ETV Bharat / business

ಕಂಪನಿ ಹೆಸರಲ್ಲಿ ವಂಚಿಸುತ್ತಾರೆ ಎಚ್ಚರಿಕೆ: ಬಳಕೆದಾರರಿಗೆ ವೊಡಾಫೋನ್‌ ಐಡಿಯಾ ಸೂಚನೆ - ಕಂಪನಿ ಹೆಸರಲ್ಲಿ ವಂಚನೆ

ನೀವು ವೊಡಾಫೋನ್ ಐಡಿಯಾ ನೆಟ್‌ವರ್ಕ್ ಬಳಸುತ್ತಿದ್ದೀರಾ? ಆದರೂ ಜಾಗರೂಕರಾಗಿರಿ! ಕಂಪನಿಯ ಹೆಸರಿನಲ್ಲಿ ಸೈಬರ್ ವಂಚನೆಗಳು ನಡೆಯುತ್ತಿವೆ. ಇದನ್ನು ಕಂಪನಿಯೇ ಬಹಿರಂಗಪಡಿಸಿದೆ.

vil cautions customers against online kyc frauds
ಕಂಪನಿ ಹೆಸರಲ್ಲಿ ವಂಚಿಸುತ್ತಾರೆ ಎಚ್ಚರಿಕೆ; ಬಳಕೆದಾರರಿಗೆ ವೊಡಾಫೋನ್‌ ಐಡಿಯಾ ಸೂಚನೆಕೆ; ಬಳಕೆದಾರರಿಗೆ ವೊಡಾಫೋನ್‌ ಐಡಿಯಾ ಸೂಚನೆ
author img

By

Published : Aug 5, 2021, 3:17 PM IST

Updated : Aug 5, 2021, 3:24 PM IST

ನವದೆಹಲಿ: ದೇಶೀಯ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (ವಿ) ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಕಂಪನಿಯ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು ಮೋಸ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತನ್ನ ಗ್ರಾಹಕರಿಗೆ ತಿಳಿಸಿದೆ.

ವಂಚನೆ ಹೇಗೆ ನಡೆಯುತ್ತಿದೆ?

ನೀವು ನಿಮ್ಮ ಕೆವೈಸಿಯನ್ನು ಅಪ್ಡೇಟ್​ ಮಾಡಬೇಕು ಎಂದು ವಿ ಬಳಕೆದಾರರಿಗೆ ಮೆಸೇಜ್‌, ಕರೆ ಮಾಡುತ್ತಾರೆ. ಕೂಡಲೇ ಕೆವೈಸಿ ಅಪ್ಡೇಟ್​ ಮಾಡದಿದ್ದರೆ ನಿಮ್ಮ ಸೇವೆ ನಿಲ್ಲಿಸಲಾಗುವುದು ಎಂದು ಸೈಬರ್ ಆರೋಪಿಗಳು ಹೇಳುತ್ತಾರೆ. ಇದು ನಿಜವೇ ಎಂದು ಅವರು ಹೇಳುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿದರೆ ವ್ಯಕ್ತಿಗಳ ಡೇಟಾ, ಫೋನ್‌ಗಳಲ್ಲಿ ಇರುವ ಮಾಹಿತಿ ದೋಚುವ ಸಾಧ್ಯತೆಗಳಿವೆ. ಇದು ಆರ್ಥಿಕ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: Vodafone- ideaಗೆ ಶಾಕ್‌; ಎನ್‌ಇಡಿ, ಎನ್‌ಇಸಿ ಸ್ಥಾನದಿಂದ ಕೆಳಗಿಳಿದ ಕುಮಾರ್ ಮಂಗಳಂ ಬಿರ್ಲಾ

ಈ ನಿಟ್ಟಿನಲ್ಲಿ ಕೆವೈಸಿ ನವೀಕರಿಸಲು ಕಂಪನಿಯು ಯಾವುದೇ ವೈಯಕ್ತಿಕ ಕರೆಗಳನ್ನು ಅಥವಾ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ವೊಡಾಫೋನ್ ಐಡಿಯಾ ಸ್ಪಷ್ಟಪಡಿಸಿದೆ. ಯಾವುದೇ ಸಂದೇಶಗಳು ಅಥವಾ ಕರೆಗಳಿಗೆ ಬಂದರೆ ಅವುಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಸೂಚಿಸಿದೆ.

Last Updated : Aug 5, 2021, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.