ETV Bharat / business

ಎಲ್​ಐಸಿಯ ಐಪಿಒ ಸರ್ಕಾರಕ್ಕೆ 1 ಲಕ್ಷ ಕೋಟಿ ರೂ. ತಂದುಕೊಡಲಿದೆ : ಮುಖ್ಯ ಆರ್ಥಿಕ ಸಲಹೆಗಾರ

author img

By

Published : Mar 27, 2021, 7:08 PM IST

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಸುಬ್ರಮಣಿಯನ್, 2021-22ರ ಅವಧಿಯಲ್ಲಿ 1.75 ಲಕ್ಷ ಕೋಟಿ ರೂ.ಗಳ ಹೂಡಿಕೆ ಹಿಂತೆಗೆತದ ಗುರಿ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ್ದು 2.10 ಲಕ್ಷ ಕೋಟಿ ರೂಪಿಯಾಗಿದೆ..

KV Subramanian
KV Subramanian

ನವದೆಹಲಿ : 2021-22ರ ಅವಧಿಯಲ್ಲಿ 1.75 ಲಕ್ಷ ಕೋಟಿ ರೂ. ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯದ ಗುರಿ ಸಾಧಿಸಬಹುದಾಗಿದ್ದು, ಅದರ ಗುರಿ ಸನ್ನಿಹಿತವಾಗಿದೆ ಎಂದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್, ಎಲ್‌ಐಸಿಯ ಪ್ರಸ್ತಾವಿತ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) 1 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್ ಗುರಿಯಾಗಿಸಿಕೊಂಡ ಚಿಲ್ಲರೆ ಹಣದುಬ್ಬರ ನಿಯಂತ್ರಣ, ಹಣದುಬ್ಬರದ ಚಂಚಲತೆ ಮತ್ತು ಮಟ್ಟವನ್ನು ತಗ್ಗಿಸಲು ನೆರವಾಗಿದೆ ಎಂದರು. ಆರ್‌ಬಿಐನ ಹಣಕಾಸು ನೀತಿ ಸಮಿತಿಯು 2021ರ ಮಾರ್ಚ್ 31ರವರೆಗೆ ವಾರ್ಷಿಕ ಹಣದುಬ್ಬರವನ್ನು ಶೇ.4ರಂತೆ ಕಾಯ್ದುಕೊಳ್ಳಲು ಆದೇಶಿಸಿದೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಸುಬ್ರಮಣಿಯನ್, 2021-22ರ ಅವಧಿಯಲ್ಲಿ 1.75 ಲಕ್ಷ ಕೋಟಿ ರೂ.ಗಳ ಹೂಡಿಕೆ ಹಿಂತೆಗೆತದ ಗುರಿ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ್ದು 2.10 ಲಕ್ಷ ಕೋಟಿ ರೂ.ಯಾಗಿದೆ ಎಂದರು.

ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಖಾಸಗೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆ!!

ಇದರಲ್ಲಿ ಬಿಪಿಸಿಎಲ್ ಖಾಸಗೀಕರಣ ಮತ್ತು ಎಲ್ಐಸಿ ಪಾಲು ಪ್ರಮುಖ ಕೊಡುಗೆ ನೀಡಿದೆ. ಬಿಪಿಸಿಎಲ್​ ಖಾಸಗೀಕರಣದಿಂದ 75,000-80,000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವು ಬರಬಹುದು ಎಂದು ಅಂದಾಜಿಸಲಾಗಿದೆ. ಎಲ್‌ಐಸಿ ಐಪಿಒ ಸರಿಸುಮಾರು 1 ಲಕ್ಷ ಕೋಟಿ ರೂ.ಯಷ್ಟಾಗಬಹುದು ಎಂದು ಹೇಳಿದರು.

ಈವರೆಗೆ ರಾಷ್ಟ್ರದ ಅತಿದೊಡ್ಡ ಖಾಸಗೀಕರಣದಲ್ಲಿ ಸರ್ಕಾರವು ಬಿಪಿಸಿಎಲ್‌ನಲ್ಲಿ ತನ್ನ ಒಟ್ಟು ಶೇ.52.98ರಷ್ಟು ಪಾಲು ಮಾರಾಟ ಮಾಡುತ್ತಿದೆ. ವೇದಾಂತ ಗ್ರೂಪ್ ಮತ್ತು ಖಾಸಗಿ ಈಕ್ವಿಟಿ ಸಂಸ್ಥೆಗಳಾದ ಅಪೊಲೊ ಗ್ಲೋಬಲ್ ಮತ್ತು ಐ ಸ್ಕ್ವೇರ್ ಕ್ಯಾಪಿಟಲ್‌ನ ಇಂಡಿಯನ್ ಯುನಿಟ್ ಥಿಂಕ್ ಗ್ಯಾಸ್ ಸರ್ಕಾರದ ಪಾಲು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.