ಸ್ಟಾಕ್‌ಹೋಮ್ (ಸ್ವೀಡನ್): ಸ್ವೀಡನ್‌ನಲ್ಲಿ 5ಜಿ ನೆಟ್‌ವರ್ಕ್‌ಗಳ ಅಭಿವೃದ್ಧಿಯಲ್ಲಿ ಚೀನಾದ ಟೆಕ್ ಕಂಪನಿಗಳಾದ ಹುವಾಯಿ ಮತ್ತು ಝೆಡ್‌ಟಿಇಗಳ ದೂರಸಂಪರ್ಕ ಸಾಧನಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಸ್ವೀಡಿಷ್ ಪೋಸ್ಟ್ ಮತ್ತು ಟೆಲಿಕಾಂ ಪ್ರಾಧಿಕಾರ (ಪಿಟಿಎಸ್) ಹೇಳಿದೆ.
ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಹುವಾಯಿ ಮತ್ತು ಝೆಡ್‌ಟಿಇ ತಯಾರಿಸಿದ ನೆಟ್‌ವರ್ಕ್ ಉಪಕರಣಗಳನ್ನು ಬಳಸದಂತೆ ತಡೆಯಲಾಗಿದೆ ಎಂದು ತಿಳಿದು ಬಂದಿದೆ.
ಸ್ವೀಡನ್‌ನ 5ಜಿ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಅದರ ಸೇವೆಗಳ ಷರತ್ತುಗಳನ್ನು ರೂಪಿಸುವ ಹಾಗೂ ಕಂಪನಿಗಳನ್ನು ಆಯ್ಕೆ ಮಾಡಲು ಪರವಾನಗಿ ಪ್ರಕ್ರಿಯೆಯಲ್ಲಿದೆ.
ಹೈ 3 ಜಿ ಆಕ್ಸೆಸ್, ನೆಟ್ 4 ಮೊಬಿಲಿಟಿ, ಟೆಲಿಯಾ ಸ್ವೆರಿಜ್ ಮತ್ತು ಟೆರಾಕಾಮ್ ಎಂಬ ನಾಲ್ಕು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.