ETV Bharat / business

ಖಜಾನೆ ಭರ್ತಿಗೆ ಕ್ಯಾಸಿನೊ, ರೇಸ್​ ಕೋರ್ಸ್​, ಲಾಟರಿಯತ್ತ ದೃಷ್ಟಿ ನೆಟ್ಟ ಕೇಂದ್ರ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರ, ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇ, ಗೋವಾ ಸಾರಿಗೆ ಸಚಿವ ಮೌವಿನ್ ಗೋಡಿನ್ಹೋ, ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮಾಯಿ ಮತ್ತು ತಮಿಳುನಾಡು ಹಣಕಾಸು ಸಚಿವ ಪಿ ತ್ಯಾಗರಾಜನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

GST
GST
author img

By

Published : May 26, 2021, 5:04 PM IST

ನವದೆಹಲಿ: ಕ್ಯಾಸಿನೊ, ಆನ್‌ಲೈನ್ ಗೇಮಿಂಗ್ ಪೋರ್ಟಲ್ ಮತ್ತು ರೇಸ್ ಕೋರ್ಸ್‌ಗಳ ಸೇವೆಗಳ ಮೌಲ್ಯಮಾಪನ ಮಾಡಿ, ಅವುಗಳಿಗೆ ಎಷ್ಟರ ಮಟ್ಟಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಬಹುದು ಎಂಬುದನ್ನು ಪರಿಶೀಲಿಸಲು ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯ ಸಚಿವರುಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.

ಗುಜರಾತ್ ಡೆಪ್ಯುಟಿ ಸಿಎಂ ನಿತಿನ್ ಪಟೇಲ್ ಅವರು ಕರೆದ ಏಳು ಸದಸ್ಯರ ಸಮಿತಿಯು ಈ ಸೇವೆಗಳ ಉತ್ತಮ ಮೌಲ್ಯಮಾಪನಕ್ಕಾಗಿ ಕಾನೂನು ನಿಬಂಧನೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಿದೆಯೇ ಎಂಬುದನ್ನೂ ಸಹ ಪರಿಶೀಲಿಸಲಿದೆ.

ಸಚಿವರ ತಂಡವು ಕ್ಯಾಸಿನೊಗಳು, ರೇಸ್ ಕೋರ್ಸ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಪೋರ್ಟಲ್‌ಗಳು ಒದಗಿಸುವ ಸೇವೆಗಳ ಮೌಲ್ಯಮಾಪನ ಮತ್ತು ಕ್ಯಾಸಿನೊದಲ್ಲಿ ಕೆಲವು ವಹಿವಾಟುಗಳ ತೆರಿಗೆಯ ಬಗ್ಗೆ ಪರಿಶೀಲಿಸಲಿದೆ. ಈಗಿನ ಕಾನೂನು ನಿಬಂಧನೆಗಳು ಮತ್ತು ನ್ಯಾಯಾಲಯಗಳ ಆದೇಶಗಳನ್ನು ಉಲ್ಲೇಖಿಸಲಿದೆ ಎಂದು ಹೇಳಿದೆ.

ಅಂತಹ ಮೌಲ್ಯಮಾಪನ ನಿಬಂಧನೆಗಳ ಆಡಳಿತವನ್ನು ಸಹ ಇದು ಪರಿಶೀಲಿಸುತ್ತದೆ. ಮೌಲ್ಯಮಾಪನದ ಪರ್ಯಾಯ ವಿಧಾನವನ್ನು ಶಿಫಾರಸು ಮಾಡಲಿದೆ. ಲಾಟರಿಯಂತಹ ಇತರ ರೀತಿಯ ಸೇವೆಗಳ ಮೇಲೆ ಅಂತಹ ಮೌಲ್ಯಮಾಪನದ ಪ್ರಭಾವವನ್ನು ವಿಮರ್ಶಿಸುತ್ತದೆ.

ಓದಿ: ಆಧುನಿಕ ಅಪ್ಲಿಕೇಶನ್‌ಗಳಿಗೆ ಅಗ್ಗದ ARM ಆಧಾರಿತ ಕಂಪ್ಯೂಟಿಂಗ್ ಪ್ರಕಟಿಸಿದ ಒರಾಕಲ್!

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರ, ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇ, ಗೋವಾ ಸಾರಿಗೆ ಸಚಿವ ಮೌವಿನ್ ಗೋಡಿನ್ಹೋ, ಕರ್ನಾಟಕ ಗೃಹ ಸಚಿವ ಬಸವರಾಜ ಬೊಮಾಯಿ ಮತ್ತು ತಮಿಳುನಾಡು ಹಣಕಾಸು ಸಚಿವ ಪಿ. ತ್ಯಾಗರಾಜನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಸಮಿತಿ ತನ್ನ ವರದಿಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಮಂತ್ರಿಗಳನ್ನು ಒಳಗೊಂಡ ಜಿಎಸ್​ಟಿ ಮಂಡಳಿಗೆ ಆರು ತಿಂಗಳ ಒಳಗೆ ಸಲ್ಲಿಸುತ್ತದೆ.

ಸಾಂಕ್ರಾಮಿಕ ಅವಧಿಯಲ್ಲಿ ಕ್ಯಾಸಿನೊ ಸೇರಿದಂತೆ ಆನ್‌ಲೈನ್ ಗೇಮಿಂಗ್ ವಲಯವು ಭಾರಿ ಸಂಖ್ಯೆಯ ಬಳಕೆದಾರರ ಗಮನ ಸೆಳೆದಿದೆ, ಸಾಕಷ್ಟು ಹೂಡಿಕೆಗಳ ಹರಿವು ಸಹ ಕಂಡಿದೆ ಎಂದು ಎಎಂಆರ್‌ಜಿ ಮತ್ತು ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.

ಆನ್‌ಲೈನ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ಹೊಸ ಹಂತಗಳಲ್ಲಿವೆ. ಇದು ತೆರಿಗೆ ಮತ್ತು ಮೌಲ್ಯಮಾಪನದ ಸುತ್ತ ಬಗೆಹರಿಸಲಾಗದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಡೀ ಉದ್ಯಮಕ್ಕೆ ದೊಡ್ಡ ಸವಾಲನ್ನು ಒಡ್ಡುತ್ತದೆ. ಸೇವೆಗಳ ಮೌಲ್ಯಮಾಪನದ ಸುತ್ತಲಿನ ಅನಿಶ್ಚಿತತೆಯನ್ನು ಅರ್ಥಮಾಡಿಕೊಳ್ಳಲು, ಪರೀಕ್ಷಿಸಲು ಮತ್ತು ಪರಿಹರಿಸಲು ಈಗ ಸರ್ಕಾರ ಸಮಿತಿ ರಚಿಸಿದೆ ಎಂದರು.

ಪ್ರಸ್ತುತ, ಕ್ಯಾಸಿನೊ, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ನ ಸೇವೆಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಸಮಿತಿ ತನ್ನ ವರದಿ ಸಲ್ಲಿಸಿದ ಬಳಿಕ ಮೌಲ್ಯಮಾಪನ ವಿಧಾನವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.