ETV Bharat / business

‘ಏರ್​ಟೆಲ್​ ವೈಫೈ ಕಾಲಿಂಗ್’ ಸೇವೆ ಈಗ ಈ ನಗರಗಳಲ್ಲಿ ಲಭ್ಯ! - Airtel Wi Fi Calling news,

ಮೊಬೈಲ್​ ಬಳಕೆದಾರರು ಟವರ್​ ಬಳಿಯಿದ್ದರೂ ನೆಟ್​ವರ್ಕ್​ ಸಿಗುತ್ತಿಲ್ಲ ಎಂಬ ಗ್ರಾಹಕ ದೂರುಗಳನ್ನು ಆಲಿಸಿದ ಏರ್​ಟೆಲ್​ ಕಂಪನಿ ಹೊಸ ಸೇವೆ ಆರಂಭಿಸಿದೆ.

Airtel Wi Fi Calling, Airtel Wi Fi Calling news, Airtel Wi Fi Calling latest news, ಏರ್​ಟೆಲ್​ ವೈಫೈ ಕಾಲಿಂಗ್​, ಏರ್​ಟೆಲ್​ ವೈಫೈ ಕಾಲಿಂಗ್​ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 23, 2019, 10:18 PM IST

ನೆಟ್​ವರ್ಕ್​ ಸಿಗುತ್ತಿಲ್ಲ, ನಿಧಾನಗತಿಯ ನೆಟ್​ವರ್ಕ್ ಸೇವೆ ಅಂತಾ ಗ್ರಾಹಕರು ಏರ್​ಟೆಲ್ ಕಂಪನಿಗೆ ದೂರು ಸಲ್ಲಿಸಿದ್ದರು. ಈ ದೂರುಗಳನ್ನು ಪಡೆದ ಏರ್​ಟೆಲ್​ ಉತ್ತಮ ನೆಟ್​ವರ್ಕ್​ ನೀಡಲು ಹೊಸ ಸೇವೆ ಕಾರ್ಯರೂಪಕ್ಕೆ ತರುತ್ತಿದೆ.

ಹೌದು, ಇದೇ ಮೊದಲ ಬಾರಿ ಭಾರತದಲ್ಲಿ ವೈಫೈ ಮೂಲಕ ಕರೆ ಸೇವೆಯನ್ನು ನೀಡಲು ಭಾರ್ತಿ ಏರ್​ಟೆಲ್ ಮುಂದಾಗಿದೆ. ಈ ಮೂಲಕ ಬಳಕೆದಾರರು ವೈಫೈ ಅಡಿಯಲ್ಲಿ ಕರೆ ಮಾಡಲು ಸಾಧ್ಯವಾಗುವಂತಹ ಹೊಸ ಸೌಲಭ್ಯವನ್ನು ಏರ್​ಟೆಲ್ ಪ್ರಸ್ತುತಪಡಿಸಲಿದೆ.

ಏರ್​ಟೆಲ್ ಪರಿಚಯಿಸುತ್ತಿರುವ ಹೊಸ ಸೇವೆ ‘ಏರ್​ಟೆಲ್​ ವೈಫೈ ಕಾಲಿಂಗ್​’ ಮೂಲಕ ನೀವು ಸೆಲ್ಯುಲಾರ್ ನೆಟ್‌ವರ್ಕ್ ಸಹಾಯವಿಲ್ಲದೆ ಕರೆಗಳನ್ನು ಮಾಡಬಹುದು. ಈಗಾಗಲೇ ಈ ಸೇವೆಯನ್ನು ನವದೆಹಲಿಯಲ್ಲಿ ಏರ್​ಟೆಲ್​ ಪರಿಚಯಿಸಿದ್ದು, ಈಗ ಮುಂಬೈ, ಕೋಲ್ಕತ್ತಾ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ಸೇವೆ ವಿಸ್ತರಿಸುತ್ತಿದೆ. ಏರ್​ಟೆಲ್​ ವೈಫೈ ಕಾಲಿಂಗ್​ ಸೇವೆಯನ್ನು ವೈಫೈ ನೆಟ್​ವರ್ಕ್​ ಮೂಲಕ ಪಡೆಯಬಹುದಾಗಿದೆ. ಈ ಸೇವೆ ಮೂಲಕ ಗ್ರಾಹಕರು ಟೆಲ್ಕೋ ಗ್ರೇಡ್​ ಕರೆಯಿಂದ ಯಾವುದೇ ನೆಟ್​ವರ್ಕ್​ಗೆ ಕರೆ ಮಾಡಿ ಮಾತನಾಡಬಹುದಾಗಿದೆ.

ಇನ್ನು ಏರ್​ಟೆಲ್​ ವೈಫೈ ಕಾಲಿಂಗ್​ ಮೂಲಕ ಗ್ರಾಹಕರು ಉಚಿತವಾಗಿ ಸೇವೆ ಪಡೆಯಬಹುದಾಗಿದೆ. ಆದ್ರೆ ನೀವು ಕರೆ ಮಾಡಬೇಕಾಗಿದ್ರೆ ನಿಮ್ಮ ಮೊಬೈಲ್​ನಲ್ಲಿ ಇಂಟರ್​ನೆಟ್​ ಡಾಟಾ ಹೊಂದಿರಬೇಕು. ಯಾವುದೇ ಸ್ಮಾರ್ಟ್​ ಫೋನ್​ ಮೂಲಕವೂ ಏರ್​ಟೆಲ್​ ಗ್ರಾಹಕರು ಈ ಸೇವೆ ಪಡೆಯಬಹುದಾಗಿದೆ ಎಂದು ಏರ್​ಟೆಲ್​ ತಿಳಿಸಿದೆ.

Intro:Body:

New

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.