ETV Bharat / business

2020 ಬ್ಲಾಕ್​ ಫ್ರೈಡೇ ಸೇಲ್​: 4 ದಿನದಲ್ಲಿ 4.8 ಶತಕೋಟಿ ಡಾಲರ್​ ವಹಿವಾಟು! - ಅಮೆಜಾನ್ ಅತಿದೊಡ್ಡ ಹಾಲಿಡೇ ಮಾರಾಟ

ವಿಶ್ವಾದ್ಯಂತ 71,000ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು (ಎಸ್‌ಎಂಬಿ) ಈ ರಜಾದಿನಗಳಲ್ಲಿ 1 ಲಕ್ಷ ಡಾಲರ್ ಮೀರಿದೆ. ಆದರೆ, ಕಂಪನಿಯು ಇಡೀ ವರ್ಷದ ಅಂಕಿಅಂಶಗಳನ್ನು ಮಾತ್ರವೇ ಬಹಿರಂಗಪಡಿಸಲಿಲ್ಲ.

Amazon
ಅಮೆಜಾನ್​
author img

By

Published : Dec 1, 2020, 9:43 PM IST

ನವದೆಹಲಿ: ಅಮೆಜಾನ್‌ನಲ್ಲಿ ಬ್ಲಾಕ್ ಫ್ರೈಡೇಯಿಂದ ಸೈಬರ್​ ಮಂಡೇ ತನಕ ವಿಶ್ವಾದ್ಯಂತದ ಮಾರಾಟವಾದ ಸರಕುಗಳ ಮೌಲ್ಯ 4.8 ಶತಕೋಟಿ ಡಾಲರ್​ ಮೀರಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಕಂಪನಿಯ ಅತಿದೊಡ್ಡ ರಜಾದಿನದ ಶಾಪಿಂಗ್ ಋತುವಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ 60ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.

ವಿಶ್ವಾದ್ಯಂತ 71,000ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು (ಎಸ್‌ಎಂಬಿ) ಈ ರಜಾದಿನಗಳಲ್ಲಿ 1 ಲಕ್ಷ ಡಾಲರ್ ಮೀರಿದೆ. ಆದರೆ, ಕಂಪನಿಯು ಇಡೀ ವರ್ಷದ ಅಂಕಿಅಂಶಗಳನ್ನು ಮಾತ್ರವೇ ಬಹಿರಂಗಪಡಿಸಲಿಲ್ಲ.

509 ಕೋಟಿ ರೂ.ಗೆ ತಲುಪಿದ ಜೀವ ವಿಮಾರಹಿತ ಇನ್ಶೂರೆನ್ಸ್​ ವಲಯದ ಎಫ್​ಡಿಐ

ಅಮೆಜಾನ್‌ನಲ್ಲಿ ಮಾರಾಟವಾಗುವ ಸ್ವತಂತ್ರ ವ್ಯವಹಾರಗಳೆಲ್ಲವೂ ಸಣ್ಣ ಮತ್ತು ಮಧ್ಯಮ ಗಾತ್ರದ್ದಾಗಿವೆ. ಅಮೆರಿಕ ಮತ್ತು ವಿಶ್ವದಾದ್ಯಂತ ಈ ರಜಾದಿನಗಳಲ್ಲಿ ಗ್ರಾಹಕರಿಂದ ದಾಖಲೆಯ ಬೇಡಿಕೆ ಕಂಡಿದೆ ಎಂದು ಇ-ಕಾಮರ್ಸ್ ದೈತ್ಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವಾದ್ಯಂತ ಅಮೆಜಾನ್‌ನಲ್ಲಿ ಮಾರಾಟವಾಗುವ ಸ್ವತಂತ್ರ ವ್ಯವಹಾರಗಳು ಅಂದಾಜು 2.2 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ. ಅಮೆರಿಕದ ಎಸ್‌ಎಂಬಿಗಳು ಈ ರಜಾದಿನಗಳಲ್ಲಿ ಇಲ್ಲಿಯವರೆಗೆ ನಿಮಿಷಕ್ಕೆ ಸರಾಸರಿ 9,500 ಉತ್ಪನ್ನಗಳನ್ನು ಮಾರಾಟ ಮಾಡಿವೆ. 2020ರ ಸೈಬರ್ ಸೋಮವಾರವು ಕಂಪನಿಯ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ರಜಾ ಶಾಪಿಂಗ್ ಋತುವಾಗಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.