ನವದೆಹಲಿ: ಜಗತ್ತಿನಲ್ಲಿ ವ್ಯಾಪಕವಾಗಿ ಬಳಸುವ ಆ್ಯಪ್ಗಳ ಪೈಕಿ ಗೂಗಲ್ ಮ್ಯಾಪ್ ಕೂಡ ಒಂದು. ಅನೇಕರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಗೂಗಲ್ ಮ್ಯಾಪ್ ಇನ್ಸ್ಟಾಲ್ ಮಾಡಿಕೊಂಡಿರುತ್ತಾರೆ. ಗುರುತ, ಪರಿಚಯವಿಲ್ಲದ ರಸ್ತೆಗಳಲ್ಲಿ ಓಡಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಜತೆಗೆ ಹತ್ತಿರದ ಮಾಲ್, ಸಿನಿಮಾ ಹಾಲ್, ರೆಸ್ಟೋರೆಂಟ್, ಆಸ್ಪತ್ರೆ, ಶೌಚಾಲಯ, ಪೆಟ್ರೋಲ್ ಪಂಪ್ಗಳ ಹಾದಿ ತೋರಿಸುತ್ತದೆ. ಗೂಗಲ್ ಮ್ಯಾಪ್ ಬಳಕೆದಾರರಿಗೆ ಅನುಕೂಲ ಆಗುವಂತೆ ನೂತನ ಫೀಚರ್ ಪರಿಯಿಸಿದೆ.
ಗೂಗಲ್ ಮ್ಯಾಪ್ ಬಳಕೆದಾರರಿಗೆ ನಾಪತ್ತೆಯಾದ ರಸ್ತೆಗಳ ಸೇರ್ಪಡೆ, ತಪ್ಪಾಗಿದ್ದನ್ನು ಮರುಹೊಂದಿಸಲು, ಮರುನಾಮಕರಣ ಅಥವಾ ಡಿಲೀಟ್ನಂತಹ ಎಡಿಟ್ ಫೀಚರ್ ಅನ್ನು 80ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪರಿಚಯಿಸಿದೆ.
Maps.google.comನಲ್ಲಿ ರಸ್ತೆ ಕಾಣೆಯಾಗಿದೆ ಎಂಬುದು ಕಂಡು ಬಂದಾಗ, ಸೈಡ್ ಮೆನು ಬಟನ್ ಕ್ಲಿಕ್ ಮಾಡಿ. ಮ್ಯಾಪ್ ಎಡಿಟ್ಗೆ ಹೋಗಿ ಹಾಗೂ ‘ಕಾಣೆಯಾದ ರಸ್ತೆ’ ಆಯ್ಕೆಮಾಡಿ. ಈಗ ಮ್ಯಾಪ್ನಲ್ಲಿ ನಾಪತ್ತೆಯಾಗಿರುವ ರಸ್ತೆಯನ್ನು ಎಡಿಟ್ ಮಾಡಬಹುದು ಎಂದು ಗೂಗಲ್ ಮ್ಯಾಪ್ ಉತ್ಪನ್ನ ನಿರ್ದೇಶಕ ಕೆವಿನ್ ರೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಕ್ಸಿಸ್ ಬ್ಯಾಂಕ್ನಿಂದ ಕಾಂಟ್ಯಾಕ್ಟ್ಲೆಸ್ ಪೇಮೆಂಟ್ ಡಿವೈಸ್: SBI - Axis ಬ್ಯಾಂಕ್ ಪೈಕಿ ಯಾವುದು ಬೆಸ್ಟ್?
ಗೆರೆ ಎಳೆಯುವ ಮೂಲಕ ನೀವು ರಸ್ತೆಗಳನ್ನು ವೇಗವಾಗಿ ಮರು ಹೆಸರಿಸಬಹುದು, ರಸ್ತೆ ದಿಕ್ಕನ್ನು ಬದಲಾಯಿಸಬಹುದು ಮತ್ತು ತಪ್ಪಾದ ರಸ್ತೆಗಳನ್ನು ಮರು ಹೊಂದಿಸಬಹುದು ಅಥವಾ ಅಳಿಸಬಹುದು.
ಒಂದು ವೇಳೆ ರಸ್ತೆಗಳು ಮುಚ್ಚಿದ್ದರೇ ಅದರ ದಿನಾಂಕ, ಕಾರಣ ಹಾಗೂ ಇತರ ವಿವರಗಳನ್ನು ತಿಳಿಸಬಹುದು. ಸಲಹೆ ಮತ್ತು ಎಡಿಟ್ ನಿಖರವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಲು, ಅದನ್ನು ಅಂತಿಮವಾಗಿ ಪ್ರಕಟಿಸುವ ಮುನ್ನ ರಸ್ತೆ ನವೀಕರಣಗಳನ್ನು ಪರಿಶೀಲಿಸುತ್ತೇವೆ ಎಂದು ರೀಸ್ ಮಾಹಿತಿ ನೀಡಿದರು.