ETV Bharat / business

ಟ್ರಂಪ್​- ಮೋದಿ ಮಧ್ಯ 'ಚಿಕನ್ ಲೆಗ್ ಪೀಸ್' ಒಪ್ಪಂದ: ಕುಕ್ಕಟೋದ್ಯಮಕ್ಕೆ ಕುತ್ತು

author img

By

Published : Feb 15, 2020, 9:49 PM IST

ಈಟಿವಿ ಭಾರತ್ ಜತೆಗೆ ಮಾತನಾಡಿದ ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಅಧ್ಯಕ್ಷ ಸುರೇಶ್ ಚಿಟ್ಟುರಿ ಅವರು, ನಾವು ಅಮೆರಿಕದಿಂದ ಕೋಳಿ ಕಾಲುಗಳನ್ನು ಆಮದು ಮಾಡಲು ಆರಂಭಿಸಿದರೆ, ಇದು ಭಾರತೀಯ ಕೋಳಿ ಉದ್ಯಮಕ್ಕೆ ಮಾತ್ರವಲ್ಲದೆ ಕೃಷಿಯ ಮೇಲು ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ.

Indian poultry industry
ಭಾರತದ ಪೌಲ್ಟ್ರಿ ಉದ್ಯಮ

ಹೈದರಾಬಾದ್​: ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತ ಪ್ರವಾಸ ಸಂದರ್ಭದಲ್ಲಿ ಅಮೆರಿಕದ ಕುಕ್ಕಟೋದ್ಯಕ್ಕೆ ಭಾರತ ಮಾರುಕಟ್ಟೆ ತೆರೆದಿಕೊಳ್ಳುವ ಒಪ್ಪಂದ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಈ ವಲಯದ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಅಧ್ಯಕ್ಷ ಸುರೇಶ್ ಚಿಟ್ಟುರಿ ಮಾತನಾಡಿ, ನಾವು ಅಮೆರಿಕದಿಂದ ಕೋಳಿ ಕಾಲುಗಳನ್ನು ಆಮದು ಮಾಡಲು ಆರಂಭಿಸಿದರೆ, ಇದು ಭಾರತೀಯ ಕೋಳಿ ಉದ್ಯಮಕ್ಕೆ ಮಾತ್ರವಲ್ಲದೆ ಕೃಷಿಯ ಮೇಲು ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ.

ಅಮೆರಿಕನ್ನರಿಗೆ ಚಿಕನ್​ ಪೀಸ್​ ಇಷ್ಟವಿಲ್ಲ. ಅದಕ್ಕಾಗಿ ಭಾರತಕ್ಕೆ ಕೋಳಿ ರಫ್ತಿಗೆ ಅಮೆರಿಕ ಆಸಕ್ತಿ ತಳಿಯುತ್ತಿದೆ. ಉದ್ದೇಶಿತ ಒಪ್ಪಂದವು ಜಾರಿಗೆ ಬಂದರೇ ಭಾರತೀಯ ಕೋಳಿ ಉದ್ಯಮ ಮತ್ತು ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನೇ ನಂಬಿದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಭಾರತದ ಪ್ರಸ್ತುತ, ಅಮೆರಿಕದ ಚಿಕನ್ ಲೆಗ್ ಹಾಗೂ ಟರ್ಕಿ ಕೋಳಿಗಳ ಆಮದಿಗೆ ಶೇ 100ರಷ್ಟು ಸುಂಕ ವಿಧಿಸುತ್ತದೆ. ಈಗ ಇದರ ಪ್ರಮಾಣ ಶೇ 25ಕ್ಕೆ ಇಳಿಸಲು ಭಾರತ ಹಸಿರು ನಿಶಾನೆ ನೀಡಲಿದೆ. ಆದರೆ, ಅಮೆರಿಕದವರು ಈ ಸುಂಕವನ್ನು ಶೇ 10ಕ್ಕೆ ತಗ್ಗಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ಭಾರತದ ಶೇ 20ಕ್ಕೆ ಒಪ್ಪಿಕೊಳ್ಳಬಹುದು. ಸಹಜವಾಗಿಯೇ ಭಾರತದ ಪೌಲ್ಟ್ರಿ ಉದ್ಯಮ ನೆಲಕಚ್ಚಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.