ಮುಂಬೈ: ನವೆಂಬರ್ 11ರಿಂದ ಕೋಯಿಕೋಡ್‌ನಿಂದ ಬೆಂಗಳೂರಿಗೆ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ ಎಂದು ಅಲೈಯನ್ಸ್ ಏರ್ ತಿಳಿಸಿದೆ.
ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ಬಾರಿ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಾಗುವುದು ಎಂದು ಅಲೈಯನ್ಸ್ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡು ನಗರಗಳ ನಡುವಿನ ದಟ್ಟಣೆ ಪೂರೈಸಲು ಏರ್ ಇಂಡಿಯಾದ ಪ್ರಾದೇಶಿಕ ಅಂಗಸಂಸ್ಥೆಯು ತನ್ನ 70 ಆಸನಗಳ ಎಟಿಆರ್ 72 ವಿಮಾನಗಳಲ್ಲಿ ಒಂದನ್ನು ನಿಯೋಜಿಸಲಿದೆ. ಫ್ಲೈಟ್ 9ಐ- 521 ವಿಮಾನವು ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 7.55ಕ್ಕೆ ಕೋಯಿಕೋಡ್‌ಗೆ ತಲುಪಲಿದೆ ಎಂದಿದೆ.
ಕೋಯಿಕೋಡ್‌ನಿಂದ 9ಐ- 522 ಹೆಸರಿನಡಿ ಬೆಳಗ್ಗೆ 8.25ಕ್ಕೆ ಹೊರಟು ಬೆಳಗ್ಗೆ 9.40ಕ್ಕೆ ಬೆಂಗಳೂರು ತಲುಪಲಿದೆ.
ದೆಹಲಿ ಮೂಲದ ವಿಮಾನಯಾನ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 65 ಕೋಟಿ ರೂ. ಕಾರ್ಯಾಚರಣಾ ಲಾಭದ ವರದಿ ಮಾಡಿದೆ. 1996ರಲ್ಲಿ ತನ್ನ ವಿಮಾನ ಸೇವೆ ಪ್ರಾರಂಭಿಸಿತ್ತು. ಪ್ರಸ್ತುತ, ವಿಮಾನಯಾನವು ಏಳು ಹಬ್‌ಗಳ ಮೂಲಕ 43 ದೇಶೀಯ ಸ್ಥಳಗಳಿಗೆ ಹಾರಾಟ ನಡೆಸುತ್ತಿದೆ.