ETV Bharat / business

ಸತತ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್​: ಇಂದು ಆರಂಭದಲ್ಲೇ 800 ಅಂಕ ಕಳೆದುಕೊಂಡು ತಲ್ಲಣ - ಸತತ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್

ಕಳೆದ ಕೆಲ ದಿನಗಳಿಂದ ಸೆನ್ಸೆಕ್ಸ್​ ಕುಸಿತದ ಹಾದಿ ಹಿಡಿದಿದೆ. ಅಮೆರಿಕನ್​ ಫೆಡರಲ್​ ಬ್ಯಾಂಕ್​​​​ನ ಬಡ್ಡಿ ದರ ಘೋಷಣೆ ಮಾಡಲಿರುವ ಹಿನ್ನೆಲೆಯಲ್ಲಿ ಹಾಗೂ ಷೇರುದಾರರ ಲಾಭಗಳಿಕೆ ಮಾರಾಟದ ಒತ್ತಡದ ಹಿನ್ನೆಲೆಯಲ್ಲಿ ಷೇರುಗಳ ಬೆಲೆಯಲ್ಲಿ ಸತತ ಕುಸಿತ ಕಂಡು ಬರುತ್ತಿದೆ.

Sensex down over 800 points, currently trades at 56,920.26

author img

By

Published : Jan 25, 2022, 10:09 AM IST

Updated : Jan 25, 2022, 10:39 AM IST

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಸತತವಾಗಿ ಕುಸಿತ ಕಾಣುತ್ತಾ ಸಾಗಿದೆ. ಇಂದೂ ಸಹ ಷೇರುಪೇಟೆ ಆರಂಭಿಕ ಆಘಾತ ಅನುಭವಿಸಿದೆ. ಆರಂಭದಲ್ಲಿ 800 ಅಂಕಗಳ ಕುಸಿತ ಕಂಡು 10 ಗಂಟೆ ವೇಳೆಗೆ ನಷ್ಟದ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.

ವಹಿವಾಟು ಆರಂಭಗೊಂಡಾಗ ಬಿಎಸ್​​ಸಿ 856 ಅಂಕಗಳನ್ನು ಕಳೆದುಕೊಂಡು 56,635 ಅಂಕಗಳಲ್ಲಿ ವ್ಯವಹಾರ ಆರಂಭಿಸಿತ್ತು. ಇನ್ನು ನಿಫ್ಟಿ ಕೂಡಾ 250 ಅಂಕಗಳ ಇಳಿಕೆ ಕಂಡು 16898 ಅಂಕಗಳಲ್ಲಿ ವ್ಯವಹಾರ ನಡೆಸುತ್ತಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಿಎಸ್​​ಸಿ ಮಿಡ್​ ಕ್ಯಾಪ್​ ಹಾಗೂ ಸ್ಮಾಲ್​ ಕ್ಯಾಪ್​​ ಸುಮಾರು ಶೇ 2.8 ರಷ್ಟು ಕುಸಿತ ಕಂಡಿವೆ. ಇಷ್ಟೊಂದು ಅನಿಶ್ಚಿತತೆಯ ನಡುವೆ, ಆಕ್ಸಿಸ್​, ಪವರ್​ ಗ್ರಿಡ್​​, ಭಾರತಿ ಏರ್​​ಟೆಲ್​​ ಹಾಗೂ ಟಾಟಾ ಸ್ಟೀಲ್​ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಆದರೆ, ಇನ್ನೊಂದು ಬದಿಯಲ್ಲಿ ಏಷ್ಯನ್​ ಪೇಂಟ್​, ವಿಪ್ರೋ, ಕೊಟಕ್​ ಬ್ಯಾಂಕ್​, ಎಚ್​ಡಿಎಫ್​​ಸಿ, ಎಲ್​ ಅಂಡ್ ಟಿ, ರಿಲಯನ್ಸ್​ ಇಂಡಸ್ಟ್ರಿ, ಅಲ್ಟ್ರಾಟೆಕ್​​​, ಇನ್​​ಫೋಸಿಸ್​ ಸೇರಿದಂತೆ ಪ್ರಮುಖ ಷೇರುಗಳ ಬೆಲೆ ಇಳಿಕೆ ಕಂಡಿವೆ.

10 ಗಂಟೆ ಸುಮಾರಿಗೆ ತುಸು ಚೇತರಿಕೆ ಕಂಡಿರುವ ಷೇರುಪೇಟೆಯಲ್ಲಿ ಬಿಎಸ್​​ಸಿ 243.31 ಅಂಕ ಹಾಗೂ ನಿಫ್ಟಿ 69.55 ಅಂಕಗಳ ನಷ್ಟದೊಂದಿಗೆ ವ್ಯವಹಾರ ನಿರತವಾಗಿತ್ತು.

ಇದನ್ನು ಓದಿ: ವಂಚನೆ ಪ್ರಕರಣ: ಕಾರ್ವಿ ವ್ಯವಸ್ಥಾಪಕ ನಿರ್ದೇಶಕ ಪಾರ್ಥಸಾರಥಿ ಬಂಧಿಸಿದ ಇಡಿ

Last Updated : Jan 25, 2022, 10:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.