಚ್ಚಿಸಬೇಕಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ, ಕಾರುಗಳು ಎಷ್ಟು ದರದಲ್ಲಿ ಹೆಚ್ಚಳವಾಗಲಿವೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಈ ತಿಂಗಳ ಕೊನೆಯಲ್ಲಿ ಬೆಲೆ ಏರಿಕೆಯ ವಿವರಗಳನ್ನು ಹಂಚಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.