ETV Bharat / business

ಅತ್ಯುತ್ತಮ ಸ್ಮಾರ್ಟ್‌ವಾಚ್ ಓಎಸ್​.. ದೀರ್ಘ ಬಾಳಿಕೆ ಬ್ಯಾಟರಿ ಅಭಿವೃದ್ಧಿಪಡಿಸಲು ಒಂದಾದ ಗೂಗಲ್-ಸ್ಯಾಮ್‌ಸಂಗ್

ಗೂಗಲ್ ಮ್ಯಾಪ್​ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಮರುವಿನ್ಯಾಸಗೊಳಿಸಿ ಮತ್ತು ಸುಧಾರಿಸಲಾಗುತ್ತಿದೆ. ಪ್ರಸ್ತುತ ಲಭ್ಯವಿರುವ 11 ದೇಶಗಳನ್ನು ಮೀರಿ ಗೂಗಲ್ ಪೇ ಅನ್ನು ಸಹ ಮರುವಿನ್ಯಾಸಗೊಳಿಸಲಾಗುವುದು. 26 ಹೊಸ ದೇಶಗಳಿಗೆ ಬೆಂಬಲವನ್ನು ಸೇರಿಸಲಾಗುವುದು. ಸ್ಮಾರ್ಟ್ ಡೌನ್‌ಲೋಡ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಯೂಟ್ಯೂಬ್ ಮ್ಯೂಸಿಕ್ ಸಹ ಈ ವರ್ಷದ ಕೊನೆಯಲ್ಲಿ ವೇರ್‌ಗೆ ಬರಲಿದೆ.

google
google
author img

By

Published : May 19, 2021, 3:16 PM IST

ನವದೆಹಲಿ: ಗೂಗಲ್ ತನ್ನ ಸ್ಮಾರ್ಟ್‌ವಾಚ್ ವೇರ್ ಓಎಸ್ ಮತ್ತು ಟಿಜೆನ್ ಪ್ಲಾಟ್‌ಫಾರ್ಮ್ ಅನ್ನು ಒಂದೇ ಏಕೀಕೃತ ಪ್ಲಾಟ್‌ಫಾರ್ಮ್‌ಗೆ ತರಲು ಘೋಷಿಸಿದೆ. ವೇಗದ ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ನೀವು ಇಷ್ಟಪಡುವ ಹೆಚ್ಚಿನ ಅಪ್ಲಿಕೇಷನ್‌ಗಳು ವಾಚ್‌ನಲ್ಲಿವೆ.

ನೂತನ ಕಾರ್ಯಕ್ಷಮತೆಗಾಗಿ ಸ್ಯಾಮ್‌ಸಂಗ್ ಮತ್ತು ಗೂಗಲ್ ತಂಡಗಳು ಕೈಜೋಡಿಸಿದವು. ಸುಗಮ ಬಳಕೆದಾರ ಇಂಟರ್​ಫೇಸ್ ಅನಿಮೇಷನ್ ಮತ್ತು ಚಲನೆಯೊಂದಿಗೆ ಇತ್ತೀಚಿನ ಚಿಪ್‌ಸೆಟ್‌ಗಳಲ್ಲಿ ಅಪ್ಲಿಕೇಷನ್‌ಗಳು ಶೇ 30ರಷ್ಟು ವೇಗವಾಗಿ ಪ್ರಾರಂಭವಾಗುತ್ತವೆ.

ದೀರ್ಘ ಬ್ಯಾಟರಿ ಅವಧಿ ಸಾಧಿಸಲು ಆಪರೇಟಿಂಗ್ ಸಿಸ್ಟಂನ ಕೆಳಗಿನ ಪದರಗಳನ್ನು ಅತ್ಯುತ್ತಮವಾಗಿಸಲು ನಾವು ಕೆಲಸ ಮಾಡಿದ್ದೇವೆ. ಉತ್ತಮ ಬ್ಯಾಟರಿ ಅವಧಿಯನ್ನು ಸಕ್ರಿಯಗೊಳಿಸಲು ಕಡಿಮೆ ಶಕ್ತಿಯ ಹಾರ್ಡ್‌ವೇರ್ ಕೋರ್​​ಗಳ ಲಾಭವನ್ನು ಪಡೆದುಕೊಳ್ಳುತ್ತೇವೆ ಎಂದು ಗೂಗಲ್ ಐ/ಓ ಸಮಾವೇಶನದಲ್ಲಿ ವೇರೆಬಲ್​​ ಉತ್ಪನ್ನಗಳ ನಿರ್ವಹಣೆ ನಿರ್ದೇಶಕ ಜಾರ್ನ್ ಕಿಲ್ಬರ್ನ್ ಹೇಳಿದರು.

ಇದನ್ನೂ ಓದಿ: ₹1,250 ಕೋಟಿ ವೆಚ್ಚದ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಬಿಎಸ್‌ವೈ.. ಅಸಂಘಟಿತ ಕಾರ್ಮಿಕರು, ರೈತರಿಗೆ ಸಿಕ್ಕಿದ್ದು,ದಕ್ಕಿದ್ದೆಷ್ಟು?

ಹೃದಯ ಬಡಿತ ಸಂವೇದಕವನ್ನು ಹಗಲಿನಲ್ಲಿ ನಿರಂತರವಾಗಿ ಚಲಾಯಿಸುವ ಸಾಮರ್ಥ್ಯ, ರಾತ್ರಿಯಿಡೀ ನಿಮ್ಮ ನಿದ್ರೆಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಮತ್ತು ಮುಂದಿನ ದಿನಕ್ಕೆ ಇನ್ನೂ ಬ್ಯಾಟರಿ ಹೊಂದಿರುವಂತಹ ಸೂಕ್ತ ಆಪ್ಟಿಮೈಸೇಶನ್‌ಗಳನ್ನು ಇದು ಒಳಗೊಂಡಿದೆ.

ನಮ್ಮ ಏಕೀಕೃತ ಪ್ಲಾಟ್‌ಫಾರ್ಮ್ ಡೆವಲಪರ್‌ಗಳಿಗೆ ವಾಚ್‌ಗಾಗಿ ಉತ್ತಮ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಸುಲಭಗೊಳಿಸುತ್ತದೆ ಎಂದು ಎಂದರು.

ಗೂಗಲ್ ಮ್ಯಾಪ್​ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಮರುವಿನ್ಯಾಸಗೊಳಿಸಿ ಮತ್ತು ಸುಧಾರಿಸಲಾಗುತ್ತಿದೆ. ಪ್ರಸ್ತುತ ಲಭ್ಯವಿರುವ 11 ದೇಶಗಳನ್ನು ಮೀರಿ ಗೂಗಲ್ ಪೇ ಅನ್ನು ಸಹ ಮರುವಿನ್ಯಾಸಗೊಳಿಸಲಾಗುವುದು. 26 ಹೊಸ ದೇಶಗಳಿಗೆ ಬೆಂಬಲವನ್ನು ಸೇರಿಸಲಾಗುವುದು. ಸ್ಮಾರ್ಟ್ ಡೌನ್‌ಲೋಡ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಯೂಟ್ಯೂಬ್ ಮ್ಯೂಸಿಕ್ ಸಹ ಈ ವರ್ಷದ ಕೊನೆಯಲ್ಲಿ ವೇರ್‌ಗೆ ಬರಲಿದೆ. ಪ್ರಯಾಣದಲ್ಲಿರುವಾಗ ಚಂದಾದಾರರು ಸಂಗೀತವನ್ನು ಆನಂದಿಸಬಹುದು ಎಂದು ಕಂಪನಿ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.