ನವದೆಹಲಿ: ಸಂಚಾರ ಮಾರ್ಗ ಮತ್ತು ಪಾರ್ಸೆಲ್ ರೈಲುಗಳನ್ನು ಗುತ್ತಿಗೆಗೆ ನೀಡಲು ಸಚಿವಾಲಯ ಸಿದ್ಧ ಇರುವುದರಿಂದ ಈ ವಲಯದಲ್ಲಿ ಭಾರೀ ಅವಕಾಶಗಳು ಸೃಷ್ಟಿಯಾಗಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ರೈಲ್ವೆಯು ಪ್ರಯಾಣಿಕರ ಓಡಾಟಕ್ಕೆ 150 ಖಾಸಗಿ ರೈಲುಗಳ ಸೇವೆ ಪ್ರಾರಂಭಿಸಲಿದೆ. ಅದರಲ್ಲಿ ಭಾಗವಹಿಸಲು ಖಾಸಗಿ ವಲಯವನ್ನು ಆಹ್ವಾನಿಸಿದೆ. ಖಾಸಗಿ ವಲಯ ಲಕ್ಷಾಂತರ ವಿಧದಲ್ಲಿ ಬೆಂಬಲಿಸಬಲ್ಲದು. ನಾನು ಹೊಸ ಮಾರ್ಗಗಳನ್ನು ಗುತ್ತಿಗೆಗೆ ನೀಡಲಿದ್ದೇನೆ. ನೀವು (ಖಾಸಗಿ ಹೂಡಿಕೆದಾರರು) ರೈಲು ಸೇವೆ ನೀಡಲು ನಿಮ್ಮದೇ ಆದ ಬಯಸುವ ಮಾರ್ಗ (ಎಲ್ಲಿ) ಗುರುತಿಸುತ್ತೀರಿ ಎಂದು ಸಚಿವರು ಕೇಳಿದ್ದಾರೆ.
ನಿಮಗೆ ಬೇಕಾದರೆ ಹೊಸ ಮಾರ್ಗಗಳಲ್ಲಿ ಹೂಡಿಕೆ ಮಾಡಲು ನಾವು ಸಿದ್ಧರಿದ್ದೇವೆ. ಸಂಚಾರ ಮಾರ್ಗಗಳು ಮತ್ತು ಪಾರ್ಸೆಲ್ ರೈಲುಗಳನ್ನು ಗುತ್ತಿಗೆ ನೀಡಲು ನಾವು ತಯಾರಿದ್ದೇವೆ. ಇದರಿಂದ ಖಾಸಗಿ ವಲಯಕ್ಕೆ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತವೆ ಸಿಐಐ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಗೋಯಲ್ ಹೇಳಿದ್ದಾರೆ.