ETV Bharat / business

ಡ್ರ್ಯಾಗನ್​ ಮೇಲೆ ಭಾರತ ಕೌಂಟರ್ ಅಟ್ಯಾಕ್​: ಬೋಗಿ ನಿರ್ಮಾಣದ ಟೆಂಡರ್ ಸಹ ರದ್ದು!

ಕಳೆದ ತಿಂಗಳು ಕರೆದ ಜಾಗತಿಕ ಟೆಂಡರ್​​ನಲ್ಲಿ ಚೀನಾದ ಜಂಟಿ ಉದ್ಯಮ ಸಂಸ್ಥೆ ಸಿಆರ್​ಆರ್​ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, 44 ರೈಲಿನ 16 ಕೋಚ್​ಗಳಿಗೆ ವಿದ್ಯುತ್ ಉಪಕರಣ ಮತ್ತು ಇತರ ವಸ್ತುಗಳನ್ನು ಪೂರೈಸುವ ಆರು ಸ್ಪರ್ಧಿಗಳಲ್ಲಿ ಏಕೈಕ ವಿದೇಶಿ ಪಾಲುದಾರನಾಗಿ ಹೊರಹೊಮ್ಮಿತು. ಹೀಗಾಗಿ, ಈ ಹರಾಜನ್ನು ರದ್ದುಗೊಳಿಸಿದೆ.

author img

By

Published : Aug 22, 2020, 4:21 PM IST

Vande Bharat trains
ವಂದೇ ಭಾರತ್ ಎಕ್ಸ್​ಪ್ರೆಸ್​

ನವದೆಹಲಿ: ಕಳೆದ ವರ್ಷ ಅನಿಷ್ಠಾನಕ್ಕೆ ಬಂದ 44 ಸೆಮಿ-ಹೈಸ್ಪೀಡ್​ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ತಯಾರಿಕೆ ಟೆಂಡರ್ ರದ್ದುಗೊಳಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಳೆದ ತಿಂಗಳು ಕರೆದ ಜಾಗತಿಕ ಟೆಂಡರ್​​ನಲ್ಲಿ ಚೀನಾದ ಜಂಟಿ ಉದ್ಯಮ ಸಂಸ್ಥೆ ಸಿಆರ್​ಆರ್​ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, 44 ರೈಲಿನ 16 ಕೋಚ್​ಗಳಿಗೆ ವಿದ್ಯುತ್ ಉಪಕರಣ ಮತ್ತು ಇತರ ವಸ್ತುಗಳನ್ನು ಪೂರೈಸುವ ಆರು ಸ್ಪರ್ಧಿಗಳಲ್ಲಿ ಏಕೈಕ ವಿದೇಶಿ ಪಾಲುದಾರನಾಗಿ ಹೊರಹೊಮ್ಮಿತು. ಹೀಗಾಗಿ, ಈ ಹರಾಜನ್ನು ರದ್ದುಗೊಳಿಸಿದೆ.

ಚೀನಾ ಮೂಲದ ಸಿಆರ್‌ಆರ್‌ಸಿ ಯೋಂಗ್ಜಿ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ ಮತ್ತು ಗುರುಗ್ರಾಮ್ ಮೂಲದ ಪಯೋನೀರ್ ಫಿಲ್-ಮೆಡ್ ಪ್ರೈವೇಟ್ ಲಿಮಿಟೆಡ್ ನಡುವೆ 2015ರಲ್ಲಿ ಜೆವಿ ನಿರ್ಮಾಣದ ಒಪ್ಪಂದ ಏರ್ಪಟ್ಟಿತ್ತು.

44 ಅರೆ ಹೈಸ್ಪೀಡ್ ರೈಲು ಸೆಟ್ (ವಂದೇ ಭಾರತ್) ತಯಾರಿಸುವ ಟೆಂಡರ್ ರದ್ದುಗೊಂಡಿದೆ. ಪರಿಷ್ಕೃತ ಸಾರ್ವಜನಿಕ ಸಂಗ್ರಹಣೆ (ಭಾರತದಲ್ಲಿ ತಯಾರಿಸಲು ಆದ್ಯತೆ) ಆದೇಶದ ಪ್ರಕಾರ ಒಂದು ವಾರದೊಳಗೆ ಹೊಸ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಸಚಿವಾಲಯ ಟ್ವಿಟರ್​​ನಲ್ಲಿ ತಿಳಿಸಿದೆ.

ರಾಷ್ಟ್ರೀಯ ಸಾರಿಗೆ ಇಲಾಖೆಯು ಟೆಂಡರ್ ರದ್ದಾದ ಹಿಂದಿನ ಕಾರಣ ಏನು ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಸಂಪೂರ್ಣವಾಗಿ ದೇಶಿಯ ಘಟಕಕ್ಕೆ ಟೆಂಡರ್ ನೀಡಲು ರೈಲ್ವೆ ಉತ್ಸುಕವಾಗಿದೆ. ಚೀನಾದ ಜೆವಿ ಈ ಯೋಜನೆಗೆ ಮುಂಚೂಣಿಯಲ್ಲಿದೆ ಎಂದು ಭಾವಿಸಿದಾಗ ಅದನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಡಾಖ್ ಗಡಿಯಲ್ಲಿ ಚೀನಾ ತಗಾದೆ ತೆಗೆದ ಬಳಿಕ ಡ್ರ್ಯಾಗನ್​​ಗೆ ಭಾರತ ಒಂದಲ್ಲ ಒಂದು ರೀತಿಯಲ್ಲಿ ತಿರುಗೇಟು ನೀಡುತ್ತಿದೆ. ಚೀನಾ ಮೂಲದ ಕೆಲವು ಆ್ಯಪ್​ಗಳ ಮೇಲೆ ನಿಷೇಧ ಹೇರಿದ ಬಳಿಕ ಈಗ ಮತ್ತೊಂದು ಸುತ್ತಿನ ವಿತ್ತೀಯ ಹೊಡೆತ ಕೊಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.