ETV Bharat / business

ಐಸಿಐಸಿಐ-ಹ್ಯುಂಡೈ ಒಪ್ಪಂದ: 'ಕ್ಲಿಕ್​ ಟು ಬೈ'ನಲ್ಲಿ ಕಾರು ಖರೀದಿಗೆ ಶೇ 100% ಆನ್​ರೋಡ್ ಸಾಲ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಐಸಿಐಸಿಐ ಬ್ಯಾಂಕ್​ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ 'ಕ್ಲಿಕ್ ಟು ಬೈ' ಮೂಲಕ ಆನ್‌ಲೈನ್ ಕಾರು ಖರೀದಿಗೆ ಹಣಕಾಸಿನ ಆಯ್ಕೆಗಳನ್ನು ಒದಗಿಸಿದೆ. ಇದರಿಂದ ಸಂಪರ್ಕರಹಿತ, ಸುಲಭವಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ICICI Bank
ಐಸಿಐಸಿ ಬ್ಯಾಂಕ್
author img

By

Published : Jun 22, 2020, 11:29 PM IST

ಮುಂಬೈ: ಹ್ಯುಂಡೈ ಮೋಟರ್ ಇಂಡಿಯಾ ತನ್ನ ಗ್ರಾಹಕರಿಗೆ ವಾಹನಗಳ ಖರೀದಿಗೆ ಆನ್‌ಲೈನ್ ಚಿಲ್ಲರೆ ಹಣಕಾಸು ಸೇವೆ ಒದಗಿಸಲು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ 'ಕ್ಲಿಕ್ ಟು ಬೈ' ಮೂಲಕ ಆನ್‌ಲೈನ್ ಕಾರು ಖರೀದಿಗೆ ಹಣಕಾಸಿನ ಆಯ್ಕೆಗಳನ್ನು ಒದಗಿಸಿದೆ. ಇದರಿಂದ ಸಂಪರ್ಕರಹಿತ, ಸುಲಭವಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕ್ಲಿಕ್ ಟು ಬೈ ಆನ್‌ಲೈನ್ ಪ್ಲಾಟ್​ಫಾರ್ಮ್​ ಮೂಲಕ ಕಾರು ಖರೀದಿ ಪೋರ್ಟಲ್ ಅನ್ನು ಹ್ಯುಂಡೈ ಪರಿಚಯಿಸುತ್ತಿದೆ. ಐಸಿಐಸಿಐ ಬ್ಯಾಂಕ್‌ ಜತೆಗಿನ ಸಹಭಾಗಿತ್ವದ ಮೂಲಕ ದೂರದಲ್ಲಿನ ಗ್ರಾಹಕರನ್ನು ತಲುಪಲಿದ್ದೇವೆ. ಖರೀದಿ ಪ್ರಕ್ರಿಯಿಯೆನ್ನು ಇನ್ನಷ್ಟು ಬಲಪಡಿಸಿ ಉತ್ಪಾದಕ ಮತ್ತು ಹಣಕಾಸು ವ್ಯವಹಾರಗಳೊಂದಿಗೆ ನೈಜ ಸಮಯದ ವಹಿವಾಟು ಸಕ್ರಿಯಗೊಳಿಸುತ್ತಿದ್ದೇವೆ ಎಂದಿದೆ.

ಕ್ಲಿಕ್‌ ಟು ಬೈ ಮೂಲಕ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ನೊಂದಿಗಿನ ಪಾಲುದಾರಿಕೆಯಿಂದ ಗ್ರಾಹಕರು ಯಾವುದೇ ಸ್ಥಳದಲ್ಲಿದ್ದರೂ ಸುಲಭವಾಗಿ ಹಣಕಾಸಿನ ನೆರವು ಪಡೆದುಕೊಳ್ಳಬಹುದು. ಬ್ಯಾಂಕ್‌ನಿಂದ ಮುಂಚಿತವಾಗಿ ಒಪ್ಪಿಗೆ ಪಡೆದುಕೊಂಡ ಗ್ರಾಹಕರು ಕ್ಲಿಕ್‌ ಟು ಬೈ ಮೂಲಕ ನೇರವಾಗಿ ಕಾರ್‌ ಖರೀದಿ ಸಾಲಕ್ಕೆ ಮನವಿ ಸಲ್ಲಿಸಬಹುದು. ಬ್ಯಾಂಕ್‌ ಶಾಖೆಗೆ ಭೇಟಿ ನೀಡದೆ ಸಾಲ ಪಡೆಯಬಹುದು. ಶೇ 100ರಷ್ಟು ಆನ್‌ರೋಡ್‌ ಸಾಲ ದೊರೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.