ETV Bharat / business

ಏಷ್ಯಾದ ಶ್ರೇಷ್ಠ ಡಿಜಿಟಲ್​ ಬ್ಯಾಂಕ್​ಗೆ ಸರ್ವರ್ ತಂದಿಟ್ಟ ಪಜೀತಿ.. 2 ದಿನದಿಂದ ಗ್ರಾಹಕ ಕಂಗಾಲು.. - technical snag in HDFC

ಗ್ರಾಹಕರು ಸತತ ಎರಡೂ ದಿನದಿಂದ ಬ್ಯಾಂಕಿನ ಮೊಬೈಲ್ ಆ್ಯಪ್​ ಬಳಸಲು ಆಗದೆ ಪರದಾಡಿದ್ದಾರೆ. ಡಿಸೆಂಬರ್ 2ರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಣಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸರಿಯಾದ ಮಾಹಿತಿ ನೀಡದ ಕಾರಣ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

HDFC Bank
ಎಚ್​ಡಿಎಫ್​ಸಿ ಬ್ಯಾಂಕ್
author img

By

Published : Dec 3, 2019, 1:21 PM IST

ನವದೆಹಲಿ: ಖಾಸಗಿ ವಲಯದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಹೆಚ್​ಡಿಎಫ್​ಸಿ ಬ್ಯಾಂಕ್​ ಗ್ರಾಹಕರು ಎರಡು ದಿನದಿಂದ ನೆಟ್​ ಡೌನ್​ನ ತಾಂತ್ರಿಕ ದೋಷ ಎದುರಿಸುತ್ತಿದ್ದಾರೆ.

ಗ್ರಾಹಕರು ಸತತ ಎರಡೂ ದಿನದಿಂದ ಬ್ಯಾಂಕಿನ ಮೊಬೈಲ್ ಆ್ಯಪ್​ ಬಳಸಲು ಆಗದೆ ಪರದಾಡಿದ್ದಾರೆ. ಡಿಸೆಂಬರ್ 2ರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಣಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸರಿಯಾದ ಮಾಹಿತಿ ನೀಡದ ಕಾರಣ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಹೆಚ್​ಡಿಎಫ್​ಸಿ, ಸರ್ವರ್​ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ನಮ್ಮ ಗ್ರಾಹಕರಿಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಆ್ಯಪ್​​ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ನಮ್ಮ ತಾಂತ್ರಿಕ ಪರಿಣಿತರು ರಿಪೇರಿ ಕಾರ್ಯದಲ್ಲಿ ತೊಡಗಿದ್ದು, ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಗ್ರಾಹಕರಿಗೆ ಆಗಿರುವ ತೊಂದರೆ ಬಗ್ಗೆ ವಿಷಾದಿಸುತ್ತೇವೆ ಎಂದಿದ್ದಾರೆ.

2019ನೇ ಸಾಲಿನ ಏಷ್ಯಾಮನಿಯ ಶ್ರೇಷ್ಠ ಬ್ಯಾಂಕ್ ಪ್ರಶಸ್ತಿ, ಶ್ರೇಷ್ಠ ಡಿಜಿಟಲ್ ಬ್ಯಾಂಕ್ ಪ್ರಶಸ್ತಿಯನ್ನು ಗಳಿಸಿದ್ದು, ಈಗಿನ ಸೇವೆಯಲ್ಲಿ ಕಂಡುಬಂದ ಸಮಸ್ಯೆಯ ಬಗ್ಗೆ ಗ್ರಾಹಕರು ಕಿಡಿಕಾರಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.