ETV Bharat / business

ಬ್ರಿಟನ್​ನ ಐಕಾನಿಕ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಖರೀದಿಸಿದ ಮುಖೇಶ್ ಅಂಬಾನಿ: ವಹಿವಾಟು ಇಷ್ಟಿದೆ! - ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್

ಕಳೆದ ನಾಲ್ಕು ವರ್ಷಗಳಲ್ಲಿ ರಿಲಯನ್ಸ್ 3.3 ಬಿಲಿಯನ್ ಡಾಲರ್​ನ ಸ್ವಾಧೀನ ಘೋಷಿಸಿದೆ. ಚಿಲ್ಲರೆ ವ್ಯಾಪಾರದಲ್ಲಿ 14 ಪ್ರತಿಶತ, ತಂತ್ರಜ್ಞಾನ, ಮಾಧ್ಯಮ ಮತ್ತು ಟೆಲಿಕಾಂ (ಟಿಎಂಟಿ) ವಲಯದಲ್ಲಿ 80 ಪ್ರತಿಶತ ಮತ್ತು ಶೇ 6ರಷ್ಟು ಎನರ್ಜಿಯಲ್ಲಿ ಹೂಡಿಕೆ ಮಾಡಿದೆ.

Ambani
Ambani
author img

By

Published : Apr 23, 2021, 3:24 PM IST

ನವದೆಹಲಿ : ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಅನ್ನು 57 ಮಿಲಿಯನ್ ಪೌಂಡ್‌ಗಳಿಗೆ (ಸುಮಾರು 592 ಕೋಟಿ ರೂ.) ಖರೀದಿಸಿದ್ದಾರೆ.

ಈ ಸ್ವಾಧೀನವು ರಿಲಯನ್ಸ್‌ನ ಪ್ರಸ್ತುತ ಒಬೆರಾಯ್ ಹೋಟೆಲ್‌ ಮತ್ತು ಮುಂಬೈನ ಹೋಟೆಲ್​ಗಳಲ್ಲಿ ಕೂಡ ಪಾಲು ಹೊಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ರಿಲಯನ್ಸ್ 3.3 ಬಿಲಿಯನ್ ಡಾಲರ್​ನ ಸ್ವಾಧೀನ ಘೋಷಿಸಿದೆ. ಚಿಲ್ಲರೆ ವ್ಯಾಪಾರದಲ್ಲಿ 14 ಪ್ರತಿಶತ, ತಂತ್ರಜ್ಞಾನ, ಮಾಧ್ಯಮ ಮತ್ತು ಟೆಲಿಕಾಂ (ಟಿಎಂಟಿ) ವಲಯದಲ್ಲಿ 80 ಪ್ರತಿಶತ ಮತ್ತು ಶೇ. 6ರಷ್ಟು ಎನರ್ಜಿಯಲ್ಲಿ ಹೂಡಿಕೆ ಮಾಡಿದೆ.

ಇಂಗ್ಲೆಂಡ್​ ಮೂಲದ ಬಕಿಂಗ್​ಹ್ಯಾಂಮ್​ಶೈರ್​ನಲ್ಲಿ ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಹೊಂದಿರುವ ಯುಕೆ ಮೂಲದ ಸಂಸ್ಥೆಯು ರಿಲಯನ್ಸ್​ನ ಗ್ರಾಹಕ ಮತ್ತು ಆತಿಥ್ಯ ಸ್ವತ್ತುಗಳನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಹೋಲ್ಡಿಂಗ್ಸ್ ಲಿಮಿಟೆಡ್ (ಆರ್​ಐಐಎಚ್ಎಲ್), 2021ರ ಏಪ್ರಿಲ್ 22ರಂದು ಇಂಗ್ಲೆಂಡ್​ನ ಸ್ಟೋಕ್ ಪಾರ್ಕ್ ಲಿಮಿಟೆಡ್‌ನ ಕಂಪನಿಯ ಒಟ್ಟು ಷೇರು ಬಂಡವಾಳವನ್ನು 57 ದಶಲಕ್ಷ ಪೌಂಡ್ಸ್​ಗೆ ಸ್ವಾಧೀನಪಡಿಸಿಕೊಂಡಿದೆ.

ಸ್ಟೋಕ್ ಪಾರ್ಕ್ ಲಿಮಿಟೆಡ್ ಇಂಗ್ಲೆಂಡ್​​ನ ಬಕಿಂಗ್​ಹ್ಯಾಮಶೈರ್​ನ ಸ್ಟೋಕ್ ಪೋಗ್ಸ್​ನಲ್ಲಿ ಕ್ರೀಡಾ ಮತ್ತು ವಿರಾಮ ಸೌಲಭ್ಯಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತದೆ. ಹೋಟೆಲ್, ಕಾನ್ಫರೆನ್ಸ್, ಕ್ರೀಡಾ ಸೌಲಭ್ಯಗಳು ಮತ್ತು ಯುರೋಪಿನ ಅತಿ ಹೆಚ್ಚು ರೇಟ್ ಪಡೆದ ಗಾಲ್ಫ್ ಕೋರ್ಸ್‌ಗಳು ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.