ETV Bharat / business

ಭಾರಿ ಕುಸಿತದ ಬಳಿಕ ಷೇರುಪೇಟೆ ಚೇತರಿಕೆ...! - Corona virus

ಕೊರೊನಾ ಆತಂಕದ ಬೆನ್ನಲ್ಲೇ ಹೂಡಿಕೆದಾರರು, ತಮ್ಮ ಹಣ ವಾಪಸ್​ ಪಡೆಯಲು ಮುಗಿಬಿದ್ದಿದ್ದರಿಂದ ಮುಂಬೈ ಷೇರುಪೇಟೆ ಶೇ 10 ರಷ್ಟು ಕುಸಿತ ಕಂಡು ಹೂಡಿಕೆದಾರರ ಹಣವನ್ನ ಬರಿದು ಮಾಡಿದೆ. ಭಾರಿ ನಷ್ಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಷೇರುಪೇಟೆ ವ್ಯವಹಾರ ಆರಂಭವಾಗಿದ್ದು, ಸಹಜ ಸ್ಥಿತಿಯತ್ತ ಮರಳಿದೆ. ಭಾರಿ ಕುಸಿತದ ಬಳಿಕ ಚೇತರಿಕೆ ಕಂಡಿದೆ. ಸುಮಾರು 450 ಅಂಕ ಏರಿಕೆ ದಾಖಲಿಸಿದೆ.

Corona virus
ಮುಂಬೈ ಷೇರುಪೇಟೆ
author img

By

Published : Mar 13, 2020, 9:57 AM IST

Updated : Mar 13, 2020, 10:55 AM IST

ಮುಂಬೈ: ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಕೊರೊನಾ ವೈರಸ್​​ ಸಂಬಂಧಿಸಿದಂತೆ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳಲ್ಲಿ ಮತ್ತೆ ತಲ್ಲಣ ಸೃಷ್ಟಿಯನ್ನುಂಟು ಮಾಡಿದೆ. ಇಂದು ಬೆಳಗ್ಗೆ ವ್ಯವಹಾರ ಆರಂಭಿಸುತ್ತಿದ್ದಂತೆ ಮತ್ತೆ 3ಸಾವಿರ ಅಂಕಗಳಷ್ಟು ಕಸಿದು 29.850 ಅಂಕಗಳಿಗೆ ಬಂದು ತಲುಪಿತ್ತು.

Corona virus
ಮುಂಬೈ ಷೇರುಪೇಟೆ

ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಶೇ 10 ರಷ್ಟು ಕುಸಿತ ಕಂಡು ಹೂಡಿಕೆದಾರ ಮೇಲೇಳದಂತೆ ಮಾಡಿದೆ. ಕೊರೊನಾ ಆತಂಕದ ಬೆನ್ನಲ್ಲೇ ಹೂಡಿಕೆದಾರರು, ತಮ್ಮ ಹಣ ವಾಪಸ್​ ಪಡೆಯಲು ಮುಗಿಬಿದ್ದಿದ್ದರಿಂದ ಮುಂಬೈ ಷೇರುಪೇಟೆ ಶೇ 10 ರಷ್ಟು ಕುಸಿತ ಕಂಡು ಹೂಡಿಕೆದಾರರ ಹಣವನ್ನ ಬರಿದು ಮಾಡಿದೆ.

ಭಾರಿ ನಷ್ಟದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯ ವ್ಯವಹಾರವನ್ನ 45 ನಿಮಿಷಗಳ ಕಾಲ ಸ್ಥಗಿತ ಮಾಡಲಾಗಿತ್ತು.

ಇನ್ನು ಅಮೆರಿಕದ ನಾಸ್ಡಾಕ್​​ 750 ಅಂಕಗಳನ್ನ ಕಳೆದುಕೊಂಡು 7201 ಅಂಕಗಳಿಗೆ ತಲುಪಿದೆ. ಡಾಜೋನ್ಸ್​​​​ 2352 ಅಂಕಗಳ ಭಾರಿ ಕುಸಿತ ಕಂಡು ನಡುಗಿ ಹೋಗಿದೆ. ಇದು ಕೇವಲ ಭಾರತ ಷೇರು ಮಾರುಕಟ್ಟೆ ಕಥೆ ಅಲ್ಲ ಬಹುತೇಕ ಜಾಗತಿಕ ಷೇರು ಮಾರುಕಟ್ಟೆಗಳ ಕಥೆ ಎಂಬುದು ಸಾಬೀತಾಗಿದೆ.

ಕಳೆದ ಕೆಲ ದಿನಗಳಲ್ಲಿ ಷೇರುಪೇಟೆ ಬರೋಬ್ಬರಿ 10-13 ಸಾವಿರ ಅಂಕಗಳ ನಷ್ಟ ಹೊಂದಿದ್ದು, 25- 30 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಯಾವೆಲ್ಲ ಷೇರುಗಳು ಕುಸಿತವಾಗಿದೆ ಅನ್ನೋದನ್ನ ನೋಡೋದಾರೆ?

ಹೆಚ್​ಸಿಎಲ್​​​​​ 76 ರೂ.
ಟೆಕ್​ ಮಹೆಂದ್ರ 97 ರೂ.
ಕೋಟಕ್​ ಮಹೇಂದ್ರ 219 ರೂ.
ಟಾಟಾ ಕನ್ಸೆಲ್ಟೆನ್ಸಿ254 ರೂ.
ಇಂಡಸ್​ ಇಂಡ್​111ರೂ.
ಆ್ಯಕ್ಸಿಸ್​ ಬ್ಯಾಂಕ್​ - 75 ರೂ.

ಹೀಗೆ ಸಾಲು ಸಾಲು ಪ್ರಮುಖ ಷೇರುಗಳ ಭಾರಿ ನಷ್ಟ ಹೊಂದಿವೆ.

45 ನಿಮಿಷ ಸ್ಥಗಿತದ ಬಳಿಕ ಷೇರುಪೇಟೆ ಆರಂಭವಾಗಿದ್ದು, ಭಾರಿ ಇಳಿಕೆಯಿಂದ ಚೇತರಿಕೆ ಹಾದಿ ಹಿಡಿದಿದೆ. 11 ಗಂಟೆ ವೇಳೆ ಸೆನ್ಸೆಕ್ಸ್​ ಸುಮಾರು 450 ಅಂಕಗಳಷ್ಟು ಏರಿಕೆ ದಾಖಲಿಸಿದ್ದರೆ, ನಿಫ್ಟಿ 125ಕ್ಕೂ ಹೆಚ್ಚು ಅಂಕ ಚೇತರಿಕೆ ಕಂಡುಕೊಂಡು ವ್ಯವಹಾರ ನಿರತವಾಗಿತ್ತು.

Last Updated : Mar 13, 2020, 10:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.