ETV Bharat / business

32 ಕೋಟಿ ಮೊಬೈಲ್​​​​​ ಬಳಕೆದಾರರ ಡೇಟಾ ಮಾಹಿತಿ ಸೋರಿಕೆ... ಇದರಲ್ಲಿ ನಿಮ್ಮ ಸಿಮ್​​​​ ಇದಿಯಾ?

ಏರ್​ಟೆಲ್​ ಮೊಬೈಲ್ ಆ್ಯಪ್​ನಲ್ಲಿನ ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್​ಫೇಸ್​​ನಲ್ಲಿ (ಎಪಿಐ) ಗಂಭೀರವಾದ ಭದ್ರತಾ ದೋಷ ಕಂಡುಬಂದಿದೆ. ಇದರಿಂದಾಗಿ ಚಂದಾದಾರರ ಮಾಹಿತಿ ಬಹಿರಂಗಗೊಂಡು ಜನಸಾಮನ್ಯರಿಗೂ ಸಿಗುವಂತಾಗಿತ್ತು ಎಂದು ಎಹ್ರಾಜ್ ಅಹ್ಮದ್ ಎಂಬುವವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

Data
ಡೇಟಾ ಸೋರಿಕೆ
author img

By

Published : Dec 9, 2019, 12:26 PM IST

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ಭಾರ್ತಿ ಏರ್‌ಟೆಲ್‌ನ 32 ಕೋಟಿಗೂ ಅಧಿಕ ಚಂದಾದಾರರ ಡೇಟಾ ಮಾಹಿತಿ ಸೋರಿಕೆಯಾಗಿದೆ ಎಂದು ಬೆಂಗಳೂರು ಮೂಲದ ಸಂಶೋಧಕರೊಬ್ಬರು ಪತ್ತೆ ಹಚ್ಚಿದ್ದಾರೆ.

ಏರ್​ಟೆಲ್​ ಮೊಬೈಲ್ ಆ್ಯಪ್​ನಲ್ಲಿನ ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್​ಫೇಸ್​​ನಲ್ಲಿ (ಎಪಿಐ) ಗಂಭೀರವಾದ ಭದ್ರತಾ ದೋಷ ಕಂಡುಬಂದಿದೆ. ಇದರಿಂದಾಗಿ ಚಂದಾದಾರರ ಮಾಹಿತಿ ಬಹಿರಂಗಗೊಂಡು ಜನಸಾಮನ್ಯರಿಗೂ ಸಿಗುವಂತಾಗಿತ್ತು ಎಂದು ಎಹ್ರಾಜ್ ಅಹ್ಮದ್ ಎಂಬುವವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಏರ್​ಟೆಲ್ ತನ್ನ ಅಪ್ಲಿಕೇಷನ್​ಗೆ ಸಂಬಂಧಿಸಿದ ಭದ್ರತಾ ದೋಷವನ್ನು ಸರಿಪಡಿಸಲಾಗಿದೆ. ಈಗ ಯಾವುದೇ ಲೋಪದೋಷವಿಲ್ಲ ಎಂದು ಏರ್​ಟೆಲ್​ ದೃಢಪಡಿಸಿದೆ.

ಸೋರಿಕೆಯಾದ ಡೇಟಾ ಮಾಹಿತಿಯಲ್ಲಿ ಚಂದಾದಾರರ ಮೊದಲ ಮತ್ತು ಕೊನೆಯ ಹೆಸರು, ಲಿಂಗ, ಇ-ಮೇಲ್, ಜನ್ಮ ದಿನಾಂಕ, ವಿಳಾಸ, ಚಂದಾದಾರಿಕೆಯ ಮಾಹಿತಿ, 4ಜಿ, 3ಜಿ ಮತ್ತು ಜಿಪಿಆರ್​​ಎಸ್ ಸಾಧನ ಸಾಮರ್ಥ್ಯದ ಮಾಹಿತಿ, ನೆಟ್‌ವರ್ಕ್, ಸಕ್ರಿಯಗೊಳಿಸಿದ ದಿನಾಂಕ, ಬಳಕೆದಾರರ (ಪ್ರಿಪೇಯ್ಡ್ / ಪೋಸ್ಟ್‌ಪೇಯ್ಡ್) ಮತ್ತು ಪ್ರಸ್ತುತ ಐಎಂಇಐ ಸಂಖ್ಯೆ ಸೇರಿದೆ ಎಂದು ಅಹ್ಮದ್ ಬರೆದುಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.