ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಕಳೆದ ವರ್ಷ ಪ್ರಾರಂಭಿಸಿದ ಉತ್ಪನ್ನಗಳಲ್ಲಿ ದೋಷಯುಕ್ತ ಇಂಧನ ಪಂಪ್ ಬದಲಿಸಲು ಭಾರತದಲ್ಲಿನ 77,954 ಯುನಿಟ್ ಆಯ್ದ ಮಾದರಿಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಿದೆ.
ಈ ವಾಹನಗಳಲ್ಲಿ ಅಳವಡಿಸಲಾಗಿರುವ ಇಂಧನ ಪಂಪ್‌ಗಳು ದೋಷ ಹೊಂದಿರಬಹುದು. ಮುಂದೆ ಅದು ಇಂಜಿನ್ ಚಾಲನೆಗೆ ಅಡೆಚಣೆ ಮಾಡಬಹುದು. ಹೀಗಾಗಿ, ಪಂಪ್ನಲ್ಲಿನ ದೋಷ ಸರಿಪಡಿಸಲು ಕಾರು ಮರುಪಡೆಯುಕ್ಕೆ ಕೈಗೊಳ್ಳಲಾಗಿದೆ ಎಂದು ಎಚ್‌ಸಿಐಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಿವಿಕ್‌ನ 5,170 ಯುನಿಟ್‌ಗಳು 2019ರ ಜನವರಿ - ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬಂದಿದ್ದವು. 2019ರ ಜನವರಿ ಮತ್ತು ಅಕ್ಟೋಬರ್ ನಡುವೆ ಉತ್ಪಾದಿಸಲಾದ 1,737 ಯುನಿಟ್ ಬಿಆರ್-ವಿ ಮತ್ತು 2019ರ ಜನವರಿ ಮತ್ತು 2020ರ ಸೆಪ್ಟೆಂಬರ್ ನಡುವೆ ತಯಾರಿಸಿದ 607 ಯುನಿಟ್ ಸಿಆರ್‌ವಿ ಸಹ ಮರುಪಡೆಯಲಾಗುತ್ತಿದೆ.
2021ರ ಏಪ್ರಿಲ್ 17ರಿಂದ ಹಂತಹಂತವಾಗಿ ಭಾರತದಾದ್ಯಂತದ ಎಚ್‌ಸಿಐಎಲ್ ಮಾರಾಟಗಾರರಲ್ಲಿ ಬದಲಿ ಪ್ರಕ್ರಿಯೆ ಉಚಿತವಾಗಿ ನಡೆಸಲಾಗುವುದು. ಮಾಲೀಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಹಿಂಪಡೆಯುವಿಕೆ ಮಾದರಿಗಳಲ್ಲಿ ಅಮೇಜ್, 4ನೇ ಜನ್ ಸಿಟಿ, ಡಬ್ಲ್ಯುಆರ್-ವಿ, ಜಾಝ್, ಸಿವಿಕ್, ಬಿಆರ್-ವಿ ಮತ್ತು ಸಿಆರ್‌ವಿ ಒಳಗೊಂಡಿದ್ದು, 2019ರ ಜನವರಿ ಮತ್ತು 2020ರ ಸೆಪ್ಟೆಂಬರ್ ನಡುವೆ ತಯಾರಿಸಲಾಗಿದೆ.
2019ರ ಜನವರಿ-ಆಗಸ್ಟ್ ನಡುವೆ ತಯಾರಾದ 36,086 ಯುನಿಟ್ ಅಮೇಜ್ ಮತ್ತು 2019ರ ಜನವರಿ-ಸೆಪ್ಟೆಂಬರ್ ನಡುವೆ ಉತ್ಪಾದಿಸಲಾದ 4ನೇ ಜನ್ ಸಿಟಿಯ 20,248 ಯುನಿಟ್‌ಗಳನ್ನು ಮರುಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ.
2019ರ ಜನವರಿ - ಆಗಸ್ಟ್ ನಡುವೆ ತಯಾರಾದ ಡಬ್ಲ್ಯುಆರ್-ವಿ 7,871 ಮತ್ತು 6,235 ಯುನಿಟ್ ಜಾಝ್ ಸಹ ಒಳಗೊಂಡಿವೆ.
ಕಳೆದ ವರ್ಷ ಜೂನ್‌ನಲ್ಲಿ ಕಂಪನಿಯು ದೋಷಯುಕ್ತ ಇಂಧನ ಪಂಪ್‌ಗಳನ್ನು ಬದಲಿಸಲು 2018ರಲ್ಲಿ ಉತ್ಪಾದಿಸಿದ ಅಮೇಜ್, ಸಿಟಿ ಮತ್ತು ಜಾಜ್ ಸೇರಿದಂತೆ ವಿವಿಧ ಮಾದರಿಗಳ 65,651 ಯುನಿಟ್‌ಗಳನ್ನು ಮರುಪಡೆದಿತ್ತು.