ಮುಂಬೈ: ಏಷ್ಯನ್ ಮಾರುಕಟ್ಟೆಗಳ ಏರಿಳಿತಗಳ ನಡುವೆ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 335 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಲಾಭ ಗಳಿಸಿವೆ.
ಬಿಎಸ್‌ಇ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 335.30 ಪಾಯಿಂಟ್‌ಗಳು ಅಥವಾ ಶೇಕಡಾ 0.56ರಷ್ಟು ಏರಿಕೆಯಾಗಿ 59,937.14 ಪಾಯಿಂಟ್ಗಳಲ್ಲಿ ವಹಿವಾಟು ನಡೆಸುತ್ತಿದೆ. ಅದರ ಜೊತೆಗೆ ನಿಫ್ಟಿ 101.80 ಪಾಯಿಂಟ್‌ಗಳು ಅಥವಾ ಶೇಕಡಾ 0.57 ರಷ್ಟು ಏರಿಕೆ ಕಂಡಿದ್ದು, 17,847.70 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್ನಲ್ಲಿ ಟೈಟಾನ್ ಅತಿ ಹೆಚ್ಚು ಗಳಿಕೆ ಕಂಡಿದ್ದು, ಇದರ ಬೆಳವಣಿಗೆ ಶೇಕಡಾ 3ಕ್ಕೆ ಏರಿಕೆಯಾಗಿದೆ. ಟೈಟಾನ್ ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್, ಪವರ್‌ಗ್ರಿಡ್, ಕೋಟಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ಗಳಿವೆ. ಮತ್ತೊಂದೆಡೆ, ಎಚ್‌ಡಿಎಫ್‌ಸಿ ಲಿಮಿಟೆಡ್ , ಇನ್ಫೋಸಿಸ್, ಡಾ.ರೆಡ್ಡೀಸ್, ಎಂ ಆ್ಯಂಡ್ ಎಂ ಮತ್ತು ಮಾರುತಿ ಕಂಪನಿಗಳು ಲಾಭ ಗಳಿಕೆಯಲ್ಲಿ ಹಿಂದುಳಿದಿವೆ.
ಹಿಂದಿನ ಅವಧಿಯಲ್ಲಿ, 30 - ಷೇರು ಸೂಚ್ಯಂಕವು ( ಟಾಪ್ 30 ಷೇರುಗಳ ಸೂಚ್ಯಂಕ) 621.31 ಪಾಯಿಂಟ್‌ಗಳು ಅಥವಾ 1.03 ಶೇಕಡಾ ಕುಸಿದು 59,601.84ಕ್ಕೆ ಕೊನೆಗೊಂಡಿತ್ತು. ಎನ್‌ಎಸ್‌ಇ ನಿಫ್ಟಿ 179.35 ಪಾಯಿಂಟ್‌ಗಳು ಅಥವಾ ಶೇಕಡಾ 1ರಷ್ಟು ಕುಸಿದು 17,745.90ಕ್ಕೆ ತಲುಪಿದೆ.
ಮತ್ತೊಂದೆಡೆ ಅಂತಾರಾಷ್ಟ್ರೀಯ ತೈಲ ಬೆಲೆಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 0.77ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್ ಬೆಲೆ 82.62 ಅಮೆರಿಕನ್ ಡಾಲರ್ ತಲುಪಿದೆ.
ಇದನ್ನೂ ಓದಿ: iQOO9 ಸಿರೀಸ್ನ ಜಬರ್ದಸ್ತ್ ಗೇಮಿಂಗ್ ಮೊಬೈಲ್ ಶೀಘ್ರ ಭಾರತದ ಮಾರುಕಟ್ಟೆಗೆ