ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಬಳಿಕ ಉಂಟಾದ ಆರ್ಥಿಕ ಅಡೆಚಣೆ ಕಾರಣ ಏರ್ ಇಂಡಿಯಾದ ಶೇ.100ರಷ್ಟು ಪಾಲನ್ನು ಖರೀದಿಸಲು ಸಲ್ಲಿಸುವ ಬಿಡ್ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇದೆ.
ಏರ್ ಇಂಡಿಯಾಕ್ಕೆ ಬಿಡ್ ಮಾಡುವ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ವಾಹಕದೊಂದಿಗೆ ಭಾರಿ ಸಾಲ ನಿರ್ಧರಿಸಲು ಸಂಭಾವ್ಯ ಹೂಡಿಕೆದಾರರಿಗೆ ಅವಕಾಶ ನೀಡಲಿದೆ. ಏರ್ ಇಂಡಿಯಾ ಖರೀದಿಯ ಬಿಡ್ ಮಾಡುವ ಗಡುವು ಅಕ್ಟೋಬರ್ 30ಕ್ಕೆ ಕೊನೆಗೊಳ್ಳುತ್ತದೆ.
ರಾಷ್ಟ್ರೀಯ ವಾಹಕದಲ್ಲಿ ತನ್ನ ಪಾಲು ಮಾರಾಟದ ಪ್ರಕ್ರಿಯೆಯನ್ನು ಜನವರಿ 27ರಂದು ಪ್ರಾರಂಭಿಸಲಾಯಿತು. ಬಿಡ್ ಸಲ್ಲಿಸಲು ಸರ್ಕಾರ ನೀಡಿದ ನಾಲ್ಕನೇ ವಿಸ್ತರಣೆಯಾಗಿದೆ. ಈಗ ಮತ್ತೊಂದು ಅವಧಿಯತ್ತ ಸಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗೆ ತಿದ್ದುಪಡಿ ತರಲು ಅನುಮೋದನೆ ನೀಡಿತ್ತು. ಏರ್ ಇಂಡಿಯಾದಲ್ಲಿ ಎನ್‌ಆರ್‌ಐಗಳು ಸ್ವಯಂಚಾಲಿತ ಮಾರ್ಗದಲ್ಲಿ ಶೇ 100ರ ವರೆಗಿನ ಎಫ್‌ಡಿಐಗಳನ್ನು ಅನುಮತಿಸುತ್ತದೆ.