ETV Bharat / business

ಅಂದು ಟೆಸ್ಲಾ ಖರೀದಿಸಲು ನಿರಾಕರಿಸಿದ್ದ ಆ್ಯಪಲ್​: ಇವತ್ತು ಅದೇ ಕಂಪನಿ ಮಾಲೀಕ ಜಗತ್ತಿನ ನಂ.2 ಶ್ರೀಮಂತ - ಆ್ಯಪಲ್​ ಸಿಇಒ ಬಗ್ಗೆ ಎಲೋನ್ ಮಸ್ಕ್​ ಟ್ವೀಟ್​

ಟೆಸ್ಲಾ ಇಂಕಾ ಅನ್ನು ಆ್ಯಪಲ್​​ಗೆ ಈಗಿನ ಪ್ರಸ್ತುತ ಮೌಲ್ಯದ ಹತ್ತನೇ ಒಂದು ಭಾಗಕ್ಕೆ ಮಾರಾಟ ಮಾಡುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಯೋಜನೆ ಹಾಕಿಕೊಂಡಿದ್ದೆ. ಆದರೆ, ಟಿಮ್​ ಕುಕ್​ ಸಭೆ ನಡೆಸಲು ನಿರಾಕರಿಸಿದ್ದರು ಎಂದು ಎಲೋನ್ ಮಸ್ಕ್​ ಬಹಿರಂಗಪಡಿಸಿದ್ದಾರೆ.

Elon Musk
ಎಲೋನ್ ಮಸ್ಕ್
author img

By

Published : Dec 23, 2020, 3:46 PM IST

ನ್ಯೂಯಾರ್ಕ್​: ಆ್ಯಪಲ್ ಕಂಪನಿ ಇಂಕಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಅವರು ಟೆಸ್ಲಾ ಇಂಕಾ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚಿಸಲು ವರ್ಷಗಳ ಹಿಂದೆ ಸಭೆ ನಡೆಸಲು ನಿರಾಕರಿಸಿದ್ದರು ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ.

ಸಂಭವನೀಯ ಒಪ್ಪಂದದ ಬಗ್ಗೆ ಚರ್ಚಿಸಲು ತಮ್ಮ ಕಂಪನಿಯ ಮಾಡೆಲ್ 3 ಅಭಿವೃದ್ಧಿ ಅವಧಿಯ ಕರಾಳ ದಿನಗಳಲ್ಲಿ ಆ್ಯಪಲ್ ಬಾಗಿಲು ತಟ್ಟಿದೆ ಎಂದು ಟೆಸ್ಲಾ ಸಿಇಒ ಮಸ್ಕ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಟೆಸ್ಲಾ ಇಂಕಾ ಅನ್ನು ಆ್ಯಪಲ್​​ಗೆ ಈಗಿನ ಪ್ರಸ್ತುತ ಮೌಲ್ಯದ ಹತ್ತನೇ ಒಂದು ಭಾಗಕ್ಕೆ ಮಾರಾಟ ಮಾಡುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಯೋಜನೆ ಹಾಕಿಕೊಂಡಿದ್ದೆ. ಆದರೆ, ಟಿಮ್​ ಕುಕ್​ ಸಭೆ ನಡೆಸಲು ನಿರಾಕರಿಸಿದ್ದರು ಎಂದು ಎಲೋನ್ ಮಸ್ಕ್​ ಬಹಿರಂಗಪಡಿಸಿದ್ದಾರೆ. ಇದು ಸುಮಾರು 60 ಬಿಲಿಯನ್ ಡಾಲರ್​ (4.42 ಲಕ್ಷ ಕೋಟಿ ರೂ.) ಮೌಲ್ಯದಷ್ಟು ಎಂಬುದನ್ನು ಸೂಚಿಸುತ್ತದೆ.

  • During the darkest days of the Model 3 program, I reached out to Tim Cook to discuss the possibility of Apple acquiring Tesla (for 1/10 of our current value). He refused to take the meeting.

    — Elon Musk (@elonmusk) December 22, 2020 " class="align-text-top noRightClick twitterSection" data=" ">

ಅದೇ ಸಮಯದಲ್ಲಿ ಆ್ಯಪಲ್ ಪೂರ್ಣ ಪ್ರಮಾಣದ ಟೆಸ್ಲಾ ಅನ್ನು ತನ್ನ ಪ್ರತಿಸ್ಪರ್ಧಿಯಾಗಿ ಸ್ವೀಕರಿಸಿತು. ಟೆಸ್ಲಾ ಅಭಿವೃದ್ಧಿ ಪಡಿಸಿದ್ದ ಸ್ವಯಂ ಚಾಲನಾ ಕಾರು ವ್ಯವಸ್ಥೆಯನ್ನು ತಾನೂ ಅಳವಡಿಸಿಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ಆ್ಯಪಲ್ ಡ್ರೈವ್ ಟ್ರೈನ್, ಕಾರ್ ಇಂಟೀರಿಯರ್ ಮತ್ತು ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಹಲವು ಮಾಜಿ ಟೆಸ್ಲಾ ತಂತ್ರಜ್ಞರನ್ನು ನೇಮಿಸಿಕೊಂಡಿದೆ. ಇದು ಸ್ವಯಂ ಚಾಲನಾ ಕಾರು ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಕಂಪನಿಗಳನ್ನು ಸಹ ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಮತ್ತೊಮ್ಮೆ ಮಾರುಕಟ್ಟೆಗೆ ಪ್ರವೇಶಿಸಲು ಪರಿಗಣಿಸುತ್ತಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ದೊಡ್ಡ ಬಿಕ್ಕಟ್ಟಿಗೆ ಎಸೆಯಲ್ಪಟ್ಟ ಅನ್ನದಾತ : ಕೃಷಿ ಅರ್ಥಶಾಸ್ತ್ರಜ್ಞ ಪ್ರೊ. ನರಸಿಂಹ ರೆಡ್ಡಿ ಅಭಿಮತ

ತನ್ನ ಕಂಪನಿಯ ಕಷ್ಟ ಕಾಲದಲ್ಲಿ ಟೆಸ್ಲಾ ಮಾರಾಟಕ್ಕೆ ಮುಂದಾಗಿದ್ದ ಮಸ್ಕ್, ಈಗ ವಿಶ್ವದ ಎರಡನೇ ಶ್ರೀಮಂತ ಉದ್ಯಮಿ ಆಗಿದ್ದಾರೆ. ಇತ್ತೀಚೆಗೆ 7.2 ಬಿಲಿಯನ್​ ಡಾಲರ್​ ಸಂಪಾದಿಸುವುದರೊಂದಿಗೆ ಮಸ್ಕ್​ 127.9 ಬಿಲಿಯನ್​ ಡಾಲರ್​ಗೆ (9.47 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. 2020ರಲ್ಲಿಯೇ 100 ಬಿಲಿಯನ್‌ ಡಾಲರ್‌ ಆಸ್ತಿ ಸಂಪಾದಿಸಿದ್ದು, ಜನವರಿಯಲ್ಲಿ 35ನೇ ಸ್ಥಾನದಲ್ಲಿದ್ದ ಅವರು ಈಗ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.