ETV Bharat / business

ಕ್ರೆಡಿಟ್, ಡೆಬಿಟ್ ಕಾರ್ಡ್‌ ವಂಚನೆ: ಭಾರತೀಯರಿಗೆ ಎಚ್ಚರಿಕೆ ನೀಡಿದ ವಿಶ್ವಬ್ಯಾಂಕ್ - fraudulent issuance of credit, debit cards

ಭಾರತದಲ್ಲಿ ವಿಶ್ವ ಬ್ಯಾಂಕ್​ನ ಹೆಸರು ಮತ್ತು ಲೋಗೋ ಬಳಸಿ ನಕಲಿ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ವಿತರಣೆಯಾಗುವ ಘಟನೆಗಳು ಬೆಳಕಿಗೆ ಬಂದಿದ್ದು, ದೇಶದ ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವರ್ಲ್ಡ್​ ಬ್ಯಾಂಕ್​ ಸೂಚಿಸಿದೆ.

World Bank
ವಿಶ್ವ ಬ್ಯಾಂಕ್
author img

By

Published : Nov 7, 2020, 1:07 PM IST

ನವದೆಹಲಿ: ತನ್ನ ಹೆಸರು ಮತ್ತು ಲೋಗೋ ಬಳಸಿ ನಕಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ವಿತರಣೆ ಆಗುತ್ತಿರುವ ಬಗ್ಗೆ ವಿಶ್ವ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದ ಬಳಿಕ ವರ್ಲ್ಡ್​ ಬ್ಯಾಂಕ್​ ಸಲಹೆಗಳನ್ನು ನೀಡುತ್ತಿದೆ. "ವಿಶ್ವ ಬ್ಯಾಂಕ್ ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದಿಲ್ಲ. ನಕಲಿ ಕಾರ್ಡ್‌ಗಳನ್ನು ನೀಡಿದ ವ್ಯಕ್ತಿಗಳು / ಸಂಸ್ಥೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇಂತಹ ವಂಚನೆಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲು ನಾವು ಬಯಸುತ್ತೇವೆ" ಎಂದು ವರ್ಲ್ಡ್​ ಬ್ಯಾಂಕ್​ ಸ್ಪಷ್ಟಪಡಿಸಿದೆ.

"ವಿಶ್ವ ಬ್ಯಾಂಕ್​​ನ ಕಾರ್ಯಕ್ರಮಗಳು ಮತ್ತು ನೀತಿಗಳ ಬಗೆಗಿನ ನಿಖರ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ www.worldbank.org ಗೆ ಮುಕ್ತವಾಗಿ ಭೇಟಿ ನೀಡಿ" ಎಂದು ಬ್ಯಾಂಕ್​ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.