ನವದೆಹಲಿ: ಸೇವಾ ದರವನ್ನು ಮತ್ತೆ ಜಾರಿಗೆ ತಂದಿರುವ ಪರಿಣಾಮ ಇಂದಿನಿಂದ ಐಆರ್ಸಿಟಿಸಿ ರೈಲ್ವೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮತ್ತೆ ದುಬಾರಿಯಾಗಲಿದೆ.
2016ರಲ್ಲಿ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ರೈಲ್ವೆ ಇಲಾಖೆ ಬುಕ್ಕಿಂಗ್ನಲ್ಲಿನ ಸೇವಾ ದರವನ್ನು ಹಿಂಪಡೆದಿತ್ತು. ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆ ಈ ನಿರ್ಧಾರಕ್ಕೆ ಬಂದಿತ್ತು.
ಸ್ಲೀಪರ್ ಕ್ಲಾಸ್ ಬುಕ್ಕಿಂಗ್ ಮಾಡುವ ವೇಳೆ 15 ರೂ. ಸೇವಾ ದರ ವಿಧಿಸಿದರೆ, ಎಸಿ ಕ್ಲಾಸ್ 30 ರೂ. ಇರಲಿದೆ. ನಾನ್-ಎಸಿ ಕ್ಲಾಸ್ 20 ರೂ. ಸೇವಾ ದರವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಜಿಎಸ್ಟಿ ಸಹ ಪ್ರತಿಯೊಂದು ಟಿಕೆಟ್ ಮೇಲೂ ಅನ್ವಯವಾಗಲಿದೆ.
ನೋಟ್ ಬ್ಯಾನ್ ಬಳಿಕ ಸೇವಾ ದರವನ್ನು ಹಿಂಪಡೆದಿದ್ದ ರೈಲ್ವೆ ಇಲಾಖೆ ಕೊಂಚ ನಷ್ಟವನ್ನು ಅನುಭವಿಸಿತ್ತು. ಈ ನಷ್ಟವನ್ನು ಭರಿಸುವುದಾಗಿ ಹಣಕಾಸು ಸಚಿವಾಲಯ ರೈಲ್ವೆ ಇಲಾಖೆಗೆ ಭರವಸೆ ನೀಡಿದೆ.