ನವದೆಹಲಿ: ಜಪಾನ್‌ನ ಬುಲೆಟ್ ಟ್ರೈನ್ ಎಂದೂ ಕರೆಯಲ್ಪಡುವ 'ಇ5 ಸೀರಿಸ್ ಶಿಂಕಾನ್‌ಸೆ'ನ್ ಅನ್ನು ಮುಂಬೈ- ಅಹಮದಾಬಾದ್ ಹೈ - ಸ್ಪೀಡ್ ರೈಲು ಯೋಜನೆಯ (ಎಂಎಎಚ್‌ಎಸ್ಆರ್) ರೋಲಿಂಗ್ ಸ್ಟಾಕ್ ಆಗಿ ಬಳಸಲು ಮಾರ್ಪಡಿಸಲಾಗುವುದು ಎಂದು ಜಪಾನಿನ ರಾಯಭಾರ ಕಚೇರಿ ತಿಳಿಸಿದೆ.
ಭಾರತದ ಜಪಾನ್ ರಾಯಭಾರ ಕಚೇರಿಯು 'ಇ5 ಸೀರಿಸ್ ಶಿಂಕಾನ್‌ಸೆನ್'ನ ಮೊದಲ ಅಧಿಕೃತ ಫೋಟೋಗಳನ್ನು ಹಂಚಿಕೊಂಡಿದೆ. ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಯೋಜನೆಯು 2023ರ ವೇಳೆಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಪಿವಿ ನರಸಿಂಹರಾವ್ ಕಾಲಕ್ಕೆ 1 ಡಾಲರ್ಗೆ 17 ರೂ. ಇದ್ದ ರೂಪಾಯಿ ಮೌಲ್ಯ ಮೋದಿ ಕಾಲಕ್ಕೆ 74 ರೂ.ಗೆ ಏರಿಕೆ!
508 ಕಿ.ಮೀ. ಉದ್ದದ ಎಂಎಎಚ್‌ಎಸ್‌ಆರ್ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿದೆ. ಇದನ್ನು ಜಪಾನ್ ಸರ್ಕಾರದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ಕಾರ್ಯಗತಗೊಳಿಸುತ್ತಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 1,08,000 ಕೋಟಿ ರೂ.ಯಷ್ಟಿದೆ.
ಡಿಸೆಂಬರ್ 1 ರಂದು ಭಾರತೀಯ ರೈಲ್ವೆ 508 ಕಿ.ಮೀ ಅಹಮದಾಬಾದ್ - ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅಗತ್ಯವಿರುವ ಎಲ್ಲ ವನ್ಯಜೀವಿ, ಅರಣ್ಯ ಮತ್ತು ಕರಾವಳಿ ನಿಯಂತ್ರಣ ವಲಯದ ಅನುಮತಿಗಳನ್ನು ಪಡೆದುಕೊಂಡಿದೆ.
ಬುಲೆಟ್ ರೈಲು ಯೋಜನೆಗೆ ಬೇಕಾದ ಶೇ 67ರಷ್ಟು ಭೂಮಿಯನ್ನು ರೈಲ್ವೆ ಪಡೆದುಕೊಂಡಿದೆ. ಗುಜರಾತ್ ವ್ಯಾಪ್ತಿಯ 956 ಹೆಕ್ಟೇರ್‌ನಲ್ಲಿ 825 ಹೆಕ್ಟೇರ್ ಭೂಮಿ ಸ್ವಾಧೀನವಾಗಿದ್ದು, ಶೇ 86ರಷ್ಟು ಪೂರ್ಣಗೊಂಡಿದೆ.