ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಯಾದ ಆ್ಯಪಲ್ ಇಂಕಾ ಭಾರತದಲ್ಲಿ ತನ್ನ ಜನಪ್ರಿಯ ಐಫೋನ್ ಮಾದರಿಗಳ ತಯಾರಿಕೆಯನ್ನು ಆರಂಭಿಸಿದೆ ಎಂಬುದು ವರದಿಯಾಗಿದೆ.
ಅಮೆರಿಕ - ಚೀನಾ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದಿಂದ ಭಾರತದಲ್ಲಿ ಆ್ಯಪಲ್ ಕಂಪನಿ ತನ್ನ ಉತ್ಪಾದನ ಘಕವನ್ನು ತೆರೆಯುವುದಾಗಿ ಹೇಳಿತ್ತು. ಈಗ ಚೆನ್ನೈ ತಯಾರಿಕ ಘಟಕದಲ್ಲಿ ಐಫೋನ್ ಎಸ್ಇ, ಐಫೋನ್ ಎಕ್ಸ್ಆರ್, ಐಫೋನ್-6 ಎಸ್ ಹಾಗೂ ಐಫೋನ್ -7 ಶ್ರೇಣಿ ಸೇರಿದಂತೆ ಇತರ ಮಾದರಿಯ ಹಳೆಯ ಫೋನ್ಗಳ ತಯಾರಿಕೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಆ್ಯಪಲ್ ಉತ್ಪನ್ನಗಳಿಂದ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಮೆಯಾಗಲಿದೆ. ಇದರ ಹೊರತಾಗಿಯೂ ದರದಲ್ಲಿ ಯಾವುದೇ ರೀತಿಯಲೂ ಏರಿಕೆ ಮಾಡುವುದಿಲ್ಲ ಎಂದು ಆ್ಯಪಲ್ ಭರವಸೆ ನೀಡಿದೆ. ಇಲ್ಲಿ ತಯಾರಾಗುವ ಆ್ಯಪಲ್ ಉತ್ಪನ್ನಗಳು ವಿಯಾಟ್ನಾಂ, ಮೆಕ್ಸಿಕೊ, ಇಂಡೋನೇಷ್ಯಾ, ಮಲೇಷ್ಯಾ ಹಾಗೂ ತೈವಾನ್ ರಾಷ್ಟ್ರಗಳಿಗೆ ರಫ್ತು ಮಾಡುವ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಆ್ಯಪಲ್ ತನ್ನ ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್ ಮತ್ತು ಎಕ್ಸ್ಎಸ್ ಮ್ಯಾಕ್ಸ್ ಬಿಡುಗಡೆ ಮಾಡಿತ್ತು. ಇವುಗಳಲ್ಲಿ ಎ 12 ಬಯೋನಿಕ್ ಚಿಪ್ಸ್ ಒಳಗೊಂಡಂತೆ ಇತರ ವಿಶೇಷತೆಗಳನ್ನು ಅಳವಡಿಸಿತ್ತು. ಸದ್ಯ ₹ 76,900 ಮುಖಬೆಲೆಯಲ್ಲಿ ಬಿಡುಗಡೆಯಾದ ಈ ಗ್ಯಾಜೆಟ್ಗಳು ಭಾರತದಲ್ಲಿ ₹ 44,900 ಆರಂಭಿಕ ಬೆಲೆಯಲ್ಲಿ ಮಾರಾಟ ಆಗುತ್ತಿವೆ. ಪ್ರಸ್ತುತ ಐಫೋನ್ನ ಹಳೆಯ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿರುವ ಕಂಪನಿಯು ಮುಂದಿನ ದಿನಗಳಲ್ಲಿ ಐಫೋನ್ 11 ಸೇರಿದಂತೆ ಎಲ್ಲ ಮಾದರಿಯ ಉತ್ಪನ್ನಗಳನ್ನು ತಯಾರಿಸಲು ಚಿಂತನೆ ನಡೆಸಿದೆ.
ಭಾರತದ ಸ್ಮಾರ್ಟ್ಫೋನ್ ಉದ್ಯಮದ ಭವಿಷ್ಯದಲ್ಲಿ ಐಫೋನ್ ಪ್ರಮುಖ ಪಾತ್ರವಹಿಸಲಿದೆ. ಭಾರತ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಮಾರುಕಟ್ಟೆ ಆಗಿದೆ. ದುಬಾರಿ ಬೆಲೆಯ ಆ್ಯಪಲ್ ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದನೆ ಆಗುವುದುರಿಂದ ಶೇ. 20ರಷ್ಟು ಆಮದು ಸುಂಕ ಕಡಿತಗೊಳ್ಳಲಿದೆ. ಇದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.