ETV Bharat / business

ಭಾರತ್ ಪೆಟ್ರೋಲಿಯಂ ಖಾಸಗೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆ!! - ನುಮಾಲಿಗರ್ ರಿಫೈನರಿ ಲಿಮಿಟೆಡ್

ಬಿಪಿಸಿಎಲ್ ಮತ್ತು ಒಐಎಲ್ ಹಾಗೂ ಇಐಎಲ್ ಒಕ್ಕೂಟದ ನಡುವೆ 2021ರ ಮಾರ್ಚ್ 25ರಂದು 9,375.96 ಕೋಟಿ ರೂ. ಪರಿಗಣಗಣಿಸಿ ಎನ್ಆರ್​ಎಲ್​ನಲ್ಲಿ 43.05 ಕೋಟಿ ರೂ., ಉಳಿದ 2.29 ಕೋಟಿ ಈಕ್ವಿಟಿ ಷೇರುಗಳನ್ನು 499.99 ಕೋಟಿ ರೂ.ಗಳಿಗೆ ಅಸ್ಸೋಂ ಸರ್ಕಾರಕ್ಕೆ ವರ್ಗಾಯಿಸಲಾಗಿದೆ..

BPCL
BPCL
author img

By

Published : Mar 27, 2021, 6:20 PM IST

ನವದೆಹಲಿ : ಖಾಸಗೀಕರಣಕ್ಕೆ ಒಳಪಟ್ಟ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅಸ್ಸೋಂನ ನುಮಲಿಗರ್ ಸಂಸ್ಕರಣಾಗಾರದಲ್ಲಿ ತನ್ನ ಒಟ್ಟು ಶೇ.61.5ರಷ್ಟು ಪಾಲನ್ನು ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಎಂಜಿನಿಯರ್ಸ್ ಇಂಡಿಯಾ ಮತ್ತು ಅಸ್ಸೋಂ ಸರ್ಕಾರದ ಒಕ್ಕೂಟಕ್ಕೆ 9,876 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ಹೇಳಿದೆ.

ಸಂಸ್ಕರಣಾಗಾರದಲ್ಲಿ ತನ್ನ ಷೇರುಗಳನ್ನು ಶೇ.80.16ಕ್ಕೆ ಏರಿಸಲು ಒಐಎಲ್ ಶೇ54.16ರಷ್ಟು ಪಾಲನ್ನು ಖರೀದಿಸಿದೆ ಎಂದು ಕಂಪನಿ ಷೇರು ವಿನಿಮಯದಲ್ಲಿ ತಿಳಿಸಿದೆ.

ಅದರ ಪಾಲುದಾರ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಶೇ 4.4ರಷ್ಟು ಪಾಲನ್ನು ಖರೀದಿಸಿತು. ಉಳಿದ ಶೇ 3.2ರಷ್ಟು ಷೇರು ಅಸ್ಸೋಂ ಸರ್ಕಾರ ಸ್ವಾಧೀನ ಪಡಿಸಿಕೊಂಡಿತು. ನುಮಲೀಗರ್​ ರಿಫೈನರಿ ಲಿಮಿಟೆಡ್ (ಎನ್ಆರ್​ಎಲ್) ಮಾರಾಟವು ಭಾರತದ 2ನೇ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಪ್ರಧಾನಿ ಬಾಂಗ್ಲಾದೇಶ ಭೇಟಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವೀಸಾ ರದ್ದತಿಗೆ ಮಮತಾ ಆಗ್ರಹ

ಬಿಪಿಸಿಎಲ್ ತನ್ನ ಸಂಪೂರ್ಣ ಶೇ.61.65ರಷ್ಟು ಪಾಲನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾರಾಟ ಮಾಡಬೇಕಿತ್ತು. ಒಐಎಲ್, ಇಐಎಲ್ ಮತ್ತು ಅಸ್ಸೋಂ ಸರ್ಕಾರದ ಒಕ್ಕೂಟವು ಈ ಪಾಲನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿತು.

ಬಿಪಿಸಿಎಲ್ ಮತ್ತು ಒಐಎಲ್ ಹಾಗೂ ಇಐಎಲ್ ಒಕ್ಕೂಟದ ನಡುವೆ 2021ರ ಮಾರ್ಚ್ 25ರಂದು 9,375.96 ಕೋಟಿ ರೂ. ಪರಿಗಣಗಣಿಸಿ ಎನ್ಆರ್​ಎಲ್​ನಲ್ಲಿ 43.05 ಕೋಟಿ ರೂ., ಉಳಿದ 2.29 ಕೋಟಿ ಈಕ್ವಿಟಿ ಷೇರುಗಳನ್ನು 499.99 ಕೋಟಿ ರೂ.ಗಳಿಗೆ ಅಸ್ಸೋಂ ಸರ್ಕಾರಕ್ಕೆ ವರ್ಗಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.