ನವದೆಹಲಿ: ಏಜೆಂಟ್ ಸ್ಮಿತ್ ಎಂಬ ಹೆಸರಿನ ಮಾಲ್ವೇರ್ ವೈರಸ್ ಜಗತ್ತಿನಾದ್ಯಂತ ಇರುವ 25 ಮಿಲಿಯನ್ ಮೊಬೈಲ್ಗಳನ್ನು ಬಾಧಿಸಿದೆ.
ಇದರಲ್ಲಿ ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಏಜೆಂಟ್ ಸ್ಮಿತ್ ದಾಳಿಗೆ ಒಳಗಾಗಿದ್ದು, ಚೆಕ್ ಪಾಯಿಂಟ್ (Check Point) ಎಂಬ ಸೈಬರ್ ಭದ್ರತಾ ಕಂಪನಿಯು ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.
ಗೂಗಲ್ ಸಂಬಂಧಿಸಿದ ತಂತ್ರಾಂಶದ ಸೋಗಿನಲ್ಲಿ ಸ್ಮಾರ್ಟ್ಫೋನ್ಗಳ ಒಳ ನುಸುಳುವ ಏಜೆಂಟ್ ಸ್ಮಿತ್, ಉಳಿದ ಎಲ್ಲ ಅಪ್ಲಿಕೇಷನ್ಗಳಿಗೆ ಧಕ್ಕೆ ತರುತ್ತದೆ. ಬಳಕೆದಾರರ ಅರಿವಿಗೆ ಬಾರದಂತೆ ಇತರ ಅಪಾಯಕಾರಿ ಅಪ್ಲಿಕೇಷನ್ಗಳಿಂದ ಬದಲಾಯಿಸುತ್ತದೆ ಎಂದು ಚೆಕ್ ಪಾಯಿಂಟ್ ಎಚ್ಚರಿಸಿದೆ.
ಹಣಗಳಿಸುವ ವ್ಯವಹಾರಿಕ ಜಾಹೀರಾತುಗಳನ್ನು ಪ್ರದರ್ಶಿಸುವ ಈ ಮಾಲ್ವೇರ್ ಬಳಕೆದಾರರ ರಹಸ್ಯ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಆ್ಯಂಡ್ರಾಯಿಡ್ ಫೋನ್ಗಳೇ ಇದರ ಸುಲಭದ ಟಾರ್ಗೆಟ್ ಎಂದು ಅದು ತಿಳಿಸಿದೆ.