ನ್ಯೂಯಾರ್ಕ್: 2021ರ ಕೊನೆಯ ವಹಿವಾಟಿನಲ್ಲಿ ಅಮೆರಿಕ ಷೇರುಮಾರುಕಟ್ಟೆ ಕುಸಿತದ ಹಾದಿ ಹಿಡಿಯಿತು. ಡಾ ಜೋನ್ಸ್ 59.78 ಪಾಯಿಂಟ್ ಕುಸಿತ ಕಾಣುವ ಮೂಲಕ 36,338.30 ಕ್ಕೆ ತಲುಪಿದೆ. S&P 500 12.55 ಅಂಕಗಳ ಇಳಿಕೆಯೊಂದಿದೆ 4,766.18 ಕ್ಕೆ ಕುಸಿಯಿತು. ಇನ್ನು ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕವು 96.59 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ.
11 ಎಸ್ & ಪಿ ಸೆಕ್ಟರ್ ಷೇರುಗಳಲ್ಲಿ ಆರು ಷೇರುಗಳು ಲಾಭ ಮಾಡಿಕೊಂಡರೆ ಇನ್ನುಳಿದ ಷೇರುಗಳು ನಷ್ಟ ಅನುಭವಿಸಿದವು. ಇನ್ನು ಚೀನಾ ಕಂಪನಿಗಳು ನಿನ್ನೆಯ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.
ಇದನ್ನೂ ಓದಿ:ಜವಳಿ ಮೇಲಿನ ಜಿಎಸ್‌ಟಿ ದರ ಶೇ.5ರಲ್ಲೇ ಮುಂದುವರಿಸಲು ನಿರ್ಧಾರ.. ಸಚಿವೆ ನಿರ್ಮಲಾ ಸೀತಾರಾಮನ್