ETV Bharat / business

ಮತ್ತಷ್ಟು ಬೆಳೆಯಲಿದೆ ಜಾಗತಿಕ ಇ-ಕಾಮರ್ಸ್​ ವಹಿವಾಟು

2018 ರಲ್ಲಿ ಒಟ್ಟು ಜಾಗತಿಕ B2B ವ್ಯಾಪಾರ 21 ಟ್ರಿಲಿಯನ್ ಹಾಗೂ B2C ವ್ಯವಹಾರ 4.4 ಟ್ರಿಲಿಯನ್​ ಡಾಲರ್​ಗಳಷ್ಟಿತ್ತು ಎಂದು ಲೆಕ್ಕ ಹಾಕಲಾಗಿದೆ. ಚೀನಾ, ಅಮೆರಿಕ ಹಾಗೂ ಯುನೈಟೆಡ್​ ಕಿಂಗಡಂ ಜಗತ್ತಿನ ಪ್ರಮುಖ ಮೂರು ಇ-ಕಾಮರ್ಸ್​ ಮಾರುಕಟ್ಟೆಗಳಾಗಿವೆ.

UNCTAD ESTIMATES OF GLOBAL E-COMMERCE 2018

author img

By

Published : Apr 29, 2020, 5:38 PM IST

ಆನ್ಲೈನ್​ ಮೂಲಕ ವ್ಯಾಪಾರ, ವಹಿವಾಟು ನಡೆಸುವ ಇ-ಕಾಮರ್ಸ್​ ಜಾಲ ಜಗತ್ತಿನಾದ್ಯಂತ ಗಮನಾರ್ಹ ಬೆಳವಣಿಗೆ ಹೊಂದುತ್ತಿದೆ. ದೇಶವೊಂದರಲ್ಲಿ ಪ್ರತಿವರ್ಷ ನಡೆಯುವ ಇ-ಕಾಮರ್ಸ್​ ವ್ಯವಹಾರದ ನಿಖರ ಅಂಕಿ ಅಂಶಗಳನ್ನು ಕಲೆ ಹಾಕುವುದು ತುಸು ಕಷ್ಟಕರವೇ ಆಗಿದೆ. ಆದಾಗ್ಯೂ ಬಹುತೇಕ ರಾಷ್ಟ್ರಗಳು ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್​ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲು ಮುಂದಾಗಿವೆ. ಕೆಲ ರಾಷ್ಟ್ರಗಳು ತಾವು ಸಂಗ್ರಹಿಸಿದ ಅಂಕಿ ಸಂಖ್ಯೆಗಳನ್ನು ಬಹಿರಂಗ ಪಡಿಸುವುದಿಲ್ಲ. ಇನ್ನು ಕೆಲ ರಾಷ್ಟ್ರಗಳು ಅಂತಾರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ಮಾಹಿತಿ ಸಂಗ್ರಹಿಸುವುದಿಲ್ಲ. ಹೀಗಾಗಿ ಇ-ಕಾಮರ್ಸ್​ ಬೆಳವಣಿಗೆಯ ಬಗ್ಗೆ ನಿಖರ ಅಂದಾಜು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಜಾಗತಿಕ ಇ-ಕಾಮರ್ಸ್​ ವ್ಯವಹಾರವನ್ನು ಅಳೆಯಲು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ (United Nations Conference on Trade and Development - UNCTAD) ತನ್ನದೇ ಆದ ವಿಧಾನವೊಂದನ್ನು ಸಿದ್ಧಪಡಿಸಿದೆ. ರಾಷ್ಟ್ರಗಳು ನೀಡುವ ಮಾಹಿತಿಯಲ್ಲಿನ ಪರಿಷ್ಕರಣೆ ಹಾಗೂ ವಿಧಾನಗಳ ಬದಲಾವಣೆಯ ಕಾರಣದಿಂದ 2017ರ ಅಂದಾಜನ್ನು ಹಿಂದಿನ ವರ್ಷಗಳ ಅಂದಾಜಿಗೆ ಹೋಲಿಸುವಂತಿಲ್ಲ.

B2B ವ್ಯವಹಾರದ ಮಾಹಿತಿಗಿಂತ ಹೆಚ್ಚು B2C ವ್ಯವಹಾರದ ಮಾಹಿತಿಯನ್ನು ಹೆಚ್ಚಿನ ರಾಷ್ಟ್ರಗಳು ಪ್ರಕಟಿಸುತ್ತವೆ. 2018ರಲ್ಲಿ ಇ-ಕಾಮರ್ಸ್​ ವ್ಯವಹಾರಗಳು ಶೇ.8 ರಷ್ಟು ಏರಿಕೆಯಾಗಿವೆ. ಅಂದರೆ ಜಾಗತಿಕ ಇ-ಕಾಮರ್ಸ್​ ವಹಿವಾಟು 23.8 ಟ್ರಿಲಿಯನ್​ ಡಾಲರ್​ಗಳಿಗೆ ಏರಿಕೆಯಾಗಿದೆ. ಇದು 2017 ರಿಂದ ಶೇ.8 ರಷ್ಟು ಹೆಚ್ಚಾಗಿದ್ದು, ರಾಷ್ಟ್ರಗಳ ಒಟ್ಟು ಜಿಡಿಪಿಯ ಶೇ.30 ರಷ್ಟಿದೆ. ಅಮೆರಿಕ ವಿಶ್ವದಲ್ಲಿಯೇ ಅತಿದೊಡ್ಡ ಇ-ಕಾಮರ್ಸ್​ ದೇಶವಾಗಿ ಗುರುತಿಸಿಕೊಂಡಿದೆ.

2018 ರಲ್ಲಿ ಒಟ್ಟು ಜಾಗತಿಕ B2B ವ್ಯಾಪಾರ 21 ಟ್ರಿಲಿಯನ್ ಹಾಗೂ B2C ವ್ಯವಹಾರ 4.4 ಟ್ರಿಲಿಯನ್​ ಡಾಲರ್​ಗಳಷ್ಟಿತ್ತು ಎಂದು ಲೆಕ್ಕ ಹಾಕಲಾಗಿದೆ. ಚೀನಾ, ಅಮೆರಿಕ ಹಾಗೂ ಯುನೈಟೆಡ್​ ಕಿಂಗಡಂ ಜಗತ್ತಿನ ಪ್ರಮುಖ ಮೂರು ಇ-ಕಾಮರ್ಸ್​ ಮಾರುಕಟ್ಟೆಗಳಾಗಿವೆ.

ವಿಶ್ವದ ಪ್ರಥಮ 20 ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಇ-ಕಾಮರ್ಸ್​ ವಹಿವಾಟು ವಿಭಿನ್ನ ಪ್ರಮಾಣದಲ್ಲಿದೆ. 2018ರಲ್ಲಿ ಬ್ರಿಟನ್​ನಲ್ಲಿ ಇಂಟರನೆಟ್​ ಬಳಸುವ ಒಟ್ಟು ಜನಸಂಖ್ಯೆಯಲ್ಲಿನ ಶೇ.87 ರಷ್ಟು ಜನ ಆನ್ಲೈನ್​ ಶಾಪಿಂಗ್ ಮಾಡಿದ್ದರು. ಆದರೆ ಈ ಪ್ರಮಾಣ ಭಾರತದಲ್ಲಿ ಶೇ.11 ಹಾಗೂ ಥೈಲ್ಯಾಂಡ್​ಗಳಲ್ಲಿ ಶೇ. 14 ಮಾತ್ರ ಇರುವುದಾಗಿ UNCTAD ವರದಿಯಲ್ಲಿ ತಿಳಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.