ಬೆಂಗಳೂರು: ದೇಶಿ ನಿರ್ಮಿತ ಲಘು ಯುದ್ಧ ವಿಮಾನ 'ತೇಜಸ್' ಹಿರಿಮೆಗೆ ಮಂಗಳವಾರ ಮತ್ತೊಂದು ಗರಿ ಮೂಡಿದೆ.
ಲಘು ಯುದ್ಧ ವಿಮಾನ ಎಫ್‌ಒಸಿ ಸ್ಟ್ಯಾನ್ಡರ್ಡ್ (ಎಸ್ಪಿ21) ಇದೇ ಪ್ರಥಮ ಬಾರಿಗೆ ಯಶಸ್ವಿಯಾಗಿ 40 ನಿಮಿಷಗಳ ಕಾಲ ಯಶಸ್ವಿ ಹಾರಾಟ ನಡೆಸಿದೆ ಎಂದು ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ಟ್ವೀಟ್ ಮೂಲಕ ತಿಳಿಸಿದೆ.
ಮುಖ್ಯ ಟೆಸ್ಟ್ ಫ್ಲೈಯಿಂಗ್ ಆಗಿರುವ ನಿವೃತ್ತ ವಾಯು ಕಮಾಂಡ್ ಕೆ.ಎ. ಮುಥಾನಾ ಅವರು ಎಸ್ಪಿ-21 ಅನ್ನು ಆಗಸದಲ್ಲಿ ಸುಮಾರು 40 ನಿಮಿಷಗಳ ಯಶಸ್ವಿಯಾಗಿ ಹಾರಾಟ ನಡೆಸಿದರು.
- — HAL (@HALHQBLR) March 17, 2020 " class="align-text-top noRightClick twitterSection" data="
— HAL (@HALHQBLR) March 17, 2020
">— HAL (@HALHQBLR) March 17, 2020
ವಿಮಾನ ಹಾರಾಟದ ಯಶಸ್ಸು ಡಿಜಿಎಕ್ಯೂಎ, ಸಿಮಿಲಾಕ್, ಐಎಎಫ್, ಎಡಿಎ ಸೇರಿದಂತೆ ಇತರ ತಾಂತ್ರಿಕ ಸಂಸ್ಥೆಗಳಿಗೂ ಸಲ್ಲುತ್ತದೆ. ಎಲ್‌ಸಿಎ ತೇಜಸ್ನ ಯೋಜನೆಯು ವಿವಿಧ ಪಾಲುದಾರ ಸಂಸ್ಥೆಗಳೊಂದಿಗಿನ ತಂಡದ ಕಾರ್ಯದ ಪ್ರತಿ ಫಲವಾಗಿದೆ ಎಂದು ಎಚ್ಎಎಲ್ನ ಸಿಎಂಡಿ ಆರ್ ಮಾಧವನ್ ಅವರು ಹೇಳಿದ್ದಾರೆ.
ಈ ಯಶಸ್ಸಿನೊಂದಿಗೆ ಎಫ್‌ಒಸಿ ವಿಭಾಗದಿಂದ ಉಳಿದ 15 ಫೈಟರ್ ಜೆಟ್ಗಳ ಉತ್ಪಾದನೆಯ ಹಾದಿ ಸುಲಭವಾಗಿದೆ. ಮುಂದಿನ ಹಣಕಾಸು ವರ್ಷದ ವೇಳೆಗೆ ಇವುಗಳನ್ನು ತಯಾರಿಸುವ ನಿರೀಕ್ಷೆಯಿದೆ. ಡ್ರಾಯಿಂಗ್ ಅಪ್ಲಿಕೇಷಬಿಲಿಟಿ ಲಿಸ್ಟ್ (ಡಿಎಎಲ್) ಮತ್ತು ಎಸ್‌ಒಪಿ ಬೈ ಮಿಲಿಟರಿ ಏರ್‌ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಷನ್ (ಸಿಇಎಂಎಎಲ್‍ಸಿ) ಬಿಡುಗಡೆಯಾದ ಬಳಿಕ, ಎಚ್‌ಎಎಲ್ 12 ತಿಂಗಳಲ್ಲಿ ಈ ಸಾಧನೆ ಮಾಡಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.