ನವದೆಹಲಿ: ಬಜಾಜ್ ಆಟೋ ಬುಧವಾರ ಸ್ಪೋರ್ಟ್ಸ್ ಟೂರರ್ ಮಾದರಿಯ ಡೊಮಿನಾರ್ 250 ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಡೊಮಿನಾರ್ 250 ಬೈಕ್, ಪ್ರವಾಸಿ ತಾಣಗಳಿಗೆ ಭೇಟಿ ನೀಡ ಬಯಸುವ ಮಹತ್ವಾಕಾಂಕ್ಷಿಯ ಉತ್ಸಾಹಿ ಸವಾರರಿಗೆ ಸೂಕ್ತವಾದ ಬೈಕ್ ಆಗಲಿದೆ ಎಂದು ಬಜಾಜ್ ಆಟೋ ಮೋಟರ್ ಸೈಕಲ್ಸ್ ಅಧ್ಯಕ್ಷ ಸಾರಂಗ್ ಕನಡೆ ಅಭಿಪ್ರಾಯಪಟ್ಟರು.
ಬಜಾಜ್ ಡೊಮಿನಾರ್ 250 ಮೋಟಾರ್ ಸೈಕಲ್ ಸುರಕ್ಷತಾ ಮಾನದಂಡಗಳು ಹಾಗೂ ಹೆಚ್ಚಿನ ಟ್ರಾನ್ಸ್‌ಮಿಷನ್ ಸಾಮರ್ಥ್ಯ ಹೊಂದಿದೆ. ಇದರ ಬೆಲೆಯು ₹ 1.6 ಲಕ್ಷ (ಎಕ್ಸ್ ಶೋರೂಮ್ ದರ) ನಿಗದಿಪಡಿಸಲಾಗಿದ್ದು, 248.8 ಲಿಕ್ವಿಡ್ ಎಂಜಿನ್ 27 ಪಿಎಸ್ ಶಕ್ತಿ ಹೊರಹಾಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಜಾಜ್ ಡೊಮಿನಾರ್ 400 ಮೋಟಾರ್ ಸೈಕಲ್‌ನ ಬೆಲೆಗಿಂತಲೂ ಕಡಿಮೆಯಿರುವುದರಿಂದ ಗ್ರಾಹಕರು ಆರಾಮದಾಯಕವಾಗಿ ಡೊಮಿನಾರ್250 ಖರೀದಿಸಬಹುದು. ಡೊಮಿನಾರ್ 250 ಕಡಿಮೆ ಮೌಲ್ಯವನ್ನು ಹೊಂದಿರುವುದು ಮಾತ್ರವಲ್ಲದೇ ನೋಡುವುದಕ್ಕೂ ಕೂಡ ಸ್ಪೋರ್ಟ್ ಲುಕ್ ಹೊಂದಿದೆ.
ಬಜಾಜ್ ಡೊಮಿನಾರ್ 250 ಮೋಟಾರ್ ಸೈಕಲ್‌ಗಳು 248.8 ಸಿಸಿ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಎಂಜಿನ್ ಒಳಗೊಂಡಿದೆ. ಈ ಎಂಜಿನ್‌ಗಳು 8500 ಆರ್‌ಪಿಎಂನಲ್ಲಿ 27ಪಿಎಸ್ ಶಕ್ತಿ ಹಾಗೂ 6500 ಆರ್‌ಪಿಎಂನಲ್ಲಿ 23.5 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದೆ. ಈ ಬೈಕ್ 10.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಪಿಕಪ್ ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 132 ಕಿ.ಮೀ ಗರಿಷ್ಠ ವೇಗದಲ್ಲಿ ಈ ಬೈಕ್ ಕ್ರಮಿಸಬಲ್ಲದು ಎಂದು ಕಂಪನಿ ತಿಳಿಸಿದೆ.