ಬೀಜಿಂಗ್: ಚೀನಾ ಮೂಲದ ಷಿಯೋಮಿ ಮೊಬೈಲ್ ಕಂಪನಿಯ ನೂತನ ಮೊಬೈಲ್ ರೆಡ್ಮಿ ಕೆ-30 ಇಂದು ಚೀನಾದ ಮಾರುಕಟ್ಟೆ ಪ್ರವೇಶಿಸಲಿದೆ.
ಆದರೆ ರೆಡ್ಮಿ ಕೆ30 ಬಿಡುಗಡೆಗೂ ಒಂದು ದಿನ ಮುನ್ನವೇ ಒಂದಷ್ಟು ಮಾಹಿತಿಗಳು ಸೋರಿಕೆಯಾಗಿವೆ. ರೆಡ್ಮಿ ಕೆ30 ಮೊಬೈಲ್ನ ಅಧಿಕೃತ ಫೋಟೋಗಳು ಬಿಡುಗಡೆಗೂ ಹಿಂದಿನ ದಿನ ಹಲವಾರು ವೆಬ್ಸೈಟ್ಗಳಲ್ಲಿ ಲೀಕ್ ಆಗಿದೆ.
ರೆಡ್ಮಿ ಕೆ30 ವಿಶೇಷತೆಗಳು:
ಈ ಮೊಬೈಲ್ನಲ್ಲಿ ಡ್ಯೂಯೆಲ್ ಸೆಲ್ಫಿ ಕ್ಯಾಮರಗಳಿದ್ದು, ಅದ್ಭುತ ಸೆಲ್ಫಿ ತೆಗೆಯಬಹುದಾಗಿದೆ. ರೆಡ್ಮಿ ಕೆ-20 ಮೊಬೈಲ್ಗೆ ಹೋಲಿಕೆ ಮಾಡಿದಲ್ಲಿ ನೂತನ ಮೊಬೈಲ್ ವಿನ್ಯಾಸ ಕೊಂಚ ಭಿನ್ನವಾಗಿದೆ.
ಹಿಂಬದಿಯಲ್ಲಿ 64MP, 8MP ಹಾಗೂ 2MP ಮೂರು ಕ್ಯಾಮರಾಗಳಿದ್ದು, ಉತ್ತಮ ಗುಣಮಟ್ಟದ ಫೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ.
ರೆಡ್ಮಿ ಕೆ-30 6.7 ಇಂಚಿನ LCD ಡಿಸ್ಲೇ ಹೊಂದಿದೆ. ಈ ಮೊಬೈಲ್ನಲ್ಲಿ 5G ಹಾಗೂ 4G ಸಾಮರ್ಥ್ಯದ ಎರಡೂ ಮಾದರಿಯ ಫೋನ್ಗಳು ಲಭ್ಯವಿರಲಿದೆ. 5G ಸಾಮರ್ಥ್ಯದಲ್ಲಿ ಸ್ನ್ಯಾಪ್ಡ್ರಾಗನ್ 765G(8GB RAM) ಪ್ರೊಸೆಸರ್ ಇದ್ದರೆ 4G ಸಾಮರ್ಥ್ಯದಲ್ಲಿ 730G(6GB RAM) ಪ್ರೊಸೆಸರ್ ಹೊಂದಿರಲಿದೆ.
ಚೀನಾದಲ್ಲಿ ಇಂದು ಬಿಡುಗಡೆಯಾಗುತ್ತಿರುವ ರೆಡ್ಮಿ ಕೆ30 ಭಾರತದಲ್ಲಿ ಮುಂದಿನ ವರ್ಷಾರಂಭದಲ್ಲಿ ದೊರೆಯಲಿದೆ. ಮಾಹಿತಿ ಪ್ರಕಾರ ಈ ಮೊಬೈಲ್ ಬೆಲೆ ಭಾರತದಲ್ಲಿ ₹20,000ಕ್ಕಿಂತ ಕಡಿಮೆ ಇರಲಿದೆ.