ETV Bharat / business

ಭಾರತ್ ಪೆಟ್ರೋಲಿಯಂ ಮಾರಾಟಕ್ಕೆ ಬಿಡ್ ಆಹ್ವಾನಿಸಿದ ಕೇಂದ್ರ: ಜಸ್ಟ್​ ₹_____ಕೋಟಿಗೆ ಮಾರಾಟ

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಿಪಿಸಿಎಲ್‌ನ ಮಾರಾಟಕ್ಕೆ ಮೇ 2 ಒಳಗೆ ಬಿಡ್​ಗಳನ್ನು ಆಹ್ವಾನಿಸಿದೆ. ಬಿಪಿಸಿಎಲ್​ನ 114. 91 ಕೋಟಿ ಇಕ್ವಿಟಿ ಷೇರುಗಳಲ್ಲಿ ಸರ್ಕಾರ ಹೊಂದಿರುವ ಶೇ 52. 98ರಷ್ಟು ಸಂಪೂರ್ಣ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಪ್ರಸ್ತಾಪಿಸಿದೆ.

BPCL
ಭಾರತ್ ಪೆಟ್ರೋಲಿಯಂ
author img

By

Published : Mar 7, 2020, 7:43 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ದೇಶದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ (ಬಿಪಿಸಿಎಲ್) ಶೇ. 52.98ರಷ್ಟು ಷೇರುಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಬಿಡ್​ಗೆ ಆಹ್ವಾನಿಸಿದೆ.

ಈ ಖಾಸಗೀಕರಣ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಭಾಗವಹಿಸುವಂತಿಲ್ಲ. 10 ಬಿಲಿಯನ್ ಡಾಲರ್ (₹ 74,000 ಕೋಟಿ) ನಿವ್ವಳ ಮೌಲ್ಯ ಹೊಂದಿರುವ ಯಾವುದೇ ಖಾಸಗಿ ಕಂಪನಿಗಳು ಬಿಡ್ ಸಲ್ಲಿಸಬಹುದು. ನಾಲ್ಕು ಸಂಸ್ಥೆಗಳಿಗಿಂತ ಹೆಚ್ಚಿನ ಒಕ್ಕೂಟ ಸಹ ಬಿಡ್​ನಲ್ಲಿ ಪಾಲ್ಗೊಳ್ಳುವ ಅವಕಾಶ ಇರುವುದಿಲ್ಲ ಎಂದು ಹೇಳಿದೆ.

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಿಪಿಸಿಎಲ್‌ನ ಮಾರಾಟಕ್ಕೆ ಮೇ 2 ಒಳಗೆ ಬಿಡ್​ಗಳನ್ನು ಆಹ್ವಾನಿಸಿದೆ. ಬಿಪಿಸಿಎಲ್​ನ 114. 91 ಕೋಟಿ ಈಕ್ವಿಟಿ ಷೇರುಗಳಲ್ಲಿ ಸರ್ಕಾರ ಹೊಂದಿರುವ ಶೇ 52. 98ರಷ್ಟು ಸಂಪೂರ್ಣ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಪ್ರಸ್ತಾಪಿಸಿದೆ.

ಬಿಪಿಸಿಎಲ್ ಖರೀದಿದಾರರಿಗೆ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯದ ಶೇ 14 ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಪಾಲು ನೀಡಲಾಗುತ್ತದೆ. 87, 388 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಬಿಪಿಸಿಎಲ್​ನಲ್ಲಿ ಪ್ರಸ್ತುತ ಸರ್ಕಾರ ಹೊಂದಿರುವ ಷೇರಿನ ಮೌಲ್ಯ 46 ಸಾವಿರ ಕೋಟಿಯಷ್ಟಾಗಿದೆ.

ಮುಂಬೈ, ಕೊಚ್ಚಿ, ಬಿನ್ನಾ ಹಾಗೂ ಅಸ್ಸೊಂನ ನುಮಲಿಘಡದಲ್ಲಿ ಬಿಪಿಸಿಎಲ್ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕವಾಗಿ 38.3 ಮಿಲಿಯನ್ ಟನ್​ನಷ್ಟು ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. ಭಾರತದ ಒಟ್ಟಾರೆ ತೈಲ ಸಂಸ್ಕರಣಾ ಸಾಮರ್ಥ್ಯ 249.4 ಮಿಲಿಯನ್ ಟನ್​ನಷ್ಟಾಗಿದ್ದು, ಇದರಲ್ಲಿ ಶೇ 15ರಷ್ಟು ಬಿಪಿಸಿಎಲ್ ಪಾಲು ಹೊಂದಿದೆ.

ಬಿಪಿಸಿಎಲ್​ 15,177 ಪೆಟ್ರೋಲ್​ ಪಂಪ್ಸ್​ ಮತ್ತು 6,011 ಎಲ್​ಪಿಜಿ ವಿತರಣಾ ಏಜೆನ್ಸಿಗಳನ್ನು ಹೊಂದಿದೆ. ಇದರ ಜೊತೆಗೆ 51 ಎಲ್​ಪಿಜಿ ಬಾಟಲಿಂಗ್ ಘಟಕಗಳನ್ನು ಸಹ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.