ನವದೆಹಲಿ: ಸೆಪ್ಟೆಂಬರ್‌ನಿಂದ ಕೊನೆಗೊಳ್ಳುವ ಪ್ರಸಕ್ತ ಮಾರುಕಟ್ಟೆ ಋತುವಿನ ಮೊದಲ ನಾಲ್ಕು ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಶೇ 25.37ರಷ್ಟು 17.68 ದಶಲಕ್ಷ ಟನ್‌ಗಳಲ್ಲಿ ಉತ್ಪಾದಿಸಿದೆ ಎಂದು ಕೈಗಾರಿಕಾ ಸಂಸ್ಥೆ ಐಎಸ್‌ಎಂಎ ತಿಳಿಸಿದೆ.
ಹಿಂದಿನ ವರ್ಷದ ಅವಧಿಯಲ್ಲಿ ದೇಶಾದ್ಯಂತ ಸಕ್ಕರೆ ಉತ್ಪಾದನೆ 14.10 ದಶಲಕ್ಷ ಟನ್ ಆಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಿನ ಮಾರ್ಕೆಟಿಂಗ್ ಋತುವಿನ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸಕ್ಕರೆ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 6.75 ಮಿಲಿಯನ್ ಟನ್ಗಳಷ್ಟಿದೆ. 2020-21ರ ಮಾರ್ಕೆಟಿಂಗ್ ಋತುವಿನಲ್ಲಿ ದೇಶದ ಒಟ್ಟಾರೆ ಸಕ್ಕರೆ ಉತ್ಪಾದನೆ 30.2 ಮಿಲಿಯನ್ ಟನ್ ಆಗಿದೆ. 2019-20ರ ಋತುವಿನಲ್ಲಿ ಸಾಧಿಸಿದ 27.42 ಮಿಲಿಯನ್ ಟನ್ಗ ನೈಜ ಉತ್ಪಾದನೆಗಿಂತ ಹೆಚ್ಚಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಇಸ್ಮಾ) ತಿಳಿಸಿದೆ.
ಇದನ್ನೂ ಓದಿ: ಬಜೆಟ್ನಲ್ಲಿ ಆಮದು ಸುಂಕ ಇಳಿಸಿದ ಬೆನ್ನಲ್ಲೇ 3,097 ರೂ. ಕುಸಿದ ಬೆಳ್ಳಿ : ಬಂಗಾರವೂ ಅಗ್ಗ!
ಜನವರಿಯವರೆಗೆ ಸುಮಾರು 491 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೇ ಹಿಂದಿನ ವರ್ಷ ಇದೇ ಅವಧಿಯಲ್ಲಿ 447 ಸಕ್ಕರೆ ಕಾರ್ಖಾನೆಗಳು ಸಕ್ರಿಯವಾಗಿದ್ದವು. ಅತ್ಯಧಿಕ ಸಕ್ಕರೆ ಉತ್ಪಾದಕ ಉತ್ತರ ಪ್ರದೇಶದಲ್ಲಿ ಈ ಋತುವಿನ ಜನವರಿಯವರೆಗೆ 5.44 ದಶಲಕ್ಷ ಟನ್‌ಗಳಷ್ಟು ಕಡಿಮೆಯಾಗಿದೆ. ವರ್ಷದ ಹಿಂದೆ 5.49 ದಶಲಕ್ಷ ಟನ್‌ಗಳಷ್ಟಿತ್ತು.
ದೇಶದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ಮಹಾರಾಷ್ಟ್ರದ ಉತ್ಪಾದನೆಯು ಈ ಅವಧಿಯಲ್ಲಿ 3.46 ದಶಲಕ್ಷ ಟನ್‌ಗಳಿಂದ ಗಣನೀಯವಾಗಿ 6.38 ದಶಲಕ್ಷ ಟನ್‌ಗಳಿಗೆ ಏರಿದೆ. 3ನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಜ್ಯ ಕರ್ನಾಟಕದಲ್ಲಿ ಜನವರಿಯವರೆಗೆ 2.79 ದಶಲಕ್ಷ ಟನ್‌ಗಳಿಂದ 3.43 ದಶಲಕ್ಷ ಟನ್‌ಗಳಿಗೆ ಏರಿದೆ.