ETV Bharat / business

ಷೇರುಪೇಟೆಯಲ್ಲಿ ಮುಂದುವರಿದ ಕರಡಿ ಕುಣಿತ: ಆರಂಭಿಕ ವಹಿವಾಟಿನಲ್ಲೆ ಸೆನ್ಸೆಕ್ಸ್​ 200 ಅಂಕ ಕುಸಿತ

ಕಳೆದೊಂದು ವಾರದಿಂದ ಷೇರುಪೇಟೆಯಲ್ಲಿ ಕೊಂಚ ಏರಿಕೆ ಕಂಡಿದ್ದ ಸೆನ್ಸೆಕ್ಸ್​ ಈ ವಾರದಲ್ಲಿ ಭಾರಿ ಕುಸಿತ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ನಲ್ಲಿ ಕುಸಿತ ಕಂಡಿದೆ.

ಸೆನ್ಸೆಕ್ಸ್​ 200 ಅಂಕಗಳ ಕುಸಿತ
ಸೆನ್ಸೆಕ್ಸ್​ 200 ಅಂಕಗಳ ಕುಸಿತ
author img

By

Published : Jul 20, 2021, 10:54 AM IST

ಮುಂಬೈ: ಜಾಗತಿಕ ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರಿದಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 200 ಅಂಕಗಳು ಕುಸಿತ ಕಂಡಿದ್ದು, ಶೇಕಡಾ 52,351.79 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿಯಲ್ಲಿ 58.45 ಪಾಯಿಂಟ್​ ಕುಸಿದಿದ್ದು, 15,693.95 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಚ್‌ಸಿಎಲ್ ಟೆಕ್ ಅಗ್ರಸ್ಥಾನದಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಂ ಅಂಡ್ ಎಂ, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಅಲ್ಟ್ರಾಟೆಕ್ ಸಿಮೆಂಟ್, ಏಷಿಯನ್​ ಪೇಂಟ್ಸ್, ಪವರ್ ಗ್ರಿಡ್ ಮತ್ತು ನೆಸ್ಲೆ ಇಂಡಿಯಾ ಕೂಡ ಲಾಭದಲ್ಲಿವೆ.

ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 586.66 ಪಾಯಿಂಟ್ ಕುಸಿದು 52,553.40 ಕ್ಕೆ ತಲುಪಿತ್ತು. ನಿಫ್ಟಿ 171 ಪಾಯಿಂಟ್ ಕುಸಿತ ಕಂಡಿದ್ದು 15,752.40 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ತಾತ್ಕಾಲಿಕ ವಿನಿಮಯ ದತ್ತಾಂಶದ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಸೋಮವಾರ 2,198.71 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಸೋಮವಾರ ಅಮೆರಿಕ ಮಾರುಕಟ್ಟೆ ಡೌ ನಲ್ಲಿ 725 ಅಂಕಗಳ ಕುಸಿತ ಕಂಡಿದ್ದು, 2021 ರಲ್ಲೇ ಅತ್ಯಂತ ಕಳಪೆ ವಹಿವಾಟು ಇದಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳು ಅಪಾಯ ಎದುರಿಸುತ್ತಿವೆ ಎಂದು ಜಿಯೋಜಿತ್​ ಫೈನಾನ್ಷಿಯನ್​ ಸರ್ವಿಸಸ್​​ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯಕುಮಾರ್ ಹೇಳಿದ್ದಾರೆ.

ಸೆನ್ಸೆಕ್ಸ್​, ನಿಫ್ಟಿ ಕುಸಿತಕ್ಕೆ ಕಾರಣ

ಅಮೆರಿಕ ಮತ್ತು ಇಂಗ್ಲೆಂಡ್​ನಲ್ಲಿ ಕೋವಿಡ್​ ಪ್ರಕರಣಗಳಲ್ಲಿ ವ್ಯಾಪಕವಾಗಿ ಏರಿಕೆಯಾದ್ದರಿಂದ ವ್ಯಾಪಾರ, ವಹಿವಾಟು ಕುಸಿತಗೊಂಡಿದೆ. ಶಾಂಘೈ, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊದಲ್ಲಿ ಭಾರಿ ನಷ್ಟದೊಂದಿಗೆ ವಹಿವಾಟು ನಡೆಯುತ್ತಿವೆ.

ಈ ಮಧ್ಯೆ, ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.16 ರಷ್ಟು ಏರಿಕೆ ಕಂಡು 68.73 ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ:LIC ಷೇರು ವಿತರಣೆ ಕಗ್ಗಂಟು: ಟ್ರಿಬ್ಯುನಲ್​ ಮೆಟ್ಟಿಲೇರಿದ ಎಲ್ಐಸಿ ಹೌಸಿಂಗ್ ಫೈನಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.