ನವದೆಹಲಿ: ದ್ವಿಚಕ್ರ ವಾಹನ ವಿಮಾ ಸೇವೆಗಾಗಿ ಭಾರ್ತಿ ಎಎಕ್ಸ್ಎ ಜನರಲ್ ಇನ್ಶ್ಯೂರೆನ್ಸ್ ಜೊತೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಪಾಲುದಾರಿಕೆ ಒದಗಿಸುವುದಾಗಿ ಘೋಷಣೆ.
ಮೊದಲ ಹಂತದ ಭಾಗವಾಗಿ ದೇಶಾದ್ಯಂತ ಆಯ್ದ ನಗರಗಳಲ್ಲಿ 40,000ಕ್ಕೂ ಅಧಿಕ ಏರ್ಟೆಲ್ ಪಾವತಿ ಬ್ಯಾಂಕ್ ಸೇವಾ ಕೇಂದ್ರಗಳನ್ನು ಹಾಗೂ ಮೈಏರ್ಟೆಲ್ ಆ್ಯಪ್ ಸೇವೆಯನ್ನು ಗ್ರಾಹಕರಿಗೆ ಕಲ್ಪಿಸಲಾಗುವುದು ಎಂದು ಏರ್ಟೆಲ್ ಪೇಮೆಂಟ್ ತಿಳಿಸಿದೆ.
ವಿಮಾ ಸೇವೆಯು ವೈಯಕ್ತಿಕ ಅಪಘಾತ ಸುರಕ್ಷತೆ, ಮೂರನೇ ವ್ಯಕ್ತಿಯ ಹೊಣೆಗಾರಿಕೆ, ವೇಗದ ತಪಾಸಣೆ ಮುಕ್ತ ನವೀಕರಣ ಸೇರಿದಂತೆ ಇತರೆ ಕಾಗದ ಮುಕ್ತ ಸೇವೆಗಳು ಇದರಲ್ಲಿ ಲಭ್ಯವಾಗಲಿವೆ.