ETV Bharat / business

ಜಗತ್ತಿನ ನಂ.1 ಕುಬೇರ ಜೆಫ್ ಬೆಜೋಸ್​ ನಿತ್ಯದ ಖರ್ಚು ಕೇಳಿದ್ರೆ ಬೆಚ್ಚಿಬೀಳ್ತಿರಾ..!

author img

By

Published : Oct 19, 2019, 9:14 PM IST

ಸದಾ ಮಾರಾಟ ಕೆಲಸದಲ್ಲಿ ತೊಡಗಿಸಿಕೊಳ್ಳುವ ಜೆಫ್ ಬೆಜೋಸ್​ ಸಾಂದರ್ಭಿಕ ರಜೆ ತೆಗದುಕೊಂಡು ಕುಟುಂಬಸ್ಥರೊಂದಿಗೆ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಲಾಂಗ್ ನೌ ಫೌಂಡೇಷನ್ ಸ್ಥಾಪಿಸಿರುವ ಬೆಜೋಸ್​, 10,000 ವರ್ಷ ಬಾಳಿಕೆ ಬರುವ ಗಡಿಯಾರದ ನಿರ್ಮಾಣಕ್ಕೆ 42 ಮಿಲಿಯನ್​ ಡಾಲರ್​ ಹೂಡಿಕೆ ಮಾಡಿದ್ದಾರೆ. ಟ್ವಿಟರ್, ಉಬರ್ ಮತ್ತು ಇತರ ಅತ್ಯಾಧುನಿಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೂಗಲ್ ಸರ್ಚ್​ ಎಂಜಿನ್​ನಲ್ಲಿ ಸಹ​ 1 ಮಿಲಿಯನ್ ಡಾಲರ್​ನಷ್ಟು ಹೂಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಕಂಪನಿಯ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿ. ತಮ್ಮ ಅಗಾದ ಸಂಪತ್ತನ್ನು ನಿತ್ಯ ಹೇಗೆ ವಿನಿಯೋಗಿಸತ್ತಾರೆ ಎಂಬುದರ ವರದಿ ಇದು.

ಬ್ಲೂಮ್​ಬರ್ಗ್​ ವಿಶ್ಲೇಷಣೆಯ ಪ್ರಕಾರ, 2018ರಲ್ಲಿ ಬೆಜೋಸ್​ ಅವರ ಒಟ್ಟು ಸಂಪತ್ತು 8.7 ಲಕ್ಷ ಕೋಟಿ ರೂ.ಯಷ್ಟು (123 ಬಿಲಿಯನ್​ ಡಾಲರ್​) ಸಂಪತ್ತು ಹೊಂದಿದ್ದರು. ಇತ್ತೀಚೆಗೆ ತಮ್ಮ ಹೆಂಡತಿ ಮ್ಯಾಕೆಂಜಿ ಬೆಜೋಸ್ ಅವರಿಗೆ ವಿಚ್ಛೇದನ ನೀಡಿದ್ದು, 25 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.

ಸದಾ ಮಾರಾಟ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬೆಜೋಸ್​ ಸಾಂದರ್ಭಿಕ ರಜೆ ತೆಗದುಕೊಂಡು ಕುಟುಂಬಸ್ಥರೊಂದಿಗೆ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. 2017ರಲ್ಲಿ ಬೆಜೋಸ್ ಕುಟುಂಬದವರು ರೋಮ್​ಗೆ ತೆರಳಿದರು.

ಲಾಂಗ್ ನೌ ಫೌಂಡೇಷನ್ ಸ್ಥಾಪಿಸಿರುವ ಬೆಜೋಸ್​, 10,000 ವರ್ಷ ಬಾಳಿಕೆ ಬರುವ ಗಡಿಯಾರದ ನಿರ್ಮಾಣಕ್ಕೆ 42 ಮಿಲಿಯನ್​ ಡಾಲರ್​ ಹೂಡಿಕೆ ಮಾಡಿದ್ದಾರೆ. ಟೆಕ್ಸಾಸ್‌ನ ಸಿಯೆರಾ ಡಯಾಬ್ಲೊ ಪರ್ವತಗಳಲ್ಲಿ ವರ್ಷಕ್ಕೊಮ್ಮೆ ಟಿಕ್ ಮಾಡುವ ಗಡಿಯಾರವು ನಿರ್ಮಾಣ ಹಂತದಲ್ಲಿದೆ.

ಜೆಫ್ ಬೆಜೋಸ್ ಭಾರಿ ಬೆಲೆಯ ಗಡಿಯಾರ ಹೊಂದಿದ್ದಾರೆ. ಸ್ವಿಸ್ಕಿ ವಾಚ್‌ಮೇಕರ್ ಯುಲಿಸ್ ನಾರ್ಡಿನ್ ತಯಾರಿಸಿರುವ ಗಡಿಯಾರದ ಚಿಲ್ಲರೆ ದರವು 8,000 ದಿಂದ 12,000 ಡಾಲರ್​ ಇದೆ. ಅತೀ ವಿರಳವಾದ ಹರಳು, ಚಿನ್ನದಿಂದ ತಯಾರಿಸಲಾಗಿದ್ದು, ಇದರ ಬಿಡಿ ಭಾಗಗಳು 1846ಕ್ಕಿಂತ ಹಿಂದಿನವು.

