ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆ್ಯಪ್ನಲ್ಲಿ ಇಂದು ತಾಂತ್ರಿಕ ದೋಷ ಉಂಟಾಗಿ ಗ್ರಾಹಕರು ಪರದಾಡಿದ್ದಾರೆ. ಅಲ್ಲದೇ, ಸಾಲು ಸಾಲು ನೋಟಿಫಿಕೇಷನ್ಗಳು ಗ್ರಾಹಕರ ಮೊಬೈಲ್ಗೆ ಬಂದು ಕಿರಿಕಿರಿಯುಂಟು ಮಾಡಿವೆ. ಗ್ರಾಹಕರಿಂದ ದೂರು ಬಂದ ಬಳಿಕ ಎಚ್ಚೆತ್ತ ಬ್ಯಾಂಕ್ ತಾಂತ್ರಿಕ ದೋಷವನ್ನು ಸರಿಪಡಿಸಿದೆ.
ಎಸ್ಬಿಐ ಬ್ಯಾಂಕ್ನ ಯೋನೋ ಆ್ಯಪ್ ಮೂಲಕ ಗ್ರಾಹಕರಿಗೆ 'ನೀವು ವೈಯಕ್ತಿಕ ಹೊಸ ಸಾಲ ಪಡೆಯಲು ಅರ್ಹರಾಗಿದ್ದೀರಿ' ಎಂಬ 100ಕ್ಕೂ ಅಧಿಕ ಸಂದೇಶಗಳು ಬಂದಿವೆ. ಇದಲ್ಲದೇ, ತಮ್ಮದಲ್ಲದ ಹೆಸರಿನ ಗ್ರಾಹಕರ ಮಾಹಿತಿ ಸಂದೇಶ ತಮಗೆ ಬಂದಿದ್ದನ್ನು ಕಂಡು ಗಾಬರಿಯಾದ ಬಳಕೆದಾರರು ಯೋನೋ ಆ್ಯಪ್ ಹ್ಯಾಕ್ ಆಗಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
-
We request our esteemed customers to bear with us as we strive to provide a better Banking experience. pic.twitter.com/iRTLtBUkSr
— State Bank of India (@TheOfficialSBI) March 11, 2022 " class="align-text-top noRightClick twitterSection" data="
">We request our esteemed customers to bear with us as we strive to provide a better Banking experience. pic.twitter.com/iRTLtBUkSr
— State Bank of India (@TheOfficialSBI) March 11, 2022We request our esteemed customers to bear with us as we strive to provide a better Banking experience. pic.twitter.com/iRTLtBUkSr
— State Bank of India (@TheOfficialSBI) March 11, 2022
ಅಲ್ಲದೇ, ಆ್ಯಪ್ ಲಾಗಿನ್ ಆಗಲು ಸಹಿತ ಸಾಧ್ಯವಾಗದೇ ಪರದಾಡಿದ್ದಾರೆ. ಅವರಿಗೆ ಬಂದ ಸಂದೇಶಗಳನ್ನು ಸ್ಕ್ರೀನ್ ಶಾಟ್ ಮೂಲಕ ಬ್ಯಾಂಕ್ ಅಧಿಕೃತ ವೆಬ್ಸೈಟ್ಗೆ ಟ್ಯಾಗ್ ಮಾಡಿ ಮಾಹಿತಿ ರವಾನಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ನಾನು ಯೋನೋ ಲೈಟ್ ಅಪ್ಲಿಕೇಶನ್‌ನಲ್ಲಿ ವಿವಿಧ ಹೆಸರುಗಳಲ್ಲಿ ನಿರಂತರವಾಗಿ ಸಾಕಷ್ಟು ಅಧಿಸೂಚನೆಗಳನ್ನು ಸ್ವೀಕರಿಸಿದ್ದೇನೆ. ಈ ಸಂದೇಶಗಳಲ್ಲಿನ ಮಾಹಿತಿ ನನ್ನ ಖಾತೆಗೆ ಸಂಬಂಧಿಸಿದ್ದಲ್ಲ. ಇದನ್ನು ಶೀಘ್ರವೇ ನಿಲ್ಲಿಸಿ ಎಂದು ಶ್ರೀದತ್ ದೋಷಿ ಎಂಬ ಗ್ರಾಹಕರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಬ್ಬ ಬಳಕೆದಾರರು 'ಯೋನೋ ಅಪ್ಲಿಕೇಶನ್‌ನ ಅಪರಿಚಿತರ ಹೆಸರುಳ್ಳ ಸಂದೇಶಗಳು ನಮಗೆ ರವಾನೆಯಾಗುತ್ತಿವೆ. 100ಕ್ಕೂ ಅಧಿಕ ಮೆಸೇಜ್ ಬಂದಿವೆ. ದಯಮಾಡಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ' ಎಂದು ಟ್ವೀಟ್ ಮಾಡಿದ್ದರು.
-
Today I am receiving lot of notification continuously in my YONO LITE SBI app in different names, which not belongs to my account.@TheOfficialSBI @RBI. Request you to stop notification Please 🙏 pic.twitter.com/glZv2eisXk
— Shridutt Doshi ✪ (@ShriduttDoshi_) March 11, 2022 " class="align-text-top noRightClick twitterSection" data="
">Today I am receiving lot of notification continuously in my YONO LITE SBI app in different names, which not belongs to my account.@TheOfficialSBI @RBI. Request you to stop notification Please 🙏 pic.twitter.com/glZv2eisXk
— Shridutt Doshi ✪ (@ShriduttDoshi_) March 11, 2022Today I am receiving lot of notification continuously in my YONO LITE SBI app in different names, which not belongs to my account.@TheOfficialSBI @RBI. Request you to stop notification Please 🙏 pic.twitter.com/glZv2eisXk
— Shridutt Doshi ✪ (@ShriduttDoshi_) March 11, 2022
ಇದಲ್ಲದೇ ಹಲವಾರು ಗ್ರಾಹಕರು ಆ್ಯಪ್ ಹ್ಯಾಕ್ ಆಗಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಆ್ಯಪ್ ಬಳಕೆಯೂ ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರು.
ಗ್ರಾಹಕರ ದೂರುಗಳಿಂದ ಶೀಘ್ರವೇ ಎಚ್ಚೆತ್ತ ಬ್ಯಾಂಕ್, ಇದು ತಾಂತ್ರಿಕ ದೋಷದಿಂದಾದ ಸಮಸ್ಯೆಯಾಗಿದೆ. ಗ್ರಾಹಕರಿಗಾದ ಸಮಸ್ಯೆಗೆ ವಿಷಾದಿಸುತ್ತೇವೆ ಎಂದು ಎಸ್ಬಿಐ ಟ್ವೀಟ್ ಮಾಡಿದೆ. ಅಲ್ಲದೇ, ಆ್ಯಪ್ನಲ್ಲಾದ ತಾಂತ್ರಿಕ ದೋಷವನ್ನು ಸರಿಪಡಿಸಿದೆ.