ಸ್ಯಾನ್ಫ್ರಾನ್ಸಿಸ್ಕೋ : ಜಾಗತಿಕ ಸಾಫ್ಟ್‌ವೇರ್ ಸಂಸ್ಥೆ ಕಾಗ್ನಿಜೆಂಟ್ ಕೋವಿಡ್ -19ರ ಸೋಂಕಿನ ಮಧ್ಯೆ ವೆಚ್ಚ ಸುಧಾರಣೆ ಯೋಜನೆ ಜಾರಿಗೆ ಬಂದ ನಂತರ ಕಂಪನಿಯ ಉದ್ಯೋಗಿಗಳ ಸಂಖ್ಯೆ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದ್ರೆ ಈ ವರ್ಷದ 2ನೇ ತ್ರೈಮಾಸಿಕದಲ್ಲಿ 10,500ರಷ್ಟು ಕಡಿಮೆಯಾಗಿದೆ.
ಜೂನ್ 30ರ ಹೊತ್ತಿಗೆ ಕಂಪನಿಯ ಒಟ್ಟು ಸಂಖ್ಯೆ 2,91,700 ಉದ್ಯೋಗಿಗಳಿಂದ 2,81,200ರಷ್ಟಿದೆ. ಕಂಪನಿಯ ಸ್ವಯಂಪ್ರೇರಿತ ಘರ್ಷಣೆಯು ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಶೇ. 10.5ಕ್ಕೆ ಇಳಿದಿದೆ ಎಂದು ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಬುಧವಾರ ಹೂಡಿಕೆದಾರರಿಗೆ ತಿಳಿಸಿದ್ದಾರೆ. ಕಂಪನಿಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ದೃಷ್ಟಿಕೋನ ನಿಯೋಜನೆ ಮುಂದುವರೆಸಿದೆ. ನಾವು ಈಗ ಕಡಿಮೆ ಕಾರ್ಯಕ್ಷಮತೆ ತೋರುವವರನ್ನು ವಾರ್ಷಿಕ ಆಧಾರದ ಮೇಲೆ ತೆಗೆದು ಹಾಕುತ್ತಿದ್ದೇವೆ ಎಂದು ಹೇಳಿದರು.
ಎಂಟು ವರ್ಷಗಳಿಗೂ ಹೆಚ್ಚು ಕಾಲ ಮುಖ್ಯ ಹಣಕಾಸು ಅಧಿಕಾರಿಯಾಗಿ ಮತ್ತು ಸುಮಾರು 17ವರ್ಷಗಳ ಕಾಲ ಕಂಪನಿಯ ಯಶಸ್ವಿ ವೃತ್ತಿ ಜೀವನದ ನಂತರ ಕರೆನ್ ಮೆಕ್ಲೌಗ್ಲಿನ್ ಕಂಪನಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ ಎಂದು ಕಾಗ್ನಿಜೆಂಟ್ ಘೋಷಿಸಿತು. ಜಾನ್ ಸೀಗ್ಮಂಡ್ ಕಂಪನಿಯ ಹೊಸ ಸಿಎಫ್‌ಒ ಆಗಿ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್ 1ರಿಂದ ಹುದ್ದೆಗೆ ಏರಲಿದ್ದಾರೆ.
ಕಾಗ್ನಿಜೆಂಟ್ ಸಿಇಒ ಅವರು ಭಾರತಕ್ಕಾಗಿ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅವರು ದೇಶದ 2,00,000 ಉದ್ಯೋಗಿಗಳನ್ನು ಪ್ರತಿನಿಧಿಸಲಿದ್ದಾರೆ. 2020ರ 2ನೇ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್ 4 ಬಿಲಿಯನ್ ಡಾಲರ್ ಆದಾಯದ ವರದಿ ಮಾಡಿದೆ. ಇದು ಹಿಂದಿನ ವರ್ಷದ ಅವಧಿಗೆ ಹೋಲಿಸಿದ್ರೆ ಶೇ 3.4ರಷ್ಟು ಕಡಿಮೆಯಾಗಿದೆ.