ನವದೆಹಲಿ: ತನ್ನ ಪ್ರಸ್ತುತ ಹಣಕಾಸು ವರ್ಷದ ಬಂಡವಾಳ ವೆಚ್ಚದ (ಕ್ಯಾಪೆಕ್ಸ್) ಬಜೆಟ್ ಅನ್ನು 3,000 ಕೋಟಿ ರೂ. ಹೆಚ್ಚಿಸಿ 13,000 ಕೋಟಿ ರೂ.ಗೆ ಪರಿಷ್ಕರಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಹೇಳಿದೆ.
ಇದು 2020-21ರ ಸಿಐಎಲ್‌ನ ಮೂಲ ಕ್ಯಾಪೆಕ್ಸ್ ಗುರಿ 10,000 ಕೋಟಿ ರೂ.ಗಿಂತ ಶೇ 30ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚುವರಿ 3,000 ಕೋಟಿ ರೂ. ಕ್ಯಾಪೆಕ್ಸ್ ಬಜೆಟ್ನಲ್ಲಿ ಸಿಐಎಲ್‌ನ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಅಂಗಸಂಸ್ಥೆಯಾದ ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ 800 ಕೋಟಿ ರೂ., ಸಿಐಎಲ್ ಕೇಂದ್ರ ಕಚೇರಿ 585 ಕೋಟಿ ರೂ. ಮತ್ತು ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ 550 ಕೋಟಿ ರೂ.ನದ್ದು ಇರಲಿದೆ. ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಸಿಐಎಲ್) 460 ಕೋಟಿ ರೂ.ಯಷ್ಟಿದೆ.
ಇದನ್ನೂ ಓದಿ: ಜೆಇಇಗೆ ಸಜ್ಜಾಗುತ್ತಿರುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 'ಅಮೆಜಾನ್ನಿಂದ ಬಂತು 'Amazon Academy' ಆ್ಯಪ್
ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸಿಐಎಲ್ ತನ್ನ ಕ್ಯಾಪೆಕ್ಸ್‌ನಲ್ಲಿ ಶೇ 166ರಷ್ಟು ಏರಿಕೆ ಕಂಡು 7,801 ಕೋಟಿ ರೂ.ಗೆ ತಲುಪಿದೆ. 2019-20ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕಂಪನಿ ವೆಚ್ಚ ಮಾಡಿದ 2,930 ಕೋಟಿ ರೂ. ಕ್ಯಾಪೆಕ್ಸ್‌ಗೆ ಹೋಲಿಸಿದರೆ, 2021ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನೈಜ ಖರ್ಚು 4,871 ಕೋಟಿ ರೂ.ಯಷ್ಟಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಿಐಎಲ್ ತನ್ನ ಒಟ್ಟು ಮೂಲ ಕ್ಯಾಪೆಕ್ಸ್ ಬಜೆಟ್‌ನ ಶೇ 78ರಷ್ಟು ಹಣ ಬಳಸಿಕೊಂಡಿತ್ತು. ಡಿಸೆಂಬರ್ ಅಂತ್ಯದ ವೇಳೆಗೆ 7,500 ಕೋಟಿ ರೂ. ಕ್ಯಾಪೆಕ್ಸ್ ಬಳಕೆಯನ್ನು ಸಾಧಿಸಲು ಸಿಐಎಲ್ಗೆ ನಿರ್ದೇಶನ ನೀಡಲಾಯಿತು.