ETV Bharat / business

ಗುಣಮಟ್ಟದ, ಕಡಿಮೆ ಬೆಲೆಯ ಕೊರೊನಾ ಲಸಿಕೆ ಶೀಘ್ರ ಮಾರುಕಟ್ಟೆಗೆ; ಭಾರತ್ ಬಯೋಟೆಕ್

author img

By

Published : Aug 10, 2020, 6:44 PM IST

ಕೋವಿಡ್ ಸೋಂಕು ಎಗ್ಗಿಲ್ಲದೆ ಹರಡುತ್ತಿರುವುದರಿಂದ ಲಸಿಕೆಯನ್ನು ಬಿಡುಗಡೆ ಮಾಡಲು ಕಂಪನಿಯ ಮೇಲೆ ಬಹಳಷ್ಟು ಒತ್ತಡವಿದೆ. ಆದರೆ, ಗುಣಮಟ್ಟ ಮತ್ತು ಸುರಕ್ಷತೆಯ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

Covaxin
ಕೋವಾಕ್ಸಿನ್

ಚೆನ್ನೈ: ಕಂಪನಿಯು ತನ್ನ ಕೋವಿಡ್ ಲಸಿಕೆ ಬಿಡುಗಡೆ ಮಾಡುವಂತೆ ಎಲ್ಲೆಡೆಯಿಂದ ಬರುತ್ತಿರುವ ಬಲವಾದ ಒತ್ತಡ ನಿಭಾಯಿಸುತ್ತಿದೆ. ಆದರೆ, ಗುಣಮಟ್ಟ ಮತ್ತು ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಂ. ಎಲಾ ಹೇಳಿದ್ದಾರೆ.

ಶೀಘ್ರದಲ್ಲೇ ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರಿ ಒತ್ತಡವಿದ್ದರೂ ನಾವು ಅದನ್ನು ಉತ್ತಮ ಗುಣಮಟ್ಟದ, ಸುರಕ್ಷಿತವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಹೊರತರುತ್ತೇವೆ ಎಂದು ಚೆನ್ನೈ ಅಂತಾರಾಷ್ಟ್ರೀಯ ಕೇಂದ್ರದ ಸದಸ್ಯರೊಂದಿಗೆ ಸಂವಾದ ನಡೆಸಿ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಸೋಂಕು ಎಗ್ಗಿಲ್ಲದೆ ಹರಡುತ್ತಿರುವುದರಿಂದ ಲಸಿಕೆಯನ್ನು ಬಿಡುಗಡೆ ಮಾಡಲು ಕಂಪನಿಯ ಮೇಲೆ ಬಹಳಷ್ಟು ಒತ್ತಡವಿದೆ. ಆದರೆ, ಗುಣಮಟ್ಟ ಮತ್ತು ಸುರಕ್ಷತೆಯ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಲಸಿಕೆ ಬಿಡುಗಡೆಗೆ ಯಾವುದೇ ನಿರ್ದಿಷ್ಟ ದಿನಾಂಕ ಘೋಷಿಸಲು ನಿರಾಕರಿಸಿದ ಎಲಾ, ಕ್ಲಿನಿಕಲ್ ಪ್ರಯೋಗಗಳನ್ನು ಅತ್ಯುನ್ನತ ಗುಣಮಟ್ಟದಲ್ಲಿ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಕಂಪನಿಯ ಕೆಲಸವನ್ನು ತೀವ್ರವಾಗಿ ಗಮನಿಸುತ್ತಿವೆ ಎಂದು ಹೇಳಿದರು.

ರೋಟಾವೈರಸ್​​ನ ಕ್ಲಿನಿಕಲ್ ಪ್ರಯೋಗದ ಮೊದಲ ಹಂತ ಪೂರ್ಣಗೊಳಿಸಲು ಆರು ತಿಂಗಳು ತೆಗೆದುಕೊಂಡಿದೆ. ಇದಕ್ಕೆ ವಿರುದ್ಧವಾಗಿ ಕೋವಾಕ್ಸಿನ್​​ನ (ಭಾರತ್ ಬಯೋಟೆಕ್​ನ ಕೋವಿಡ್-19 ಲಸಿಕೆ) ಮೊದಲ ಹಂತ ಪೂರ್ಣಗೊಳಿಸಲು ಕೇವಲ 30 ದಿನ ಬೇಕಾಯಿತು ಎಂದರು.

ಭಾರತೀಯ ಲಸಿಕೆ ಉದ್ಯಮವು ಬಹುರಾಷ್ಟ್ರೀಯ ಕಂಪನಿಗಳಿಗಿಂತ ಹಿಂದೆಯಿಲ್ಲ. ತಾಂತ್ರಿಕ ಕ್ಲಿನಿಕಲ್ ಪ್ರಯೋಗಗಳ ವಿಷಯದಲ್ಲಿ ಚೀನಾಕ್ಕಿಂತಲೂ ಭಾರತ ಮುಂದಿದೆ. ಭಾರತೀಯ ಕಂಪನಿಗಳ ದಕ್ಷತೆಯ ಬಗ್ಗೆ ಹಲವು ಜನರಲ್ಲಿ ಆತಂಕವಿದೆ. ಆದರೆ ರೋಟಾವೈರಸ್, ಪೋಲಿಯೊ ಮತ್ತು ಇತರ ಕಾಯಿಲೆಗಳಿಗೆ ಭಾರತ ಅಭಿವೃದ್ಧಿಪಡಿಸಿದ ಲಸಿಕೆಗಳೊಂದಿಗೆ ನಾವು ಅವರಿಗೆ ಉತ್ತಮ ಪ್ರತ್ಯುತ್ತರ ನೀಡಿದ್ದೇವೆ ಎಂದು ವಿವರಿಸಿದರು.

ಕೆಲವು ವರ್ಷಗಳ ಹಿಂದೆ, ರೋಟಾವೈರಸ್ ಲಸಿಕೆಯನ್ನು ಜಿಎಸ್​​ಕೆ 85 ಡಾಲರ್​ಗೆ ಬಿಡುಗಡೆ ಮಾಡಿತ್ತು. ಆದರೆ ಭಾರತ್ ಬಯೋಟೆಕ್ ಅದನ್ನು ಅದೇ ಗುಣಮಟ್ಟದೊಂದಿಗೆ ಹೊರತಂದು ಒಂದು ಡಾಲರ್ ನಿಗದಿಪಡಿಸಿತ್ತು. ಕೋವಿಡ್​​-19 ಲಸಿಕೆಯನ್ನು ಕೈಗೆಟುಕುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕೋವಿಡ್​ನಿಂದ ಇಡೀ ಆರ್ಥಿಕ ರಚನೆಯೇ ಅಲುಗಾಡುತ್ತಿದೆ. ಅದಕ್ಕಾಗಿಯೇ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಇದರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ವಾಸ್ತವವಾಗಿ, ಕೋವಿಡ್​​ಗಿಂತ ಹೆಚ್ಚಿನ ಸಂಖ್ಯೆಯ ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ಜನತೆ ಭಯಪಡಬಾರದು ಎಂದು ಎಲಾ ಧೈರ್ಯದ ಮಾತುಗಳನ್ನು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.