ಡಲ್ಲಾಸ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಪ್ರಯಾಣದಲ್ಲಿ ತೀವ್ರ ಕುಸಿತ ಕಾಣುತ್ತಿದ್ದ ತನ್ನ ಉಳಿವಿಗಾಗಿ ಅಮೆರಿಕನ್ ಏರ್‌ಲೈನ್ಸ್ ಸಂಸ್ಥೆಯು ಸಿಬ್ಬಂದಿ ಫರ್ಲಫ್ ಮತ್ತು ವಜಾಗೊಳಿಸುವ ಪ್ರಕ್ರಿಯೆಗೆ ಮುಂದಾಗಿದೆ.
19,000 ಫರ್ಲಫ್ ಹಾಗೂ ವಜಾ ಸೇರಿದಂತೆ 40,000ಕ್ಕೂ ಅಧಿಕ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ.
ಫೆಡರಲ್ ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ 25 ಶತಕೋಟಿ ಡಾಲರ್ ನಿಧಿ ನೀಡಿ ಆರು ತಿಂಗಳ ಕಾಲ ಕಾರ್ಮಿಕ ವೆಚ್ಚ ಭರಿಸಲು ನೆರವಾದರೆ ಮಾತ್ರ ಫರ್ಲಫ್ ತಪ್ಪಿಸಬಹುದು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
23,500 ಉದ್ಯೋಗಿಗಳು ಮುಂಚೆಯೇ ನಿವೃತ್ತರಾಗಿದ್ದಾರೆ ಅಥವಾ ದೀರ್ಘಾವಧಿಯ ರಜೆಗಳನ್ನು ತೆಗೆದುಕೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಆದರೆ ಈ ಸಂಖ್ಯೆಯು ಅನೌಪಚಾರಿಕ ಕಡಿತವನ್ನು ತಪ್ಪಿಸಲು ಸಾಕಾಗುವುದಿಲ್ಲ ಎಂದಿದೆ.
ಮಂಗಳವಾರ ಘೋಷಿಸಿದ ಯೂನಿಯನ್ ಕಾರ್ಮಿಕರ ನಿರ್ಧಾರ ಹಾಗೂ ನಿರ್ವಹಣಾ ಸಿಬ್ಬಂದಿಯ ವಜಾಗೊಳಿಸುವಿಕೆಯು ಫ್ಲೈಟ್ ಅಟೆಂಡೆಂಟ್‌ಗಳ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ. ಅಕ್ಟೋಬರ್‌ನಲ್ಲಿ 8,100 ವಜಾಗೊಳಿಸಲಾಗುತ್ತಿದೆ. ಅಮೆರಿಕದಲ್ಲಿ ಉದ್ಯೋಗದಿಂದ ಕಡಿತಗೊಳ್ಳುವ ಪ್ರಕ್ರಿಯೆಗಳು ಹೆಚ್ಚಳವಾಗುತ್ತಿದೆ.