ನವದೆಹಲಿ : ಸೂಯೆಜ್ ಕಾಲುವೆಯಲ್ಲಿ ಸಿಲುಕಿ ಸುಮಾರು ಒಂದು ವಾರ ಜಲಮಾರ್ಗವನ್ನು ನಿರ್ಬಂಧಿಸಿದ್ದ ದೈತ್ಯ ಕಂಟೇನರ್ ಎವರ್ ಗಿವನ್ ಹಡಗು ತೆರವಿನ ಬಗ್ಗೆ ಡೈರಿ ಬ್ರಾಂಡ್ ಅಮೂಲ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಡೂಡಲ್ ಒಂದನ್ನು ಹಂಚಿಕೊಂಡಿದ್ದು ನೆಟ್ಟಿಗರ ಮನಗೆದ್ದಿದೆ.
ತಮ್ಮ ಹೊಸ ಡೂಡಲ್ ಗ್ರಾಫಿಕ್‌ನಲ್ಲಿ ಅಮೂಲ್ ಬೇಬಿ, ಸೂಯೆಜ್ ಕಾಲುವೆಯ ಮರಳಿನ ರಾಶಿಯಲ್ಲಿ ಸಿಲುಕಿದ್ದ ಬೃಹತ್ ಕಂಟೇನರ್ ಹಡಗು ಮೇಲೆತ್ತಲು ಸಿಬ್ಬಂದಿ ಹರ ಸಾಹಸಪಟ್ಟರು. ಎವರ್ ಗಿವನ್‌ನ ನೀರಿನ ಮೇಲೆ ತೇಲಿಸಲು ದಣಿವರಿಯದೆ ಶ್ರಮಿಸಿದರು.
- " class="align-text-top noRightClick twitterSection" data="
">
ಆ ಮೂಲಕ ಜಲಮಾರ್ಗಕ್ಕೆ ಅಡ್ಡಿಯಾಗಿದ್ದ ಹಡಗನ್ನು ಸರಿಯಾದ ಮಾರ್ಗಕ್ಕೆ ತಂದಿತು ಎಂಬುದನ್ನು ರೂಪಕವಾಗಿ ಚಿತ್ರಿಸಿದೆ. ಅಮೂಲ್ ಬೇಬಿ ಈ ಸಿಬ್ಬಂದಿ ಸದಸ್ಯರಲ್ಲಿ ಒಬ್ಬಳಾಗಿ ಡೂಡಲ್ನಲ್ಲಿ ಕಾಣಿಸಿಕೊಂಡಿದ್ದಾಳೆ.
ಸೂಯೆಜ್ ಸಮಸ್ಯೆ ತೆರವಾಗಿದೆ ಎಂಬ ಗ್ರಾಫಿಕ್ನ ಶೀರ್ಷಿಕೆ, ಅಮೂಲ್! ಎವರ್ ಗಿವನ್ ಫಾರ್ ಟೆಸ್ಟ್ ಎಂದು ಉಪ ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸುಮಾರು 38 ಸಾವಿರ ನೆಟ್ಟಿಗರು ಲೈಕ್ ಮಾಡಿದ್ದು, ಸಾವಿರಾರು ಜನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.