ಬೆಜೋಸ್‌ ಬ್ಲೂ ಆರಿಜಿನ್ ಎಂಬ ಏರೋಸ್ಪೇಸ್ ಕಂಪನಿಯ ಸ್ಥಾಪಕರು. ಬಾಹ್ಯಾಕಾಶ ಯಾನ ಮಾಡುವ ಕನಸು ಕಂಡವರ ಆಸೆ ಈಡೇರಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದಾರೆ. ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ಯಾನಕ್ಕೆ ಪ್ರತಿವರ್ಷ ಅಮೆಜಾನ್​ ಷೇರುಗಳನ್ನು ಮಾರಾಟ ಮಾಡಿ ಸುಮಾರು 1 ಬಿಲಿಯನ್ ಡಾಲರ್​ನಷ್ಟು ಸಂಪತ್ತು ಬ್ಲೂ ಆರಿಜಿನ್‌ಗೆ ನೀಡುವುದಾಗಿ ಹೇಳಿದ್ದಾರೆ.

ಬ್ಲೂ ಆರಿಜಿನ್‌ ಮತ್ತು 10,000 ವರ್ಷಗಳ ಗಡಿಯಾರ ಸಾಹಸೋದ್ಯಮದ ಭಾಗವಾಗಿದ್ದು ಎರ್‌ಬಿಎನ್‌ಬಿ, ಟ್ವಿಟರ್, ಉಬರ್ ಮತ್ತು ಇತರ ಅತ್ಯಾಧುನಿಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೂಗಲ್ ಸರ್ಚ್​ ಎಂಜಿನ್​ನಲ್ಲಿ ಸಹ​ 1 ಮಿಲಿಯನ್ ಡಾಲರ್​ನಷ್ಟು ಹೂಡಿದ್ದಾರೆ. ​

ಬೆಜೋಸ್ ನ್ಯೂಯಾರ್ಕ್​ನ ಎತ್ತರದ ಬಹುಮಹಡಿ ಕಟ್ಟಡದಲ್ಲಿ ಬೃಹತ್ ಅಪಾರ್ಟ್​ಮೆಂಟ್​ ಹೊಂದಿದ್ದಾರೆ. ಮ್ಯೂಸಿಕ್​ ಉದ್ಯಮದ ಕಾರ್ಯನಿರ್ವಾಹಕ ಟಾಮಿ ಮೊಟೊಲಾ ಅವರಿಂದ 1999ರಲ್ಲಿ ಖರೀದಿಸಿದ್ದು, 10,000 ಚದರ ಅಡಿಗಳ ಒಟ್ಟು ಮೂರು ಕನೆಕ್ಟಿವಿಟಿಯ ಅಪಾರ್ಟ್‌ಮೆಂಟ್‌ ಹೊಂದಿದೆ.

ಅಮೆಜಾನ್‌ನ ತವರೂರಾದ ಸಿಯಾಟಲ್‌ನಲ್ಲಿ ಬೆಜೋಸ್ ನಾಲ್ಕು ಡೌನ್​ಟೌನ್ ಸಿಟಿ ಬ್ಲಾಕ್‌ಗಳನ್ನು ಖರೀದಿಸಿದ್ದಾರೆ. ಹಿಂದೆಂದೂ ಕಂಡಿರದಂತಹ ಅತ್ಯಾಧುನಿಕ ಕಚೇರಿಗಳನ್ನು ಇಲ್ಲಿ ನಿರ್ಮಿಸಲಿದ್ದಾರೆ. ಬೆಜೋಸ್ 2013ರಲ್ಲಿ ಅಮೆರಿಕದ ಪ್ರತಿಷ್ಠಿತ ದಿ ವಾಷಿಂಗ್ಟನ್​ ಪೋಸ್ಟ್​ ಪತ್ರಿಕೆಯನ್ನು 250 ಮಿಲಿಯನ್ ಡಾಲರ್​ಗೆ ಖರೀದಿಸಿದ್ದಾರೆ. ಸ್ಪ್ಯಾನಿಷ್​​ ಸೇರಿದಂತೆ ಇತರ ಸ್ಥಳೀಯ ಭಾಷೆಗಳ ಪತ್ರಿಕೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

'ಬೆಜೋಸ್ ಫ್ಯಾಮಿಲಿ ಫೌಂಡೇಷನ್', ಬೆಜೋಸ್ ಅವರ ಎಲ್ಲ ಸಾಮಾಜಕ ಕಾರ್ಯಗಳ ವ್ಯವಹಾರವನ್ನು ನಿರ್ವಹಿಸುತ್ತದೆ. ಮಾರ್ಕ್ ಜುಕರ್‌ಬರ್ಗ್ ಮತ್ತು ಬಿಲ್ ಗೇಟ್ಸ್‌ ಅವರಿಗೆ ಹೋಲಿಸಿದರೆ ಬೆಜೋಸ್​ ಅವರ ಕೊಡುಗೆ ಕಡಿಮೆ.

ವಾಷಿಂಗ್ಟನ್‌ನ ಮದೀನಾದಲ್ಲಿರುವ ಬೆಜೋಸ್​ ಎಸ್ಟೇಟ್, 10 ಎಕರೆಯಷ್ಟು ವಿಸ್ತಾರವಾಗಿದೆ. ಎರಡು ಮನೆಗಳು ಹೊಂದಿದ್ದು, ಪ್ರತಿಯೊಂದೂ ಮನೆ ಐದು ಮಲಗುವ ಕೋಣೆಗಳು ಮತ್ತು ನಾಲ್ಕು ಸ್ನಾನ ಗೃಹ ಇವೆ. ಇಲ್ಲಿಂದ ಅಮೆಜಾನ್​ನ ಮುಖ್ಯ ಕಚೇರಿಯನ್ನು 15 ನಿಮಿಷದಲ್ಲಿ ತಲುಪಬಹುದು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.